
‘ಒಮ್ಮೆ ಓರ್ವ ಧರ್ಮಪ್ರೇಮಿಗಳು ಪರಾತ್ಪರ ಗುರು ಡಾ. ಆಠವಲೆ ಇವರಿಗೆ ಮುಂದಿನ ಪ್ರಶ್ನೆಯನ್ನು ಕೇಳಿದರು, ”ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು; ಆದರೆ ಆ ದೃಷ್ಟಿಯಲ್ಲಿ ನಮ್ಮ ಸಿದ್ಧತೆಯು ಕಡಿಮೆ ಇದೆ. ‘ನಮ್ಮ ಬಳಿ ಆವಶ್ಯಕವಾಗಿರುವ ಸಾತ್ತ್ವಿಕ ಜನರ ಸಂಖ್ಯಾಬಲವಿಲ್ಲ, ಹಣವಿಲ್ಲ ಮತ್ತು ಧರ್ಮದ ಪ್ರಸಾರಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವಿಲ್ಲ’, ಇಂತಹ ಪರಿಸ್ಥಿತಿಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಹೇಗೆ ಆಗುವುದು ?’’ ಎಂದು ಕೇಳಿದರು. ಅದಕ್ಕೆ ಪರಾತ್ಪರ ಗುರು ಡಾಕ್ಟರರು, ”ನಮ್ಮ ಪರವಾಗಿ ಭಗವಾನ ಶ್ರೀಕೃಷ್ಣನಿದ್ದಾನೆ. ಆದ್ದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯು ಆಗುವುದು’’ ಎಂದು ಹೇಳಿದರು.

ಪರಾತ್ಪರ ಗುರು ಡಾಕ್ಟರರ ಇಷ್ಟು ಸುಂದರ ಮತ್ತು ಒಂದೇ ವಾಕ್ಯದಲ್ಲಿನ ಉತ್ತರವನ್ನು ಕೇಳಿ ನನಗೆ ಭಾವಜಾಗೃತಿಯಾಯಿತು. ಈ ಪ್ರಸಂಗದಿಂದ ಪರಾತ್ಪರ ಗುರು ಡಾಕ್ಟರರಲ್ಲಿ ಶ್ರೀಕೃಷ್ಣನ ಮೇಲಿರುವ ‘ಪೂರ್ಣ ಶ್ರದ್ಧೆ ಮತ್ತು ಭಕ್ತಿ’ ಕಂಡುಬರುತ್ತದೆ. ಈ ಪ್ರಸಂಗದಲ್ಲಿ ನನ್ನ ಮನಸ್ಸಿನಲ್ಲಿ ಮುಂದಿನ ವಿಚಾರವಾಯಿತು, ‘ಮಹಾಭಾರತದ ಯುದ್ಧದಲ್ಲಿ ದುರ್ಯೋಧನನ ಬಳಿ ಅಪಾರ ಸೈನ್ಯವಿತ್ತು. ಮತ್ತು ಪಾಂಡವರ ಪರವಾಗಿ ಕೇವಲ ಭಗವಾನ ಶ್ರೀಕೃಷ್ಣನಿದ್ದನು. ಶ್ರೀಕೃಷ್ಣನು ‘ಪೂರ್ಣಾವತಾರ’ ಮತ್ತು ‘ಸರ್ವಶಕ್ತಿವಂತ’ನಾಗಿರುವುದರಿಂದ ಅವನ ಕೃಪೆಯಿಂದ ಪಾಂಡವರು ಯುದ್ಧದಲ್ಲಿ ಗೆದ್ದರು, ಅದೇ ರೀತಿ ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆಯೂ ಹೀಗೆಯೇ ಆಗಲಿದೆ’ ಎಂಬ ವಿಚಾರ ಬಂದಿತು.
– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೫.೨೦೨೩)
ವರದಹಳ್ಳಿಯ ಪ.ಪೂ. ಶ್ರೀಧರಸ್ವಾಮಿ ಜಯಂತಿ
ಮಾಣಿಕಪ್ರಭು ಪುಣ್ಯತಿಥಿ
ದತ್ತಾತ್ರೇಯ ಅವತಾರ
ಏಕಮುಖಿ ಮತ್ತು ತ್ರಿಮುಖಿ ದತ್ತಾತ್ರೇಯರ ಮೂರ್ತಿಗಳು !
ಅತೃಪ್ತ ಪೂರ್ವಜರಿಂದಾಗುವ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ದತ್ತನ ಜಪವನ್ನು ಎಷ್ಟು ಮಾಡಬೇಕು ?
ಮಾರ್ಗಶಿರ ಹುಣ್ಣಿಮೆ (ಡಿಸೆಂಬರ್ ೨೬)ಯಂದು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ೫೩ ನೇ ಹುಟ್ಟುಹಬ್ಬದ ನಿಮಿತ್ತ…