ಮೋದಿ ಸರಕಾರದ ಅವಧಿಯಲ್ಲಿ ದೇಶದಲ್ಲಿ ಗಲಭೆಗಳ ಘಟನೆಗಳಲ್ಲಿ ಶೇಕಡಾ 50 ರಷ್ಟು ಇಳಿಕೆ !

ನವ ದೆಹಲಿ – ಮೋದಿ ಸರಕಾರದ ಕಾಲಾವಧಿಯಲ್ಲಿ, ದೇಶದಲ್ಲಿ ನಡೆಯುವ ಗಲಭೆಗಳ ಪ್ರಮಾಣ ಶೇಕಡಾ 50 ರಷ್ಟು ಇಳಿಕೆ ಕಂಡಿದೆ. ಭಾಜಪ ಆಡಳಿತವಿರುವ ರಾಜ್ಯಗಳಲ್ಲಿ ಶೇ.90ರಷ್ಟು ಗಲಭೆಗಳು ಕಡಿಮೆಯಾಗಿವೆ. ಆದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಶೇ.30ರಷ್ಟು ಗಲಭೆಗಳು ನೊಂದಣಿಯಾಗಿವೆ. ಕಳೆದ ಐದು ವರ್ಷಗಳಲ್ಲಿ ಗಲಭೆಗಳ ಪ್ರಮಾಣ ಕಡಿಮೆಯಾಗುತ್ತಾ ಸಾಗಿದೆ. 2022ರಲ್ಲಿ ದೇಶಾದ್ಯಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಗಲಭೆಗಳು ನಡೆದಿವೆ. ಈ ಮಾಹಿತಿಯನ್ನು ‘ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ’ (ಎನ್‌.ಸಿ.ಆರ್‌.ಬಿ.ಯು) ನೀಡಿದೆ.

1. ಕಳೆದ ಐದು ವರ್ಷಗಳಲ್ಲಿ ಗಲಭೆಗಳ ಪ್ರಮಾಣ ಶೇ. 35 ರಷ್ಟು ಕಡಿಮೆಯಾಗಿದೆ. ಅದೇ ಸಮಯದಲ್ಲಿ, 2021 ಕ್ಕೆ ಹೋಲಿಸಿದರೆ 2022 ರಲ್ಲಿ ಗಲಭೆಗಳ ಸಂಖ್ಯೆ ಶೇ. 9.5 ರಷ್ಟು ಕಡಿಮೆಯಾಗಿದೆ.

2. 2021ರಲ್ಲಿ ದೇಶದಲ್ಲಿ ನಡೆದ ಗಲಭೆಗಳ ಸಂಖ್ಯೆ 41 ಸಾವಿರದ 954 ಇತ್ತು, ಆದರೆ, 2022ರಲ್ಲಿ ದೇಶದಲ್ಲಿ 37 ಸಾವಿರದ 157 ಗಲಭೆಗಳು ಸಂಭವಿಸಿವೆ.

3. ಭಾಜಪ ಆಡಳಿತವಿರುವ ರಾಜ್ಯಗಳು ಗಲಭೆಗಳನ್ನು ಕಡಿಮೆ ಮಾಡುವಲ್ಲಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವಲ್ಲಿ ಉತ್ತಮ ಕೆಲಸ ಮಾಡಿವೆ. ಆದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಹಿಂದುಳಿದಿವೆಯೆಂದು ಸಾಬೀತಾಗಿದೆ.

4. ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶ, ಗುಜರಾತ, ಮಧ್ಯಪ್ರದೇಶ ಮತ್ತು ಅಸ್ಸಾಂ ರಾಜ್ಯಗಳು ಗಲಭೆಗಳನ್ನು ಕಡಿಮೆ ಮಾಡುವಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿವೆ.