ವಾಷಿಂಗ್ಟನ್ (ಅಮೇರಿಕಾ) – `ಪ್ಯೂ ಸಂಶೋಧನಾ ಕೇಂದ್ರ’ ನಡೆಸಿದ ಅಧ್ಯಯನದಲ್ಲಿ ಹದಿಹರೆಯದ ಮಕ್ಕಳು ಹೆಚ್ಚೆಚ್ಚು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ ಎಂದು ಕಂಡು ಬಂದಿದೆ. ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಅರಿವಿದ್ದರೂ ಹೀಗಾಗುತ್ತಿದೆ ಎಂದು ಗಮನಕ್ಕೆ ಬಂದಿದೆ.
1. ಪ್ಯೂ ರಿಸರ್ಚ ಸೆಂಟರ 13 ರಿಂದ 17 ವಯಸ್ಸಿನ 1ಸಾವಿರ 453 ಹದಿಹರೆಯದವರ ಮಕ್ಕಳ ಅಧ್ಯಯನ ಮಾಡಿದಾಗ ಕಂಡು ಬಂದಿರುವುದೇನೆಂದರೆ, ಸಾಧಾರಣವಾಗಿ ಶೇ. 93 ರಷ್ಟು ಹದಿಹರೆಯದ ಮಕ್ಕಳು ಯು-ಟ್ಯೂಬ ಉಪಯೋಗಿಸುತ್ತಾರೆ. ಶೇ. 36ರಷ್ಟು ಹದಿಹರೆಯದವರು ‘ಟಿಕ್ ಟಾಕ್’ ಅನ್ನು ಬಳಸುತ್ತಾರೆ, ಶೇ. 60 ರಷ್ಟು ‘ಸ್ನ್ಯಾಪ್‌ಚಾಟ್’ ಮತ್ತು ಶೇ. 59 ರಷ್ಟು ಜನರು ‘ಇನ್‌ಸ್ಟಾಗ್ರಾಮ್’ ಬಳಸುತ್ತಾರೆ. ಮಕ್ಕಳಲ್ಲಿ ಫೇಸ್ ಬುಕ್ ಉಪಯೋಗಿಸುವ ಪ್ರಮಾಣ 2014-15 ರಲ್ಲಿ ಶೇ.71 ರಷ್ಟಿತ್ತು. ಇದು ಈ ವರ್ಷ ಶೇ.33ಕ್ಕೆ ಕುಸಿದಿದೆ. ಹುಡುಗರಿಗಿಂತ ಹುಡುಗಿಯರು ಟಿಕ್ ಟಾಕ್ ಮತ್ತು ಸ್ನ್ಯಾಪ್‌ಚಾಟ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇತರ ಮಾಧ್ಯಮಗಳನ್ನು ಇಬ್ಬರೂ ಸಮಾನವಾಗಿ ಬಳಸುತ್ತಾರೆ.
2. ಸಾಮಾಜಿಕ ಮಾಧ್ಯಮಗಳ ಬಳಕೆಯ ಹೊರತಾಗಿ, ಹದಿಹರೆಯದವರು ಆನ್‌ಲೈನ್‌ನಲ್ಲಿ ಎಷ್ಟು ಸಮಯವನ್ನು ಕಳೆಯುತ್ತಾರೆ ಅಂದರೆ ಇಂಟರನೆಟ್ ಉಪಯೋಗಿಸುತ್ತಾರೆ ಎಂಬುದನ್ನು ಸಹ ನೋಡಲಾಯಿತು. ಅದರಲ್ಲಿ ಅರ್ಧದಷ್ಟು ಹದಿಹರೆಯದವರು ದಿನಕ್ಕೆ 9 ಗಂಟೆಗಳ ಕಾಲ ಇಂಟರನೆಟ್ ಉಪಯೋಗಿಸುವುದಾಗಿ ಹೇಳಿದರು. ಇದು 2014-15ನೇ ಸಾಲಿನ ಅಧ್ಯಯನಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.
3. ಡಿಜಿಟಲ್ ಸಾಧನಗಳ ಬಳಕೆಯಲ್ಲಿಯೂ ಹೆಚ್ಚಳವಾಗಿದೆ. ಶೇ. 95 ಹದಿಹರೆಯದವರು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ, ಶೇ. 90 ಮಕ್ಕಳು ` ಲ್ಯಾಪ್‌ಟಾಪ್’ ಅಥವಾ ಸಂಗಣಕಗಳನ್ನು ಉಪಯೋಗಿಸುತ್ತಾರೆ. ಶೇ. 83 `ಗೇಮಿಂಗ್ ಕನ್ಸೋಲ್’(ಡಿಜಿಟಲ ಆಟವಾಡುವ ಯಂತ್ರ) ಉಪಯೋಗಿಸುತ್ತಾರೆ ಮತ್ತು ಶೇ. 65 ರಷ್ಟು ಟ್ಯಾಬ್ಲೆಟ್‌ಗಳನ್ನು ಬಳಸುತ್ತಾರೆ.
ಸಂಪಾದಕೀಯ ನಿಲುವುಇಂದಿನ ಯುಗ ಸಾಮಾಜಿಕ ಮಾಧ್ಯಮದ್ದಾಗಿರುವುದರಿಂದ ಇಂತಹ ಬಳಕೆಯು ಆಶ್ಚರ್ಯಕರ ಎಂದು ಹೇಳಲಾಗದಿದ್ದರೂ, `ಅದು ಜೀವನಕ್ಕೆ ಎಷ್ಟು ಅವಶ್ಯಕವಾಗಿದೆ?’, ‘ಅದರ ಅಡ್ಡ ಪರಿಣಾಮಗಳೇನು?’ ಎನ್ನುವ ಬಗ್ಗೆ ಈ ಮಕ್ಕಳಿಗೆ ಯಾರು ತಿಳುವಳಿಕೆ ನೀಡುತ್ತಾರೆ? ಮತ್ತು ` ಇದರಿಂದ ಅವರ ಮನಸ್ಸನ್ನು ಹೇಗೆ ಹೊರಳಿಸುತ್ತಾರೆ?’, ಈ ಪ್ರಶ್ನೆಯಾಗಿದೆ! |