‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪತಿ’ ಚಿಕಿತ್ಸೆ !’ (ಲೇಖನ ೧೧) !
ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯ ರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆಯನ್ನು ಹೇಗೆ ಮಾಡಬಹುದು ? ಹೋಮಿಯೋಪತಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಬೇಕು ? ಇಂತಹ ವಿಷಯಗಳ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ.
ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ರೋಗಗಳ ಮೇಲೆ ಸ್ವಯಂಚಿಕಿತ್ಸೆ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ಸಂಚಿಕೆ ೨೫/೧೦ ರಲ್ಲಿ ‘ಅಮ್ಲಪಿತ್ತ’ ರೋಗಕ್ಕೆ ತೆಗೆದುಕೊಳ್ಳಬೇಕಾದ ಆರೈಕೆ ಮತ್ತು ಅದಕ್ಕೆ ತೆಗೆದುಕೊಳ್ಳಬೇಕಾದ ಔμÀಧಿಗಳ ಮಾಹಿತಿಯನ್ನು ಓದಿದೆವು. ನೇರವಾಗಿ ಕಾಯಿಲೆಗಳಿಗೆ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಟಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !
ಸಂಕಲನಕಾರರು : ಹೋಮಿಯೋಪಥಿ ಡಾ. ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. (ಸೌ.) ಸಂಗೀತಾ ಭರಮಗುಡೆ.
ವಾರದಲ್ಲಿ ೩ ಕ್ಕಿಂತ ಕಡಿಮೆ ಸಲ ಶೌಚವಾಗುವುದು, ಮಲ ಒಣಗಿರುವುದು ಮತ್ತು ತುಂಬಾ ಗಟ್ಟಿಯಾಗಿರುವುದು, ಮಲವಿಸರ್ಜನೆ ಮಾಡಲು ತೊಂದರೆ ಆಗುವುದು, ಮಲವಿಸರ್ಜನೆ ಮಾಡುವಾಗ ವೇದನೆಗಳಾಗುವುದು, ಹಾಗೆಯೇ ಮಲವಿಸರ್ಜನೆ ಅಪೂರ್ಣ ಆಗಿದೆ ಎಂದು ಅನಿಸುವುದು, ಇದಕ್ಕೆ ‘ಮಲಬದ್ಧತೆ’ ಎಂದು ಹೇಳುತ್ತಾರೆ. ಅಯೋಗ್ಯ ಆಹಾರದ ಅಭ್ಯಾಸವೇ ಮಲಬದ್ಧತೆಗೆ ಮುಖ್ಯ ಕಾರಣ.
೧. ಮಲಬದ್ಧತೆಯನ್ನು ತಪ್ಪಿಸಲು ಮಾಡಬೇಕಾದ ಪ್ರಯತ್ನಗಳು
೧ ಅ. ಮಲ ವಿಸರ್ಜನೆ ಮಾಡಬೇಕೆಂದು ಅನಿಸಿದರೆ ಅದನ್ನು ನಿರ್ಲಕ್ಷಿಸದೇ ತಕ್ಷಣ ಮಲವಿಸರ್ಜನೆಗೆ ಹೋಗಬೇಕು.
೧ ಆ. ಪ್ರತಿದಿನ ಬಾಯಾರಿಕೆ ಆಗುವ ಪ್ರಮಾಣಕ್ಕನುಸಾರ ದಿನಕ್ಕೆ ಕನಿಷ್ಟ ೮-೯ ಗ್ಲಾಸ್ ನೀರು ಕುಡಿಯಬೇಕು.
೧ ಇ. ಪ್ರತಿದಿನ ನಿಮ್ಮ ಕ್ಷಮತೆಗನುಸಾರ ವ್ಯಾಯಾಮ ಮಾಡಬೇಕು.
೧ ಈ. ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಆದಷ್ಟು ಹೆಚ್ಚು ಉಪಯೋಗಿಸಬೇಕು.
೧ ಉ. ಕಾಫಿ ಕುಡಿಯುವುದನ್ನು ನಿಲ್ಲಿಸಬೇಕು.
೨. ಔಷಧಗಳು
೨ ಅ. ನಕ್ಸ್ ವೊಮಿಕಾ (Nux Vomica)
೨ ಅ ೧. ಅತಿಯಾಗಿ ಕಾಫಿ, ಚಹಾ, ಮದ್ಯ ಸೇವಿಸುವುದು, ಹಾಗೆಯೇ ಬೌದ್ಧಿಕ ಒತ್ತಡ ಈ ಕಾರಣಗಳಿಂದ ಉಂಟಾಗುವ ಮಲಬದ್ಧತೆ
೨ ಅ ೨. ಸ್ವಲ್ಪ ಆಹಾರ ಸೇವಿಸಿದರೂ ಹೊಟ್ಟೆ ತುಂಬಿದ ಹಾಗೆ ಅನಿಸುವುದು.
