ಬೆಂಗಳೂರಿನ 15 ಖಾಸಗಿ ಶಾಲೆಗಳನ್ನು ಸ್ಫೋಟಿಸುವುದಾಗಿ ಬೆದರಿಕೆಪೊಲೀಸರ ತನಿಖೆಯ ನಂತರ ವದಂತಿ ಎಂದು ಬಹಿರಂಗ !ಈ ಬೆದರಿಕೆಯನ್ನು 2022 ರಲ್ಲೂ ನೀಡಲಾಗಿತ್ತು ! |
ಬೆಂಗಳೂರು – ಇಲ್ಲಿನ 15 ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಎಲ್ಲಾ ಶಾಲೆಗಳು ಡಿಸೆಂಬರ್ 1 ರಂದು ಏಕಕಾಲದಲ್ಲಿ ಈ ಮೇಲ್ ಸಿಕ್ಕಿದೆ. ಶಾಲೆಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಶಾಲೆಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಕ್ಕೆ ಕರೆದೊಯ್ದು ಹುಡುಕಾಟ ಆರಂಭಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ತಲುಪಿತು; ಆದರೆ ಏನೂ ಸಿಗಲಿಲ್ಲ. ಈ ಶಾಲೆಗಳಿಗೆ ಕಳುಹಿಸಲಾದ ಇ-ಮೇಲ್‌ನಲ್ಲಿ, ‘ನಮ್ಮ ಗುಲಾಮರಾಗಲು ಅಥವಾ ಅಲ್ಲಾನ ನಿಜವಾದ ಧರ್ಮವನ್ನು ಸ್ವೀಕರಿಸಲು ನಿಮಗೆ ಆಯ್ಕೆ ಇದೆ. ನಾವು ಭಾರತದಾದ್ಯಂತ ಅಲ್ಲಾಹನ ನಿಜವಾದ ಧರ್ಮವನ್ನು ಹರಡುತ್ತೇವೆ. ಇಸ್ಲಾಂ ಅನ್ನು ಸ್ವೀಕರಿಸಿ ಅಥವಾ ಇಸ್ಲಾಂನ ಕತ್ತಿಯಿಂದ ಕತ್ತರಿಸಿಕೊಳ್ಳಿ. ನಾವು ಕಾಫಿರರಿಗೆ ಭೇಟಿಯಾದಾಗ ಅವರ ತಲೆ ಮತ್ತು ಬೆರಳುಗಳನ್ನು ಕತ್ತರಿಸುತ್ತೇವೆ’ ಎಂದು ಹೇಳಿದರು.
1. ಇ-ಮೇಲ್ ನಲ್ಲಿ, ನವೆಂಬರ್ 26 ರಂದು ಅಲ್ಲಾನ ಮಾರ್ಗದಲ್ಲಿ ಹುತಾತ್ಮರು ನೂರಾರು ಮೂರ್ತಿಯನ್ನು ಪೂಜಿಸುವವರನ್ನು ಕೊಂದರು. ಕೈಯಲ್ಲಿ ಚಾಕು ಹಿಡಿದು ಕಾಫಿರರ ಮೇಲೆ ದಾಳಿ ಮಾಡುವುದು ನಿಜವಾಗಿಯೂ ಶಕ್ತಿಯುತ ಅನುಭವವಾಗಿದೆ. ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾಗಲು ನೂರಾರು ಮುಜಾಹಿದ್ದೀನ್‌ಗಳು ಯುದ್ಧಭೂಮಿಗೆ ಹೋಗುತ್ತಿದ್ದಾರೆ. ನೀವು ಅಲ್ಲಾಹನ ಶತ್ರುಗಳಾಗಿದ್ದು ನಾವು ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ.
