‘ನನ್ನ ಬಳಿಯಿಂದ ಸಿಕ್ಕಿರುವ 354 ಕೋಟಿ ರೂಪಾಯಿ ಹಣ ನನ್ನದಲ್ಲ, ನಮ್ಮ ಸಂಸ್ಥೆಯದ್ದು !’(ಅಂತೆ)- ಜಾರ್ಖಂಡ್ ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಇವರ ಸ್ಪಷ್ಟೀಕರಣ

ರಾಂಚಿ (ಜಾರ್ಖಂಡ್) – ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ರಾಜ್ಯಸಭೆಯ ಸಂಸದ ಧೀರಜ ಸಾಹು ಅವರ 10 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ 354 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿಕೊಂಡಿತ್ತು. ಈ ಪ್ರಕರಣದಲ್ಲಿ 10 ದಿನಗಳ ಬಳಿಕ ಸಂಸದ ಧೀರಜ್ ಸಾಹು ಮಾಧ್ಯಮಗಳೆದುರಿಗೆ ಬಂದು ಸ್ಪಷ್ಟನೆ ನೀಡಿದ್ದಾರೆ. ಅವರು ಮಾತನಾಡಿ, `ಈ ಎಲ್ಲ ಹಣ ನನಗೆ ಅಥವಾ ಕಾಂಗ್ರೆಸ್ ಪಕ್ಷಕ್ಕಾಗಳೀ ಸೇರಿದ್ದಲ್ಲ, ನನ್ನ ಕುಟುಂಬ ಮತ್ತು ಸಂಸ್ಥೆಯದ್ದಾಗಿದೆ. ಅವರು ಪ್ರತಿಯೊಂದು ವಿಷಯಕ್ಕೂ ಲೆಕ್ಕ ಕೊಡುತ್ತಾರೆ ಎಂದು ಹೇಳಿದರು’.

ಸಾಹು ತಮ್ಮ ಮಾತನ್ನು ಮುಂದುವರಿಸಿ, ಇದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ. ನಾನು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ. ನಾನು ಈ ಎಲ್ಲದಕ್ಕೂ ಲೆಕ್ಕವನ್ನು ಕೊಡುತ್ತೇನೆ. ಕೆಲವೇ ದಿನಗಳಲ್ಲಿ ನಾನು ಎಲ್ಲವನ್ನೂ ಜನತೆಯ ಎದುರಿಗೆ ಇಡುತ್ತೇನೆ. ತದನಂತರ ಎಲ್ಲರಿಗೂ ಇದು ಕಪ್ಪು ಹಣವಾಗಿದೆಯೇ ಇಲ್ಲವೇ ? ಎಂದು ತಿಳಿಯುವುದು. ನಮ್ಮ ಪ್ರತಿಯೊಂದು ವ್ಯವಹಾರ ನನ್ನ ಕುಟುಂಬದ ಹೆಸರಿನಲ್ಲಿದೆ. ನಾವು 6 ಜನ ಸಹೋದರರು ಮತ್ತು ಅವರ ಮಕ್ಕಳು. ಎಲ್ಲರೂ ವ್ಯವಹಾರದಲ್ಲಿದ್ದೇವೆ. ನಮ್ಮದು 100 ವರ್ಷಗಳ ಹಿಂದಿನ ವ್ಯವಹಾರವಾಗಿದೆ. ಎಲ್ಲಾ ಮದ್ಯ ಮಾರಾಟವನ್ನು ನಗದು ರೂಪದಲ್ಲಿ ಮಾಡಲಾಗುತ್ತದೆ. ಈ ಹಣ ಮಾರಾಟದಿಂದ ಬಂದಿರುವ ಹಣವಾಗಿದೆ. ಇದು ಸಂಪೂರ್ಣವಾಗಿ ನಮ್ಮ ಸಂಸ್ಥೆಗೆ ಸೇರಿದ ಹಣವಾಗಿದೆ. ಈ ಹಣ ಅಕ್ರಮ ಹಣವಾಗಿದೆಯೆಂದು, ಇದುವರೆಗೂ ಆದಾಯ ತೆರಿಗೆ ಇಲಾಖೆಯು ಹೇಳಿಲ್ಲ. ಈ ಸಂದರ್ಭದಲ್ಲಿ ನನ್ನನ್ನು ಯಾವಾಗ ವಿಚಾರಣೆಗೆ ಕರೆಯುತ್ತಾರೆಯೋ, ಆಗ ನಾನು ಸಂಪೂರ್ಣ ಲೆಕ್ಕವನ್ನು ನೀಡುತ್ತೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಸರಕಾರಿ ನಿಯಮಗಳ ಪ್ರಕಾರ, ಮನೆಯಲ್ಲಿ ಅಪಾರ ಪ್ರಮಾಣದ ನಗದು ಇಡುವುದು ದೊಡ್ಡ ಅಪರಾಧವಾಗಿರುವಾಗ, 354 ಕೋಟಿ ರೂಪಾಯಿ ನಗದು ಹಣವನ್ನು ಇಡುವುದೇ ದೊಡ್ಡ ಅಪರಾಧವಾಗಿದೆ. ಒಂದು ವೇಳೆ ಇದು ಕಪ್ಪು ಹಣವಾಗಿಲ್ಲದಿದ್ದರೆ, ಅದನ್ನು ಬ್ಯಾಂಕಿನಲ್ಲಿ ಏಕೆ ಇಡಲಿಲ್ಲ ? ಎನ್ನುವುದು ಪ್ರಾಥಮಿಕ ಪ್ರಶ್ನೆಯಾಗಿದೆ. ಆದುದರಿಂದ ಸಾಹೂ ಇಂತಹ ಸ್ಪಷ್ಟೀಕರಣವನ್ನು ನೀಡಿ ಜನತೆಯನ್ನು ಮತ್ತು ಆದಾಯ ತೆರಿಗೆ ಇಲಾಖೆಯನ್ನು ಮೂರ್ಖರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ.