ಕಾಮುಕ ಮೌಲ್ವಿ !

ಹಮೀರಪುರ (ಉತ್ತರ ಪ್ರದೇಶ) – ಇಲ್ಲಿನ ಕುರಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿಯೊಂದರಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಲ್ವಿ ಮುಂತಜೀರ್ ಆಲಂ ನನ್ನು ಪೊಲೀಸರು ಬಂಧಿಸಿದ್ದಾರೆ. 30 ವರ್ಷದ ಆಲಂ ಮಸೀದಿಯಲ್ಲಿ ಮಕ್ಕಳಿಗೆ ಉರ್ದು ಕಲಿಸುತ್ತಿದ್ದನು. ಈ ಪ್ರಕರಣದಲ್ಲಿ ಸಂತ್ರಸ್ತೆ ಬಾಲಕಿಯ ಪೋಷಕರು ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಕುರಾರ ಪೊಲೀಸರು ಆರೋಪಿ ಮೌಲ್ವಿಯ ವಿರುದ್ಧ ‘ಪೋಕ್ಲೋ’ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ಪ್ರಕಾರ, ಸಂತ್ರಸ್ತೆ 11 ವರ್ಷದ ಬಾಲಕಿ ತನ್ನ ಕಿರಿಯ ಸಹೋದರನೊಂದಿಗೆ ಉರ್ದು ಕಲಿಯಲು ಮಸೀದಿಗೆ ಹೋಗಿದ್ದಳು. ಮೌಲ್ವಿಯು ಸಂತ್ರಸ್ತ ಬಾಲಕಿಯ ಸಹೋದರನನ್ನು ಹೊರಗೆ ಕೂರಿಸಿದನು ಮತ್ತು ಹುಡುಗಿಯನ್ನು ಮಸೀದಿಯಲ್ಲಿನ ಒಂದು ರೂಮಿಗೆ ಕರೆದೊಯ್ದು ಬಾಗಿಲು ಮುಚ್ಚಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯ ಕಿರುಚಾಟ ಕೇಳಿ ಮಸೀದಿಗೆ ಓದಲು ಬಂದಿದ್ದ ಇತರ ಮಕ್ಕಳು ಹೊರಗಿನಿಂದ ಬಾಗಿಲು ಬಡಿದರು. ಬಳಿಕ ಆರೋಪಿ ಮೌಲ್ವಿ ಬಾಲಕಿಯನ್ನು ಬಿಟ್ಟು ಹೋದನು. ಸಂತ್ರಸ್ತೆ ರಕ್ತಸಿಕ್ತಳಾಗಿ ಮನೆಗೆ ಬಂದಾಗ ಕುಟುಂಬಸ್ಥರು ಆಘಾತಕ್ಕೊಳಗಾದರು. ಕುಟುಂಬಸ್ಥರು ಪೊಲೀಸ್ ಠಾಣೆಗೆ ಬಂದು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