2. ವಿಶೇಷವೆಂದರೆ 2022 ರಲ್ಲಿ, ಬೆಂಗಳೂರಿನ 15 ಶಾಲೆಗಳು ಇದೇ ರೀತಿಯ ಇ-ಮೇಲ್ ಸಿಕ್ಕಿತ್ತು. ಈ ಇ-ಮೇಲ್‌ನಲ್ಲಿ ‘ಶಾಲಾ ಆವರಣದಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತು’ ಎಂದು ಬೆದರಿಕೆ ಹಾಕಲಾಗಿತ್ತು. ಇದರ ನಂತರ, ಪೊಲೀಸ್ ತಂಡವು ಈ ಶಾಲೆಗಳನ್ನು ಸಂಪೂರ್ಣವಾಗಿ ತನಿಖೆ ಮಾಡಿದೆ; ಆದರೆ ಎಲ್ಲಿಯೂ ಏನೂ ಸಿಗಲಿಲ್ಲ. ಇದು ಕಿಡಿಗೇಡಿಗಳ ಚೇಷ್ಟೆ ಎಂದು ನಂತರ ತಿಳಿಯಿತು.
3. ಪ್ರಸ್ತುತ ಬೆದರಿಕೆಯ ಬಗ್ಗೆ ಬೆಂಗಳೂರು ಪೊಲೀಸರು, ಎಲ್ಲಾ ಶಾಲೆಗಳು ನಗರದ ವಿವಿಧ ಭಾಗಗಳಲ್ಲಿವೆ ಎಂದು ಹೇಳಿದ್ದಾರೆ. ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ. ಬಾಂಬ್ ನ ಮಾಹಿತಿ ತಿಳಿಯುತ್ತಿದ್ದಂತೆಯೇ ವಿದ್ಯಾರ್ಥಿಗಳ ಪೋಷಕರು ಮಕ್ಕಳನ್ನು ಕರೆದುಕೊಂಡು ಬರಲು ಮುಂದಾದರು. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ ವರ್ಷ, ಬೆಂಗಳೂರಿನ 7 ಶಾಲೆಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದಿದ್ದವು; ಆದರೆ ಅವೂ ವದಂತಿಗಳಾಗಿದ್ದವು ಎಂದು ಹೇಳಿದೆ.
4. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರು ಶಾಲೆಗೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ಅವರು, ಟಿವಿಯಲ್ಲಿ ಶಾಲೆಯಲ್ಲಿ ಬಾಂಬ್ ಸುದ್ದಿಯನ್ನು ನೋಡಿದಾಗ ಹೆದರಿದೆ. ಬೆದರಿಕೆಗೆ ಒಳಗಾದ ಕೆಲವು ಶಾಲೆಗಳು ನನ್ನ ಮನೆಯ ಸಮೀಪದಲ್ಲಿವೆ. ಪೊಲೀಸರು ನನಗೆ ಇ-ಮೇಲ್ ತೋರಿಸಿದ್ದಾರೆ. ಇದು ನಕಲಿ ಕಾಣುತ್ತದೆ. ಯಾರೋ ಕಿಡಿಗೇಡಿಗಳು ಇದನ್ನು ಮಾಡಿರಬೇಕು. ನಾವು ಅವರನ್ನು 24 ಗಂಟೆಗಳ ಒಳಗೆ ಹಿಡಿಯುತ್ತೇವೆ ಎಂದು ಹೇಳಿದರು.
‘Will explode the schools if they don’t convert to Islam’: Fifteen schools in Bengaluru get bomb threat, police dismiss it as ‘hoax message’https://t.co/0d76uPjq8w
— OpIndia.com (@OpIndia_com) December 1, 2023
ಸಂಪಾದಕರ ನಿಲುವುಈ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಸಮಗ್ರ ತನಿಖೆ ನಡೆಸಬೇಕು. ಇದೇನು ಕಿಡಿಗೇಡಿತನವೋ ಅಥವಾ ದಾರಿ ತಪ್ಪಿಸಿ ದೊಡ್ಡ ರಕ್ತಪಾತ ಮಾಡುವ ಯತ್ನವೋ ?, ಇದು ಸಾರ್ವಜನಿಕರ ಮುಂದೆ ಬರಬೇಕು! |