೨ ಅ ೩. ಮಲ ವಿಸರ್ಜನೆಗೆ ಮೇಲಿಂದ ಮೇಲೆ ಹೋಗ ಬೇಕಾಗುವುದು ಮತ್ತು ಹೋದಾಗ ಮಲವಿಸರ್ಜನೆ ಅತ್ಯಲ್ಪವಾಗುವುದು
೨ ಆ. ಅಲ್ಯೂಮಿನಾ (Alumina)
೨ ಆ ೧. ಅಲ್ಯೂಮಿನಿಯಮ್ ಪಾತ್ರೆಗಳಲ್ಲಿ ಆಹಾರ ತಯಾರಿಸುವುದರಿಂದ ಮತ್ತು ಅಲ್ಯೂಮಿನಿಯಮ್ ತಟ್ಟೆಯಲ್ಲಿ ಊಟ ಮಾಡುವುದರಿಂದ ಅಲ್ಯುಮಿನಿಯಮ್‌ನ ಅಂಶ ಹೊಟ್ಟೆಯಲ್ಲಿ ಹೋಗುವುದರಿಂದ ಆಗುವ ಮಲಬದ್ಧತೆ
೨ ಆ ೨. ಶೌಚ ಬಹಳ ಗಟ್ಟಿಯಾಗಿರುವುದರಿಂದ ರೋಗಿಗೆ ಬಹಳ ಹೆಚ್ಚು ಒತ್ತಡವನ್ನು ಹಾಕಬೇಕಾಗುವುದು.
೨ ಆ ೩. ಪ್ರತಿ ೨ ದಿನಗಳಿಗೊಮ್ಮೆ ಮಲವಿಸರ್ಜನೆಯಾಗುವುದು.
೨ ಆ ೪. ಬೆನ್ನಿನಲ್ಲಿ ತೀವ್ರ ಉರಿಉರಿ ವೇದನೆಗಳಾಗುವುದು.
೨ ಇ. ಬ್ರಾಯೋನಿಯಾ ಆಲ್ಬಾ (Bryonia Alba)
೨ ಇ ೧. ಶೌಚ ಒಣಗಿರುವುದು, ಶೌಚ ಗಟ್ಟಿಯಾಗಿರುವುದು, ಶೌಚ ಮಾಡುವಾಗ ಉರಿಉರಿ ಆಗುವುದು.
೨ ಇ ೨. ಮಲಬದ್ಧತೆಯ ಜೊತೆಗೆ ತಲೆನೋವು ಇರುವುದು.
೨ ಇ ೩. ಯಾವಾಗಲೂ ಗಂಟಲು ಒಣಗಿ ಬಹಳ ಬಾಯಾರಿಕೆ ಯಾಗುವುದು, ಬಹಳ ತಡವಾಗಿ ತುಂಬಾ ನೀರು ಕುಡಿಯುವುದು.
೨ ಇ ೪. ಉಷ್ಣ ವಾತಾವರಣದಲ್ಲಿ ಎಲ್ಲ ರೋಗಗಳ ತೊಂದರೆಗಳು ಹೆಚ್ಚಾಗುವುದು.
೨ ಈ. ಓಪಿಯಮ್ (Opium)
೨ ಈ ೧. ಶೌಚವು ಗೋಲಾಕಾರ, ತುಂಬಾ ಗಟ್ಟಿ, ಕಪ್ಪು ಕಲ್ಲುಗಳಂತಾಗುವುದು.
೨ ಈ ೨. ಅನೇಕ ದಿನಗಳ ವರೆಗೆ ಶೌಚಕ್ಕೆ ಹೋಗುವ ಇಚ್ಛೆಯಾಗದಿರುವುದು.
೨ ಈ ೩. ಯಾವಾಗಲೂ ನಿದ್ದೆ ಬರುವುದು.
೨ ಉ. ಪ್ಲಂಬಮ್ ಮೆಟಾಲಿಕಮ್ (Plumbum Metallicum)
೨ ಉ ೧. ಬಣ್ಣದ ಕೆಲಸವನ್ನು ಮಾಡುವ ಕೆಲಸಗಾರರಲ್ಲಿ ಸೀಸದ ವಿμÀಬಾಧೆಯಿಂದಾಗುವ ಮಲಬದ್ಧತೆ
೨ ಉ ೨. ಅಮೃತಶಿಲೆ ಯಂತೆ ಬಿಳಿ ಶೌಚ ಆಗುವುದು.
೨ ಉ ೩. ಹೊಟ್ಟೆಯಲ್ಲಿ ತೀವ್ರ ಜಗ್ಗಿದ ಹಾಗೆ ವೇದನೆಗಳು ಆಗುವುದು, ಹೊಕ್ಕಳು ಒಳಗಡೆ ಬೆನ್ನುಮೂಳೆಯ ಕಡೆಗೆ ಜಗ್ಗುತ್ತಿದೆ ಎಂದು ಅನಿಸುವುದು.
