ಎಲ್ಲ ಸಾಧಕರ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಪರಾತ್ಪರ ಗುರು ಡಾಕ್ಟರರು ಸಾಧಕಿಯಿಂದ ಸಕಾಲದಲ್ಲಿ ಸೇವೆ ಪೂರ್ಣಗೊಳಿಸದ ತಪ್ಪನ್ನು ತೋರಿಸಿಕೊಡುವುದು ಮತ್ತು ಆ ಪ್ರಸಂಗದಲ್ಲಿ ದೇವರು ಅವಳನ್ನು ರಕ್ಷಿಸಿದ ಬಗ್ಗೆ ಅವಳ ಮನಸ್ಸಿನಲ್ಲಿ ಕೃತಜ್ಞತೆ ಮೂಡುವುದು

‘ಹಿಂದೊಮ್ಮೆ ಒಂದು ಕ್ಷೇತ್ರದ ಕೆಲವು ಗಣ್ಯ ವ್ಯಕ್ತಿಗಳು ಪ.ಪೂ. ಡಾಕ್ಟರರನ್ನು ಭೇಟಿಯಾಗಲು ಬರುವವರಿದ್ದರು. ‘ಅವರನ್ನು ಭೇಟಿಯಾಗುವಾಗ ಯಾವ ವಿಷಯವನ್ನು ಹೇಳುವುದು?’, ಎಂದು ಪ.ಪೂ. ಡಾಕ್ಟರರು ಗಣಕಯಂತ್ರದಲ್ಲಿ ಲೇಖನವನ್ನು ಬೆರಳಚ್ಚು ಮಾಡಿದ್ದರು. ಪ.ಪೂ. ಡಾಕ್ಟರರು ಸೂಚಿಸಿದ ತಿದ್ದುಪಡಿಗಳನ್ನು ನಾನು ಲೇಖನದಲ್ಲಿ ಮಾಡುತ್ತಿದ್ದೆನು. ಆ ಕಡತವನ್ನು ಅರ್ಥಮಾಡಿಕೊಳ್ಳಲು ತುಂಬಾ ಕಠಿಣವಿತ್ತು. ೨-೩ ದಿನಗಳಿಂದ ಈ ಸೇವೆಯು ನಡೆದಿತ್ತು. ಆ ಸೇವೆಯನ್ನು ಮಾಡುವಾಗ ನನಗೆ ಬಹಳ ಆಧ್ಯಾತ್ಮಿಕ ತೊಂದರೆಯಾಗುತ್ತಿತ್ತು. ಅದರಲ್ಲಿ ನಾನು ಏನು ಸುಧಾರಣೆ ಮಾಡುತ್ತಿದ್ದೇನೆ ಎನ್ನುವುದೇ ನನಗೆ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ನನಗೆ ಆಗುತ್ತಿರುವ ತೊಂದರೆಯನ್ನು ನಾನು ಪ.ಪೂ. ಡಾಕ್ಟರರಿಗೆ ತಿಳಿಸಿದಾಗ ಅವರು ‘ಹೌದು ! ತೊಂದರೆ ಬಹಳ ಹೆಚ್ಚಾಗಿದೆ. ನನಗೂ ತುಂಬಾ ತೊಂದರೆಯಾಗುತ್ತಿದೆ”, ಎಂದರು. ತದನಂತರ ಸಾಧಕರೊಬ್ಬರು, ‘ಇಂದಿನ ಭೇಟಿ ರದ್ದಾಗಿದೆ. ಇಂದಿನ ಬದಲು ನಾಡಿದ್ದು ಭೇಟಿ ಇರಲಿದೆ’ ಎಂದು ತಿಳಿಸಿದರು. ಆಗ ಪ.ಪೂ. ಡಾಕ್ಟರರು ”ಇಂದಿನ ಸತ್ಸಂಗರದ್ದಾಗಿದೆ. ನಮ್ಮ ಸೇವೆ ಪೂರ್ಣವಾಗಿಲ್ಲವೆಂದು ದೇವರು ನಮ್ಮ ಕಾಳಜಿ ವಹಿಸಿದ್ದಾನೆ. ನಮಗೆ ಒಟ್ಟು ೨ ದಿನಗಳವರೆಗೆ ಸಮಯವನ್ನು ಹೆಚ್ಚಿಸಿಕೊಟ್ಟಿದ್ದಾನೆ; ಆದರೆ ನಾವು ಮಾತ್ರ ಸೇವೆ ಪೂರ್ಣಗೊಳಿಸುವಲ್ಲಿ ಕಡಿಮೆ ಬಿದ್ದೆವು’ ಎಂದು ಹೇಳಿದರು. ಸ್ವಲ್ಪ ಸಮಯದ ನಂತರ ಅವರು, ”ಇದಂತೂ ದೇವರ ಲೀಲೆಯೇ ಆಗಿದೆ !’’ ಎಂದರು. ನಂತರ ನನಗೆ ”ದೇವರು ಈ ತಪ್ಪಿನಿಂದ ನನ್ನನ್ನು ರಕ್ಷಿಸಿರುವ ವಿಷಯದಲ್ಲಿ ಮನಸ್ಸಿನಲ್ಲಿ ಕೃತಜ್ಞತೆ ಮೂಡಿತು.’’

– ಕು. ತೃಪ್ತಿ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫.೮.೨೦೨೩)