ದೇವಸ್ಥಾನಗಳು ಪ್ರಸಾರ ಮಾಧ್ಯಮಗಳನ್ನು ಸಮಯಕ್ಕೆ ತಕ್ಕಂತೆ ಬಳಸಿಕೊಂಡು ಸಮಾಜಕ್ಕೆ ತಮ್ಮ ವಿಷಯವನ್ನು ತಲುಪಿಸಬೇಕು ! – ಶ್ರೀ. ನೀಲೇಶ್ ಖರೆ, ಸಂಪಾದಕರು  ‘ಝೀ 24 ತಾಸ’

ಶ್ರೀ. ನೀಲೇಶ್ ಖರೆ

ಹೆಚ್ಚೆಚ್ಚು ಜನರನ್ನು ತಲುಪುವ ನಿಟ್ಟಿನಲ್ಲಿ ನಾವು ‘ಜಾತ್ರೆ, ಯಾತ್ರೆಯ ವಾರ್ತೆಗಳನ್ನು ಸುದ್ದಿ ವಾಹಿನಿಯಲ್ಲಿ ಹೇಗೆ ಪ್ರಸಾರ ಮಾಡಬಹುದು ?’ ಎಂಬ ಬಗ್ಗೆ ವರದಿ ಮಾಡಲು ಪ್ರಯತ್ನಿಸಿದೆವು. ಉತ್ಸವಗಳಂತಹ ಅನುಷ್ಠಾನಗಳ ಮೂಲಕ ಅನೇಕ ಜನರು ಸೇರುತ್ತಾರೆ. ಸನಾತನ ಧರ್ಮದ ವಿಚಾರ ಎಲ್ಲರಿಗೂ ತಲುಪಬೇಕಾದರೆ ಸಮೂಹ ಮಾಧ್ಯಮಗಳ ಮೂಲಕ ಹೆಚ್ಚು ಸುಲಭವಾಗುತ್ತದೆ. ಈಗಿನ ಕಾಲದಲ್ಲಿ ಯುವ ಪೀಳಿಗೆಯನ್ನು ಸೆಳೆಯಬಲ್ಲ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

1. ದೇವಾಲಯ ಸಂಘಟನೆ ಅಥವಾ ಕಾರ್ಯಕರ್ತರ ಮೂಲಕ 3 ನಿಮಿಷಗಳವರೆಗಿನ ಒಂದು ಚಲನಚಿತ್ರವನ್ನು ತಯಾರಿಸಿ ದೂರದರ್ಶನ ಮಾಧ್ಯಮಗಳಿಗೆ ತಲುಪಿಸಿದರೆ ಜಾಗೃತಿಗೆ ಪ್ರಯೋಜನಕಾರಿಯಾಗಿದೆ.

2. ಮಾಧ್ಯಮ ಪ್ರತಿನಿಧಿಗಳು ನಿಮ್ಮಲ್ಲಿಗೆ ತಲುಪದಿದ್ದರೆ, ನೀವು ಪ್ರತಿನಿಧಿಗಳ ಬಳಿಗೆ ಹೋಗುತ್ತೀರಿ; ಯಾಕೆಂದರೆ ಎಲ್ಲರಿಗೂ ಸುದ್ದಿ ಅವಶ್ಯಕತೆ ಇದೆ. ಪತ್ರಿಕೆಗಳಿಗೆ ಸ್ಥಳಾವಕಾಶದ ಮಿತಿಗಳಿವೆ; ಆದರೆ ‘ಸ್ಪೀಡ್ ನ್ಯೂಸ್’ ಮೂಲಕ ನಾವು ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪಬಹುದು ಎಂದು ಹೇಳಿದರು.

3. ಸನಾತನ ಧರ್ಮ, ಹಿಂದೂ ಧರ್ಮದ ವಿಚಾರವನ್ನು ಜಗತ್ತಿಗೆ ತಲುಪಿಸುವುದು ಇಂದು ಅಗತ್ಯವಾಗಿದೆ. ‘ಝೀ ಮೀಡಿಯಾ’ ಈ ಮೂಲಕ ನಾವು ಭಾರತೀಯತೆ, ಹಿಂದುತ್ವದ ವಿಚಾರವನ್ನು ವಿಶ್ವದ ಜನರಿಗೆ ತಲುಪಿಸಲು ಯೋಚಿಸಿದ್ದೇವೆ ಎಂದು ಹೇಳಿದರು.