ಚೀನಾಗೆ ಭಾರತೀಯ ನೌಕಾಪಡೆಯ ಮುಖ್ಯಸ್ಥರಿಂದ ಎಚ್ಚರಿಕೆ !
ನವ ದೆಹಲಿ – ಮಹಾಸಾಗರವನ್ನು ಒಂದು ಸಮಾನ ಗುರುತು ಎಂದು ನೋಡಲಾಗುತ್ತದೆ. ಮಹಾಸಾಗರದ ಉಪಯೋಗವನ್ನು ಯಾವುದೇ ದೇಶದ ಕಾನೂನುಬದ್ಧ ಆರ್ಥಿಕ ಆಕಾಂಕ್ಷೆಗಳನ್ನು ಪೂರೈಸಲು ಬಳಸಲಾಗುತ್ತದೆ. ಚೀನಾದ ಹಿಂದೂ ಮಹಾಸಾಗರದಲ್ಲಿಯ ಉಪಸ್ಥಿತಿಯು ಈ ದೃಷ್ಟಿಕೋನದಿಂದ ನ್ಯಾಯಸಮ್ಮತವಾಗಿದ್ದರೂ, ಹಿಂದೂ ಮಹಾಸಾಗರದಲ್ಲಿ ಒಂದು ಸ್ಥಳೀಯ ನೌಕಾದಳದ ಶಕ್ತಿಯ ರೂಪದಲ್ಲಿ, ‘ಅಲ್ಲಿ ಏನು ನಡೆಯುತ್ತಿದೆ?’ ಎಂದು ನಾವು ನಿಗಾ ಇಟ್ಟಿದ್ದೇವೆ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಅವರು ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.
ಅಡ್ಮಿರಲ್ ಕುಮಾರ್ ಅವರು ತಮ್ಮ ಮಾತನ್ನು ಮುಂದುವರಿಸಿ,
1. ಹಿಂದೂ ಮಹಾಸಾಗರದಲ್ಲಿ ಯಾವುದೇ ದೇಶದ ಚಲನವಲನಗಳ ಮೇಲೆ ನಾವು ನಿಗಾ ಇಡುತ್ತೇವೆ ಮತ್ತು ಚೀನಾ ಏನು ಮಾಡುತ್ತಿದೆ ಎಂಬುದನ್ನು ಕೂಡ ನೋಡಲು ಪ್ರಯತ್ನಿಸುತ್ತೇವೆ.
2. ಮಹಾಸಾಗರದಲ್ಲಿ ಉಪಸ್ಥಿತವಿರುವ ದೇಶಗಳು ಯಾವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ? ಮತ್ತು ಅವರ ಉದ್ದೇಶಗಳೇನು ? ಎನ್ನುವ ಕಡೆಗೆ ನಮ್ಮ ದೃಷ್ಟಿ ಇರುತ್ತದೆ.
3. ದೇಶಗಳ ಚಲನವಲನಗಳ ಮೇಲೆ ನಿಗಾ ಇಡಲು ಭಾರತೀಯ ನೌಕಾಪಡೆಯು ಹಡಗುಗಳು, ಜಲಾಂತರ್ಗಾಮಿ ನೌಕೆಗಳು, ವಿಮಾನಗಳು ಮತ್ತು ಮಾನವ ರಹಿತ ವೈಮಾನಿಕ ವಾಹನಗಳನ್ನು ನಿಯೋಜಿಸಿದೆ.
4. ನೌಕಾಪಡೆಯ ಕಾರ್ಯವು ಸಮುದ್ರ ಕ್ಷೇತ್ರದಲ್ಲಿ ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ವ್ಯಾಪಾರವನ್ನು ಉತ್ತೇಜಿಸುವುದು ಆಗಿದೆ ಎಂದು ಹೇಳಿದರು.