೨ ಉ ೪. ಒಸಡುಗಳ ಬದಿಗಳು ನೀಲಿ ಆಗಿರುವುದು.
೨ ಊ. ಸ್ಯಾನಿಕುಲಾ ಎಕ್ವಾ (Sanicula Acqua)
೨ ಊ ೧. ಮಲಬದ್ಧತೆಯ ರೋಗ ದೀರ್ಘಕಾಲದಿಂದ ಇರುವುದು. (chronic)
೨ ಊ ೨. ೪ – ೫ ದಿನಗಳ ವರೆಗೆ ಶೌಚವಾಗದಿರುವುದು
೨ ಊ ೩. ಶೌಚ ಹೊರಗೆ ಬರಲು ಬಹಳ ಕಠಿಣ ವಾಗುವುದು ಮತ್ತು ಅದಕ್ಕಾಗಿ ಬೆವರು ಬರುವವರೆಗೆ ಒತ್ತಡ ಹಾಕಬೇಕಾಗುವುದು.
೨ ಎ. ಸಲ್ಫರ್ (Sulphur)
೨ ಎ ೧. ಮೇಲಿಂದ ಮೇಲೆ ಶೌಚಕ್ಕೆ ಹೋಗುವ ಇಚ್ಛೆಯಾಗುವುದು; ಆದರೆ ಶೌಚಕ್ಕೆ ಹೋಗಿ ಬಂದ ಮೇಲೆ ಮನಸ್ಸಿಗೆ ಸಮಾಧಾನ ಆಗದಿರುವುದು.
೨ ಎ ೨. ಗಟ್ಟಿ, ಗಂಟುಗಳಿರುವುದು ಮತ್ತು ಕಡಿಮೆ ಪ್ರಮಾಣದಲ್ಲಿ ಶೌಚವಾಗುವುದು.
೨ ಎ ೩. ಗುದದ್ವಾರದ ಸ್ಥಳದಲ್ಲಿ ಉರಿಉರಿ ಆಗುವುದು.
೨ ಎ ೪. ಪ್ರತಿದಿನ ಬೆಳಿಗ್ಗೆ ೧೧ ಗಂಟೆಗೆ ಕೈಕಾಲು ಸೋತು ಹೋದಂತೆ ಅನಿಸುವುದು.
೨ ಏ. ಥುಜಾ ಒಕ್ಸಿಡೆಂಟಾಲಿಸ್ (Thuja Occidentalis)
೨ ಏ ೧. ಮಲ ಗಟ್ಟಿಯಾಗುವುದು, ಕಪ್ಪು ಗುಳಿಗೆಗಳಂತಹ ಮಲ ಬೀಳುವುದು.
೨ ಏ ೨. ಶೌಚ ಹೊರಗೆ ಬಂದು ಮತ್ತೆ ಒಳಗೆ ಹೋಗುವುದು.
೨ ಔ. ಮ್ಯಾಗ್ನೀಶಿಯಮ್ ಮ್ಯುರಿಯಾಟಿಕಮ್ (Magnesium Muriaticum)
೨ ಔ ೧. ಚಿಕ್ಕಮಕ್ಕಳಲ್ಲಿ ಹಲ್ಲು ಬರುವ ಸಮಯದಲ್ಲಿ ಆಗುವ ಮಲಬದ್ಧತೆ.
೨ ಔ ೨. ಶೌಚದಿಂದ ಮೇಕೆಯ ಮಲದಂತಹ ಗಟ್ಟಿ ಮಲ ಹೊರಬೀಳುವುದು.
೨ ಔ ೩. ಮಲವು ಆರಂಭದಲ್ಲಿ ಗಟ್ಟಿ ಮತ್ತು ನಂತರ ಮೃದುವಾಗಿರುವುದು.
‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪತಿ’ ಉಪಾಯ !’
ಈ ಮುಂಬರುವ ಗ್ರಂಥದಲ್ಲಿನ ಆಯ್ದ ಭಾಗಗಳನ್ನು ಪ್ರತಿ ವಾರದ ಸಂಚಿಕೆಯಲ್ಲಿ ಲೇಖನಗಳ ಸ್ವರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಆದರೂ ಸ್ವಉಪಾಯದ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ-ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನಗಳನ್ನು ಆಪತ್ಕಾಲದ ದೃಷ್ಟಿಯಿಂದ ಸಂಗ್ರಹಿಸಬೇಕು. ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ದೊರಕದಿದ್ದರೆ, ಅಂತಹ ಸಮಯದಲ್ಲಿ ಈ ಲೇಖನಗಳನ್ನು ಓದಿ ತಮ್ಮ ಮೇಲೆ ಉಪಾಯ ಮಾಡಿಕೊಳ್ಳಬಹುದು.