‘ಮುಂಬಯಿ ಬಳಿ ಗಾಝಾಪಟ್ಟಿ ?’ ಈ ಕುರಿತು ವಿಶೇಷ ಸಂವಾದ !
ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿನ ಭಿಬಂಡಿ ತಾಲೂಕಿನಲ್ಲಿ ಪಡಘಾ – ಬೋರಿವಲಿ ಗ್ರಾಮದಲ್ಲಿ ರಾಷ್ಟ್ರೀಯ ತನಿಖಾ ದಳವು ತನಿಖೆ ನಡೆಸಿತು. ಇದರಲ್ಲಿ ಬಂಧಿಸಿರುವ ಸಾಕಿಬ ನಾಚನ ಮತ್ತು ಅವನ ಸಹಚರರಿಗೆ ಪಾಕಿಸ್ತಾನ, ಇರಾಕ್ ಮತ್ತು ಸಿರಿಯಾ ಮುಂತಾದ ದೇಶದಿಂದ ಅವರಿಗೆ ಆರ್ಥಿಕ ಸಹಾಯ ನೀಡಲಾಗುತ್ತದೆ, ಎಂಬ ಶಂಕೆ ವ್ಯಕ್ತವಾಗಿತ್ತು. ಪಡಘಾ – ಬೋರಿವಲಿ ಈ ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿ ರಾಷ್ಟ್ರೀಯ ತನಿಖಾ ದಳದ 15 ಪೊಲೀಸ್ ಅಧಿಕಾರಿ ಮತ್ತು 400 ಸ್ಥಳೀಯ ಪೊಲೀಸರು ಅಲ್ಲಿ ಹೋಗಿ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ದೃಢವಾದ ಸಾಕ್ಷಿ ದೊರೆತ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಯಿತು. ಆದ್ದರಿಂದ ಭವಿಷ್ಯದಲ್ಲಿ ನಡೆಯುವ ದಾಳಿ ಅಥವಾ ಅಹಿತಕರ ಘಟನೆಗಳು ನಡೆಯುವುದನ್ನು ತಪ್ಪಿಸುವಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಯಶಸ್ಸು ದೊರೆಯಿತೆಂದು ಹೇಳಬಹುದು. 2002 ಮುಂಬಯಿ ಬಾಂಬ್ ಸ್ಫೋಟದಲ್ಲಿ ಶಿಕ್ಷೆ ಅನುಭವಿಸಿರುವ ಭಯೋತ್ಪಾದಕ ಸಾಕಿಬ ನಾಚನ ಇವನಿಗೆ ಶಿಕ್ಷೆ ಪೂರ್ಣ ಆಗುವ ಮೊದಲೇ ಬಿಡುಗಡೆಗೊಳಿಸಲಾಯಿತು. ಜೀವಾವಧಿ ಶಿಕ್ಷೆ ನೀಡಿರುವ ಭಯೋತ್ಪಾದಕರಿಗೆ ಜೈಲಿನಿಂದ ಬಿಡುಗಡೆಗೆ ನ್ಯಾಯಾಧೀಶರು ಮತ್ತು ಸುರಕ್ಷಾ ವ್ಯವಸ್ಥೆಯವರು ಅನುಮತಿ ನೀಡಬಾರದೆಂದು ಕಠಿಣ ಕಾನೂನು ಭಾರತ ಸರಕಾರವೇ ರೂಪಿಸಬೇಕು, ಎಂದು ನಿವೃತ್ತ ಪೊಲೀಸ ಮಹಾಸಂಚಾಲಕರಾದ ಶ್ರೀ. ಪ್ರವೀಣ ದೀಕ್ಷಿತ ಇವರು ಆಗ್ರಹಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಮುಂಬಯಿ ಬಳಿ ಗಾಝಾಪಟ್ಟಿ ? ಈ ಕುರಿತು ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ದಿಲ್ಲಿಯ ವಕ್ತಾರರಾದ ಶ್ರೀ. ನರೇಂದ್ರ ಸುರ್ವೆ ಇವರು ಅವರ ಜೊತೆಗೆ ಸಂವಾದ ನಡೆಸಿದರು.
