Bulldozer : ಭಾಜಪ ಕಾರ್ಯಕರ್ತನ ಕೈ ಮುರಿದ ಫಾರೂಕ್ ಮನೆಯ ಮೇಲೆ ಬುಲ್ಡೋಜರ್ !

ಮಧ್ಯಪ್ರದೇಶ ಸರಕಾರದಿಂದ ಕಾರ್ಯಾಚರಣೆ

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭಾಜಪ ಮೋಹನ ಯಾದವ್ ಅವರು ಕೂಡ ‘ಬುಲ್ಡೋಜರ್’ ಮೂಲಕ ಕ್ರಮ ಕೈಗೊಳ್ಳುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಅವರ ಕಾಲಾವಧಿಯಲ್ಲಿ, ಗಲಭೆಕೋರರ ಅಕ್ರಮ ಮನೆಗಳ ಮೇಲೆ ಬುಲ್ಡೋಜರ್ ಬಳಸಿ ಕ್ರಮ ಕೈಕೊಳ್ಳಲಾಗುತ್ತಿತ್ತು. ಈಗ ಭಾಜಪ ಕಾರ್ಯಕರ್ತರಾಗಿದ್ದ ದೇವೇಂದ್ರ ಠಾಕೂರ ಇವರ ಕೈ ಕತ್ತರಿಸಿದ್ದ ಫಾರೂಖ ರೈನ ಉರ್ಫ ಮಿನ್ನಿ ಇವನ ಮನೆಯ ಮೇಲೆ ಆಡಳಿತ ಬುಲ್ಡೋಜರ ಚಲಾಯಿಸಿದೆ. ರಾಜಧಾನಿಯ ಜನತಾ ಕಾಲನಿ ಸಂಖ್ಯೆ 11 ರಲ್ಲಿ ಫಾರೂಖನ ಮನೆಯಿತ್ತು.

ಡಿಸೆಂಬರ 5 ರಂದು ಮಧ್ಯಪ್ರದೇಶ ವಿಧಾನಸಭೆಯ ಚುನಾವಣೆಯ ತೀರ್ಪಿನ ಬಳಿಕ ಫಾರೂಕ ದೇವೆಂದ್ರ ಠಾಕೂರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಇದರಲ್ಲಿ ಠಾಕೂರ ಇವರ ಮುಂಗೈ ಕತ್ತರಿಸಲ್ಪಟ್ಟಿತು. ದೇವೇಂದ್ರನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಪ್ರಕರಣದಲ್ಲಿ ಫಾರೂಖನೊಂದಿಗೆ ಸಮೀರ, ಅಸ್ಲಮ್, ಶಾಹರೂಖ ಮತ್ತು ಬಿಲಾಲ ಇವರ ಮೇಲೆಯೂ ದೂರು ದಾಖಲಿಸಲಾಗಿದ್ದು, ಅವರನ್ನು ಮೊದಲೇ ಬಂಧಿಸಲಾಗಿದೆ. ಫಾರೂಕ ಮೇಲೆ ಹಬೀಬಗಂಜ ಪೊಲೀಸ ಠಾಣೆಯಲ್ಲಿ ಈ ಹಿಂದೆಯೂ ಅನೇಕ ಅಪರಾಧ ಪ್ರಕರಣಗಳು ದಾಖಲಾಗಿವೆ.

ಸಂಪಾದಕೀಯ ನಿಲುವು

ಅನೇಕ ಮತಾಂಧ ಗಲಭೆಕೋರರ ಅಕ್ರಮ ಮನೆಗಳ ಮೇಲೆ ಬುಲ್ಡೋಜರ್ ಚಲಿಸುವ ಕ್ರಮವು ಅನೇಕ ಭಾಜಪ ಆಡಳಿತವಿರುವ ರಾಜ್ಯಗಳಲ್ಲಿ ಮಾಡಲಾಗುತ್ತಿದೆ. ಮೂಲದಲ್ಲಿ ಇಂತಹ ಅಕ್ರಮ ಮನೆಗಳನ್ನು ಕಟ್ಟಲು ಅನುಮತಿಯನ್ನು ಹೇಗೆ ನೀಡಲಾಗುತ್ತಿದೆಯೆನ್ನುವುದೇ ಪ್ರಶ್ನೆಯಾಗಿದೆ. ಆದ್ದರಿಂದ ಇದಕ್ಕೆ ಜವಾಬ್ದಾರರಾಗಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು !