‘ಕಲಂ 370 ಅನ್ನು ಮತ್ತೆ ತರಬಹುದು, ಅದಕ್ಕಾಗಿ ನಮಗೆ 200 ವರ್ಷಗಳು ಬೇಕಾಗಬಹುದಂತೆ !’ – ಫಾರೂಕ್ ಅಬ್ದುಲ್ಲಾ

ಫಾರೂಕ್ ಅಬ್ದುಲ್ಲಾ ಅವರ ಹಗಲುಗನಸು !

ನವದೆಹಲಿ – ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಈ ಹಿಂದೆ ‘ಆರ್ಟಿಕಲ್ 370 ಶಾಶ್ವತವಾಗಿದೆ’ ಎಂದು ತೀರ್ಪು ನೀಡಿದ್ದರು; ಆದರೆ ಈಗ ಅದು ರದ್ದಾಗಿದೆ. ಈಗ ಮುಂದೆ ಏನಾಗುತ್ತದೆ ನೋಡೋಣ. ಜಗತ್ತು ನಂಬಿಕೆಯ ಮೇಲೆ ನಿಂತಿದೆ. ಹೀಗೆ ದಿನಗಳು ಸಹ ಹೋಗುತ್ತವೆ. 370 ನೇ ವಿಧಿಯನ್ನು ತೆಗೆದುಹಾಕಲು ಬಿಜೆಪಿಗೆ 70 ವರ್ಷಗಳು ಬೇಕಾಯಿತು. ಇದನ್ನು ಮರಳಿ ತರಬಹುದು, ಬಹುಶಃ ಇದು ನಮಗೆ 200 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಸಂಸದ ಫಾರೂಕ್ ಅಬ್ದುಲ್ಲಾ ಸುದ್ದಿ ವಾಹಿನಿಯೊಂದರೊಂದಿಗೆ ಮಾತನಾಡುತ್ತಾ ಹೇಳಿದರು. ಕಾಶ್ಮೀರಕ್ಕೆ ಸಂಬಂಧಿಸಿದ 370 ನೇ ವಿಧಿಯನ್ನು ರದ್ದುಗೊಳಿಸಿರುವ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿರುವ ಬಗ್ಗೆ ಕೇಳಿದಾಗ ಅಬ್ದುಲ್ಲಾ ಮೇಲಿನ ಉತ್ತರವನ್ನು ನೀಡಿದರು.

ಸಂಪಾದಕೀಯ ನಿಲುವು

‘370ನೇ ವಿಧಿಯನ್ನು ಮರಳಿ ತರಬಹುದು’, ಎಂದು ಹೇಳುವ ಫಾರೂಕ್ ಅಬ್ದುಲ್ಲಾ, ಕಾಶ್ಮೀರದಲ್ಲಿ ಜಿಹಾದಿ ಮುಸಲ್ಮಾನರಿಂದ ಓಡಿಸಲ್ಪಟ್ಟ ಹಿಂದೂಗಳನ್ನು ಮರಳಿ ಕಾಶ್ಮೀರಕ್ಕೆ ಕರೆತರುವ ಬಗ್ಗೆ ಮೌನವಾಗಿರುವುದನ್ನು ಗಮನದಲ್ಲಿಡಿ !