ಶ್ರೀ. ದೀಕ್ಷಿತ ಇವರು ಮಾತು ಮುಂದುವರೆಸಿ, ಅಮೇರಿಕಾದಂತ ದೇಶದಲ್ಲಿ ಜೀವಾವಧಿ ಅಥವಾ 50 ರಿಂದ 100 ವರ್ಷ ಜೈಲಿನಲ್ಲಿ ಶಿಕ್ಷೆ ವಿಧಿಸಿರುವ ಅಪರಾಧಿಗಳ ಶಿಕ್ಷೆ ಕಡಿಮೆಗೊಳಿಸುವುದಿಲ್ಲ. ಜಾಮೀನು, ಪೆರೋಲ್ ಅಥವಾ ಇತರ ಕಾರಣದಿಂದ ಭಯೋತ್ಪಾದಕರ ಶಿಕ್ಷೆ ಕಡಿಮೆ ಮಾಡಬಾರದು; ಕಾರಣ ಅವರು ಜೈಲಿನಿಂದ ಹೊರಬಂದ ನಂತರ ಮತ್ತೆ ಅದೇ ಕೃತ್ಯಗಳನ್ನೇ ಮಾಡುವರು ! ಭಯೋತ್ಪಾದಕರನ್ನು ಜೈಲಿನಲ್ಲಿರಿಸಿ ಅವರು ಸಂಪೂರ್ಣ ಶಿಕ್ಷೆಯನ್ನು ಅವಧಿ ಭೋಗಿಸಬೇಕು. ಅನೇಕ ಮುಸಲ್ಮಾನ ಯುವಕರ ಬ್ರೈನ್‌ವಾಶ್ ಮಾಡಿರುವುದರಿಂದ ಅವರು ಸುಶಿಕ್ಷಿತರಿದ್ದರು ಅವರು ಭಯೋತ್ಪಾದಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬರುತ್ತದೆ. ಭೀಮಂಡಿ ಸಹಿತ ಭಾರತದಲ್ಲಿ ಎಲ್ಲೇ ಭಯೋತ್ಪಾದಕ ಅಥವಾ ತಪ್ಪಾದ ಕೃತ್ಯ ಕಂಡರೆ ನಾಗರೀಕರು ಪೊಲೀಸ ಆಡಳಿತಕ್ಕೆ ಮುಂದಿನ ಕ್ರಮ ಕೈಗೊಳ್ಳುವುದಕ್ಕಾಗಿ ಮಾಹಿತಿ ನೀಡಬೇಕೆಂದು ಶ್ರೀ . ದೀಕ್ಷಿತ ಇವರು ಕರೆಯನ್ನೂ ನೀಡಿದರು.
ವಿಶ್ವ ಹಿಂದೂ ಪರಿಷತ್ತಿನ ಕಲ್ಯಾಣ ವಿಭಾಗದ ಸಚಿವ ಶ್ರೀ. ಮನೋಜ ರಾಯಚ ಇವರು, 2012 ರಲ್ಲಿ ಸಾಕಿಬ ನಾಚನ ಗುಂಪಿನಿಂದ ಹಿಂದುತ್ವದ ಕಾರ್ಯ ಮಾಡುವ 3 ಪ್ರಮುಖರ ಹತ್ಯೆ ಮಾಡಿದ್ದರು. ಭೀಮಂಡಿ ತಾಲೂಕಿನಲ್ಲಿ ಪಡಘಾ ಬೋರಿವಲಿ ಗ್ರಾಮದಲ್ಲಿ ಭಾರತದ ಸ್ವಾತಂತ್ರ್ಯಕ್ಕೆ 75 ವರ್ಷ ಪೂರ್ಣ ಆಗಿರುವ ಪ್ರಯುಕ್ತ ಸ್ವಾತಂತ್ರ್ಯ ಸೈನಿಕರ ಬಗ್ಗೆ ಫಲಕ ಹಾಕುವುದಕ್ಕೂ ಇಲ್ಲಿಯ ಕಟ್ಟರ ಮುಸಲ್ಮಾನರು ವಿರೋಧಿಸಿದರು. ಈ ಗ್ರಾಮಕ್ಕೆ ಅವರು ಅಲ್ ಶಾಮ್ ಎಂದು ಇಸ್ಲಾಮಿ ಹೆಸರು ನೀಡಿದ್ದಾರೆ. ಇಲ್ಲಿ ಹಮಾಸ್ ಇಸಿಸ್ ನ ಬಾವುಟ ಮೆರವಣಿಗೆ ಮಾಡುತ್ತಾರೆ. ಭಿವಂಡಿ ತಾಲೂಕಿನಲ್ಲಿ ಪಡಘಾ ಬೋರಿವಲಿ ಮತ್ತು ಹತ್ತಿರದ ಗ್ರಾಮದಲ್ಲಿ ಇಸ್ಲಾಮಿಕ್ ಸ್ಟೇಟ್ ಮಾಡುವದಕ್ಕಾಗಿ ಶಸ್ತ್ರಾಸ್ತ್ರಗಳ ಪ್ರಶಿಕ್ಷಣ ನೀಡಲಾಗುತ್ತದೆ. ಹಿಂದೆ ಭಿವಂಡಿ ತಾಲೂಕಿನಲ್ಲಿ ಪಡಘಾ ಬೋರಿವಲಿ ಮತ್ತು ಹತ್ತಿರದ ಗ್ರಾಮದಲ್ಲಿ ಹಿಂದೆ ಪೊಲೀಸರು ಕೂಡ ಬರಲು ಹೆದರಿದ್ದರು. ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ.