‘ಗೋಮೂತ್ರ ರಾಜ್ಯಗಳಲ್ಲಿಯೇ’ ಭಾಜಪ ಗೆಲ್ಲುತ್ತದೆಯಂತೆ ! – ದ್ರಮುಕ ಸಂಸದ ಸೆಂಥಿಲ್ ಕುಮಾರ

ಸಂಸತ್ತಿನಲ್ಲಿ ದ್ರಮುಕ ಸಂಸದ ಸೆಂಥಿಲ್ ಕುಮಾರ ಇವರು ಚುನಾವಣೆಯಲ್ಲಿ ಭಾಜಪ ಗೆದ್ದಿರುವ ಕುರಿತು ಗೋಮಾತೆಯ ಬಗ್ಗೆ ಖೇದಕರ ಹೇಳಿಕೆ !


ನವ ದೆಹಲಿ : ದೇಶದ ಜನರು ಯೋಚಿಸಬೇಕು, ಈ ಭಾಜಪದ ಶಕ್ತಿ ಮುಖ್ಯವಾಗಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವುದರಲ್ಲಿ ಅಡಗಿದೆ, ಅವುಗಳನ್ನು ನಾವು ಸಾಮಾನ್ಯವಾಗಿ ‘ಗೋಮೂತ್ರ ರಾಜ್ಯಗಳು’ ಎಂದು ಕರೆಯುತ್ತೇವೆ ಎಂದು ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಸಂಸತ್ತಿನಲ್ಲಿ ಹೇಳಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಅಥವಾ ಹಿಂದಿ ಬೆಲ್ಟ್ (ಗಡಿಭಾಗದ) ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ಭಾರಿ ಬಹುಮತದೊಂದಿಗೆ ಗೆದ್ದಿರುವ ಬಗ್ಗೆ ಅವರು ಈ ಹೇಳಿಕೆಯನ್ನು ನೀಡಿದರು. ಸೆಂಥಿಲ್ ಕುಮಾರ ಅವರು ಹಿಂದಿ ಬೆಲ್ಟ್‌ನಲ್ಲಿರುವ(ಗಡಿಭಾಗದಲ್ಲಿರುವ) ರಾಜ್ಯಗಳನ್ನು ‘ಗೋಮೂತ್ರ ರಾಜ್ಯ’ ಎಂದು ಸಂಬೋಧಿಸುತ್ತಿರುವುದು ಇದೇ ಮೊದಲಲ್ಲ. ರಾಷ್ಟ್ರೀಯ ಶೈಕ್ಷಣಿಕ ನೀತಿ 2022 ಕುರಿತು ಮಾತನಾಡುವಾಗ ಅವರು ‘ಗೋಮೂತ್ರ’ ಎಂಬ ಶಬ್ದವನ್ನು ಬಳಸಿದ್ದರು.

ಬಿಹಾರದ ಬಿಜೆಪಿ ನಾಯಕ ನವಲ ಕಿಶೋರ ಯಾದವ ಈ ಹೇಳಿಕೆ ಕುರಿತು ಮಾತನಾಡಿ, ಹಿಂದಿ ಭಾಷೆಯ ರಾಜ್ಯಗಳನ್ನು ಈ ರೀತಿ ಉಲ್ಲೇಖಿಸುವವರಿಗೆ ಮಾನಸಿಕ ಚಿಕಿತ್ಸೆ ಮಾಡಬೇಕಾಗುವುದು. ಮುಂಬರುವ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಇಂತಹವರ ಮೇಲೆ ಉಪಚಾರ ಮಾಡಲಾಗುವುದು ಎಂದು ಹೇಳಿದರು.

ಸೆಂಥಿಲ್ ಕುಮಾರ್ ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ! – ಕಾಂಗ್ರೆಸ್

ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಮಾತನಾಡಿ, ಸಂಸತ್ತಿನಲ್ಲಿ ವ್ಯಕ್ತಿಯೊಬ್ಬರು ಏನು ಮಾತನಾಡುತ್ತಾರೆ ? ಎನ್ನುವ ವಿಷಯಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ಇದು ಅವರ ವೈಯಕ್ತಿಕ ಹೇಳಿಕೆಯಾಗಿದೆ, ನಾವು ಗೋಮಾತೆಯನ್ನು ಗೌರವಿಸುತ್ತೇವೆ, ಈ ಬಗ್ಗೆ ನಾನು ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಒಂದು ವೇಳೆ ಭಾಜಪ ಗೋಮೂತ್ರದ ಕಾರಣದಿಂದಲೇ ಗೆಲ್ಲುತ್ತಿದ್ದರೆ, ಅದನ್ನು ಗೋಮಾತೆಯ ಆಶೀರ್ವಾದವೆಂದೇ ತಿಳಿಯಬೇಕಾಗುವುದು. ಸನಾತನ ಧರ್ಮವನ್ನು ನಾಶಮಾಡಲು ಪ್ರಯತ್ನಿಸುವವರ ರಾಜಕೀಯ ವಿನಾಶವಾಗಲಿದೆ ಎನ್ನುವುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು !