ಪಾಟ್ನಾ ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ವಿವಾದದಿಂದ ನಾಡಬಾಂಬ್ ಸ್ಫೋಟ

ಗುಂಡು ಹಾರಾಟ

ಪಾಟಲಿಪುತ್ರ (ಬಿಹಾರ) – ಇಲ್ಲಿನ ಪಾಟ್ನಾ ಕಾಲೇಜಿನಲ್ಲಿ ಡಿಸೆಂಬರ್ 4 ರಂದು ಬೆಳಿಗ್ಗೆ ನಾಡ ಬಾಂಬ್‌ ಎಸೆಯಲಾಯಿತು. ಅಲ್ಲದೆ ಗುಂಡಿನ ದಾಳಿಯನ್ನು ನಡೆಸಿದರು. ಇಲ್ಲಿನ ಮೌಲಾನಾ ಅಬುಲ್ ಹಸನ್ ಅಲಿ ನದ್ವಿ ಅಲ್ಪಸಂಖ್ಯಾತರ ಹಾಸ್ಟೆಲ್ ಮತ್ತು ಇಕ್ಬಾಲ್ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ವಿದ್ಯಾರ್ಥಿಯ ಹೆಸರು ಮಯಂಕ ಆಗಿದ್ದು, ಅವನು ಜಹಾನಾಬಾದ್ ಜಿಲ್ಲೆಯವನಾಗಿದ್ದಾನೆ. ಘಟನೆ ಬಗ್ಗೆ ಮಾಹಿತಿ ಸಿಗುತ್ತಲೇ ಪೊಲೀಸರು ಸ್ಥಳವನ್ನು ತಲುಪಿದರು. ಈ ಪ್ರಕರಣದಲ್ಲಿ ಪೊಲೀಸರು 4 ಆರೋಪಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳದಿಂದ ನಾಡಬಾಂಬನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ಪೊಲೀಸರಿಗೆ ಕಬ್ಬಿಣದ ಸಲಾಕೆ ಮತ್ತು ಲಾಠಿಗಳು ಸಿಕ್ಕಿದವು. ಹಳೆಯ ವಿವಾದದ ಕಾರಣದಿಂದ ಮಿಂಟೂ ಮತ್ತು ಜಾಕ್ಸನ್ ವಿದ್ಯಾರ್ಥಿಗಳು ನದವಿ ಮತ್ತು ಇಕಬಾಲ ಹಾಸ್ಟೆಲ್ ಮೇಲೆ ಬಾಂಬ ಸ್ಫೋಟ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಉಪಪೊಲೀಸ ಅಧೀಕ್ಷಕ ಅಶೋಕ ಸಿಂಹ ಇವರು ಮಾತನಾಡಿ, ಪಾಟ್ನಾ ಕಾಲೇಜಿನ ಪರಿಸರದಲ್ಲಿ ನಡೆದ ಈ ಘಟನೆ ಇದೇ ಮೊದಲನೇಯದೇನಲ್ಲ. ಈ ಹಿಂದೆಯೂ ಇಂತಹುದೇ ಘಟನೆಗಳು ನಡೆದಿವೆ. ಕಾಲೇಜಿನ ಆಡಳಿತ ಮಂಡಳಿಯು ಇಂತಹ ಕಿಡಿಗೇಡಿ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಕಾಲೇಜಿನಿಂದ ವಜಾಗೊಳಿಸಬೇಕು ಎಂದು ಹೇಳಿದರು.

ಇಂತಹ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ. ಎಲ್ಲಿಯವರೆಗೆ ಆರೋಪಿ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಭಂಗದ ಕ್ರಮ ಅಥವಾ ಹೆಸರನ್ನು ತೆಗೆದುಹಾಕುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವುದು ಕಠಿಣವಾಗಿದೆ.

ಸಂಪಾದಕೀಯ ನಿಲುವು

ಬಿಹಾರ ಎಂದರೆ ಜಂಗಲ ರಾಜ ! ಕಾಲೇಜಿನ ವಿದ್ಯಾರ್ಥಿಗಳು ಓದುವ ಬದಲು ಇಂತಹ ಕೃತ್ಯಗಳನ್ನು ಮಾಡುತ್ತಿದ್ದರೆ, ಅವರು ಭವಿಷ್ಯದಲ್ಲಿ ಹೇಗೆ ವರ್ತಿಸುತ್ತಾರೆ ಎಂದು ಸ್ಪಷ್ಟವಾಗಿದೆ !