ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರಿಂದ ಒಟ್ಟು 354 ಕೋಟಿ ನಗದು ವಶ !

ನೋಟುಗಳ ಎಣಿಕೆಗೆ 5 ದಿನ ಬೇಕಾಯಿತು !

ರಾಂಚಿ (ಜಾರ್ಖಂಡ್) – ಕಳೆದ 5 ದಿನಗಳಿಂದ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸುತ್ತಿದ್ದ ದಾಳಿ ಇದೀಗ ಅಂತ್ಯಗೊಂಡಿದೆ. ಈವರೆಗೆ 354 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಈ ನೋಟುಗಳನ್ನು ಎಣಿಸಲು 5 ದಿನಗಳು ಬೇಕಾಯಿತು. ಇದು ಸರಕಾರಿ ಸಂಸ್ಥೆಯೊಂದು ಒಂದೇ ದಾಳಿಯಲ್ಲಿ ವಶಪಡಿಸಿಕೊಂಡ ಅತಿದೊಡ್ಡ ಮೊತ್ತ ಎಂದು ಹೇಳಲಾಗುತ್ತದೆ.

ಆದಾಯ ತೆರಿಗೆ ಇಲಾಖೆಯು ಈ ನೋಟುಗಳನ್ನು 176 ಬ್ಯಾಗ್‌ಗಳಲ್ಲಿ ಪ್ಯಾಕ್ ಮಾಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಾಲಂಗೀರ್, ಸಂಬಲ್‌ಪುರ ಮತ್ತು ತಿತಲಾಗಡ ಶಾಖೆಗಳಿಗೆ ಕೊಂಡೊಯ್ದಿದೆ. ಈ ನೋಟುಗಳನ್ನು ಎಣಿಸಲು ಒಟ್ಟು 25 ಯಂತ್ರಗಳು ಮತ್ತು 50 ಬ್ಯಾಂಕ್ ಉದ್ಯೋಗಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಹಣ ಎಲ್ಲಿಂದ ಬಂತು?, ಇದು ಈಗ ತನಿಖೆ ನಡೆಯುತ್ತಿದೆ.

(ಸೌಜನ್ಯ: India Today)

ಸಂಪಾದಕರ ನಿಲುವು

ಇಂತಹ ಭ್ರಷ್ಟ ನಾಯಕರೇ ತುಂಬಿರುವ ಕಾಂಗ್ರೆಸ್ ಅನ್ನು ಸರಕಾರ ಈಗ ನಿಷೇಧಿಸಬೇಕು !