ಶ್ರೀರಾಮ ದೇವಸ್ಥಾನದ ಅರ್ಚಕರನ್ನು ಅಶ್ಲೀಲವಾಗಿ ತೋರಿಸಿದ ಕಾಂಗ್ರೆಸ್ ಮುಖಂಡನ ಬಂಧನ !

ಕರ್ಣಾವತಿ (ಗುಜರಾತ್) – ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮಲಲ್ಲಾನ ಭವ್ಯ ಮಂದಿರಕ್ಕೆ ಹೊಸದಾಗಿ ನೇಮಕಗೊಂಡ ಅರ್ಚಕ ಮೋಹಿತ ಪಾಂಡೆ ಅವರ ನಕಲಿ ಮತ್ತು ಅಶ್ಲೀಲ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಮತ್ತು ದ್ವೇಷಪೂರ್ಣ ಭಾಷಣ ಮಾಡುವ ಮೂಲಕ ಹಿಂದೂಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ಹಿತೇಂದ್ರ ಪಿಟಾಡಿಯಾ ಅವರನ್ನು ಕರ್ಣಾವತಿ ಪೊಲೀಸರು ಬಂಧಿಸಿದ್ದಾರೆ.

ಹಿತೇಂದ್ರ ಪಿಟಾಡಿಯಾ ಅವರು ಗುಜರಾತ್ ಕಾಂಗ್ರೆಸ್‌ನ ಪರಿಶಿಷ್ಟ ಮೈತ್ರಿಕೂಟದ ಅಧ್ಯಕ್ಷರಾಗಿದ್ದಾರೆ ಮತ್ತು ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ಆಪ್ತರಾಗಿದ್ದಾರೆ. ಪುರುಷನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಛಾಯಾಚಿತ್ರವನ್ನು ಅವರು ‘ಎಕ್ಸ್’ನಲ್ಲಿ ಪ್ರಸಾರ ಮಾಡಿದರು. ಈ ವ್ಯಕ್ತಿ ತಿಲಕ ಮತ್ತು ಶ್ರೀಗಂಧವನ್ನು ಹಚ್ಚಿದ್ದಾನೆ. ಇದು ಶ್ರೀರಾಮ ಮಂದಿರದ ಹೊಸದಾಗಿ ನೇಮಕಗೊಂಡ ಅರ್ಚಕ ಮೋಹಿತ್ ಪಾಂಡೆ ಆಗಿರಬಹುದು ಎಂದು ಹಿತೇಂದ್ರ ಪಿತಾಡಿಯಾ ಹೇಳಿಕೊಂಡಿದ್ದಾರೆ; ಏಕೆಂದರೆ ಬೆಳಕಿಗೆಬಂದ ಚಿತ್ರದಲ್ಲಿಯೂ ಅವರು ಶ್ರೀಗಂಧ ಹಾಗೂ ತಿಲವನ್ನೂ ಹಚ್ಚಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿರೋಧದಿಂದಾಗಿ ಪಿಟಾಡಿಯಾ ನಂತರ ಚಿತ್ರವನ್ನು ತೆಗೆದುಹಾಕಿದ್ದಾರೆ. ಪಿಟಾಡಿಯಾ ಹಿಂದೂಗಳ ಶ್ರದ್ಧೆಗೆ ಧಕ್ಕೆ ತಂದಿದ್ದು, ಆತನನ್ನು ಬಂಧಿಸಬೇಕು ಎಂದು ಹಿಂದೂಗಳು ಆಗ್ರಹಿಸಿದ್ದಾರೆ. ಇದಾದ ನಂತರ ಕರ್ಣಾವತಿ ಪೊಲೀಸರು ಹಿತೇಂದ್ರ ಪಿಟಾಡಿಯಾ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕರ ನಿಲುವು 

* ಕಾಂಗ್ರೆಸ್ಸಿನ ಪರಾಕಾಷ್ಟೆಯ ಹಿಂದೂ ದ್ವೇಷ ! ಕಾಂಗ್ರೆಸ್ ನಾಯಕರು ಹಿಂದೂಗಳಿಗೆ ಸಂಬಂಧಿಸಿದಂತೆ ಮಾತ್ರ ಇಂತಹ ಧೈರ್ಯವನ್ನು ತೋರಿಸುತ್ತಾರೆ; ಏಕೆಂದರೆ ಹಿಂದೂಗಳು ಅಹಿಷ್ಣುಗಳಾಗಿದ್ದಾರೆ. ಬೇರೆ ಪಂಥಗಳಿಗೆ ಸಂಬಂಧಿಸಿದಂತೆ ಇಂತಹ ಕೃತ್ಯವನ್ನು ತೋರಿಸಿದ್ದರೆ ಕಾಂಗ್ರೆಸಿಗರಿಗೆ ಏನಾಗುತ್ತಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ !