ಅರುಣಾಚಲ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಆದಿವಾಸಿಗಳ ಧರ್ಮಾಂತರ !

ಧರ್ಮಾಂತರದಿಂದ ಆದಿವಾಸಿಗಳ ಗುರುತು ಅಪಾಯದಲ್ಲಿ !

ಇಟಾನಗರ (ಅರುಣಾಚಲ ಪ್ರದೇಶ) – ಅರುಣಾಚಲ ಪ್ರದೇಶದಲ್ಲಿ ಆದಿವಾಸಿಗಳ ಧರ್ಮಾಂತರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲೇ ರಾಜ್ಯದಲ್ಲಿರುವ ಆದಿವಾಸಿಗಳ ಮೂಲ ಗುರುತು ನಷ್ಟಗೊಂಡು ಅವರು ಕ್ರಿಶ್ಚಿಯನ್ನರಾಗಿರುವರು. ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ 2001 ರಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ ಶೇ. 18.72 ರಷ್ಟು ಇತ್ತು. ಈ ಸಂಖ್ಯೆ ವರ್ಷ 2011 ರಲ್ಲಿ ಹೆಚ್ಚಳವಾಗಿ ಶೇ. 30.26 ರಷ್ಟು ಆಗಿದೆ. ಇದರಲ್ಲಿ ಬಹುತೇಕ ಆದಿವಾಸಿಗಳಾಗಿದ್ದಾರೆ. ಇನ್ನೊಂದೆಡೆ ಮುಸಲ್ಮಾನರ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗುತ್ತಿದೆ. 2001 ರಲ್ಲಿ ಶೇ. 1.88 ರಷ್ಟು ಇದ್ದ ಮುಸಲ್ಮಾನರ ಜನಸಂಖ್ಯೆ 2011 ರಲ್ಲಿ ಶೇಕಡಾ 1.95 ರಷ್ಟು ಆಗಿದೆ.

1. ‘ಇಂಡಿಜಿನಸ್ ಫೇತ್ ಅಂಡ್ ಕಲ್ಚರಲ್ ಸೊಸೈಟಿ ಆಫ್ ಅರುಣಾಚಲ ಪ್ರದೇಶ’ (ಐಎಫ್‌ಸಿಎಸ್‌ಎಪಿ) ಅಧ್ಯಕ್ಷ ಕಟುಂಗ ವಾಹಗೆ ಇವರು ಮಾತನಾಡಿ, ನಮ್ಮ ಜನರು ಹಿಂದೂ ಮತ್ತು ಕ್ರಿಶ್ಚಿಯನ್ನರು ಆಗಿದ್ದಾರೆ ಎಂದು ಹೇಳಿದ್ದಾರೆ. ಕೆಲವರು ಈಗ ಮುಸ್ಲಿಮರು ಆಗಿದ್ದಾರೆ. ಧರ್ಮಾಂತರವನ್ನು ತಡೆಯಲು ಮತ್ತು ಬುಡಕಟ್ಟು ಸಂಸ್ಕೃತಿಯನ್ನು ಸಂರಕ್ಷಿಸಲು ಐ.ಎಫ್.ಸಿ.ಎಸ್.ಎ.ಪಿ. ಅನ್ನು ಸ್ಥಾಪಿಸಲಾಗಿದೆ. ನಮ್ಮ ಸಂಘಟನೆಯು 24 ವರ್ಷಗಳಿಂದ ಸ್ಥಳೀಯ ಸಂಸ್ಕೃತಿ ಉಳಿಸುವ ಅಭಿಯಾನವನ್ನು ನಡೆಸುತ್ತಿದೆ.ಇದಕ್ಕಾಗಿ, ಪ್ರತಿ ವರ್ಷ ಡಿಸೆಂಬರ್ 1 ರಂದು `ಆದಿಮ ಆಸ್ತಾ ದಿನ’ ಆಚರಿಸಲಾಗುತ್ತದೆ ಎಂದು ಹೇಳಿದರು.

2. ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನಾಖಾ ಹಿನಾ ನಬಾಮ ಇವರು ಮಾತನಾಡಿ ಆದಿವಾಸಿಗಳ ಧರ್ಮಾಂತರ ಚಿಂತಾಜನಕವಾಗಿದೆ ಎಂದು ಹೇಳಿದರು. ಪ್ರಾರಂಭದಲ್ಲಿ ನಮ್ಮ ಜನರಿಗೆ ಪ್ರತಿಯೊಂದು ವಿಷಯದಲ್ಲಿಯೂ ಈಶ್ವರನಿದ್ದಾನೆ ಎಂದು ವಿಶ್ವಾಸವಿತ್ತು, ಏಕದೇವೋಪಾಸನೆಯನ್ನು ಪ್ರಚಾರ ಮಾಡುವವರು ಇಲ್ಲಿನ ಸಮಾಜದ ಮೇಲೆ ಬಹಳ ಪ್ರಭಾವ ಬೀರಿದ್ದಾರೆ. ಮತಾಂತರಗೊಂಡವರು ಈಗ ನಮ್ಮ ಸಂಸ್ಕೃತಿಯನ್ನು ದ್ವೇಷಿಸುತ್ತಾರೆ. ಈಗಲೂ ಕೆಲವರು ದುಃಖ ಮತ್ತು ರೋಗದಿಂದ ಮುಕ್ತಿ ಪಡೆಯಲು ಧರ್ಮಾಂತರಗೊಳ್ಳುತ್ತಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಉತ್ತರ ಭಾರತದಲ್ಲಿ ಚರ್ಚ್ ಸಂಸ್ಥೆಗಳಿಂದ ಆದಿವಾಸಿ ಹಿಂದೂಗಳ ಮತಾಂತರದ ಕೆಲಸ ವೇಗವಾಗಿ ನಡೆಯುತ್ತಿದೆ. ಇದನ್ನು ನಿಲ್ಲಿಸುವುದಿದ್ದಲ್ಲಿ, ಇಂತಹ ಸಂಸ್ಥೆಗಳಿಗೆ ಸಿಗುವ ವಿದೇಶಿ ದೇಣಿಗೆಗಳ ಪರವಾನಿಗೆಯನ್ನು ರದ್ದುಗೊಳಿಸುವುದರೊಂದಿಗೆ ಸರಕಾರವು ಅವುಗಳನ್ನು ವಿಸರ್ಜಿಸಿ, ಧರ್ಮಾಂತರಗೊಳಿಸುವವರನ್ನು ಜೈಲಿಗೆ ಅಟ್ಟುವುದು ಆವಶ್ಯಕವಾಗಿದೆ!