ಮಾಲಿನ್ಯದಿಂದಾಗಿ, ಶೇ. 60 ಕ್ಕೂ ಹೆಚ್ಚು ನಾಗರಿಕರು ಮುಂಬಯಿ ಮತ್ತು ದೆಹಲಿ ನಗರಗಳನ್ನು ತೊರೆಯುವ ವಿಚಾರ !

ಮುಂಬಯಿ – ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮುಂಬಯಿ ಮತ್ತು ದೆಹಲಿ ನಗರಗಳ 10 ಜನರಲ್ಲಿ 6 ಜನರು ವಲಸೆ ಹೋಗಲು ಯೋಚಿಸುತ್ತಿದ್ದಾರೆ ಎಂದು ಆರೋಗ್ಯ ಸೇವೆಗಳನ್ನು ಒದಗಿಸುವ ಸಂಸ್ಥೆಯಾದ ‘ಪ್ರೆಸ್ಟನ್ ಕೇರ್’ 4 ಸಾವಿರ ನಾಗರಿಕರ ಸಮೀಕ್ಷೆಯನಂತರ ತಿಳಿಸಿದೆ. ‘ಮಾಲಿನ್ಯದಿಂದಾಗಿ ನಾವು ಬೆಳಿಗ್ಗೆ ವಾಕಿಂಗ್ ಹೋಗುವುದನ್ನು ಸಹ ನಿಲ್ಲಿಸಿದ್ದೇವೆ’, ಎಂದು ಹಲವರು ಹೇಳಿದರು. ಶೇ. 90 ರಷ್ಟು ಜನರು ಉಸಿರಾಟದ ತೊಂದರೆಗಳನ್ನು ಹೊಂದಿದ್ದಾರೆಂದು ಹೇಳಿದ್ದಾರೆ. ಈ ವಾಯುಮಾಲಿನ್ಯದಿಂದ ನಾಗರಿಕರಲ್ಲಿ ಕೆಮ್ಮು, ಗಂಟಲು ಕೆರೆತ, ಕಣ್ಣಿನಲ್ಲಿ ನೀರು ಬರುವುದು, ಜೀವ ಭಯ, ಅಸ್ತಮಾ ಮುಂತಾದ ನಾನಾ ರೋಗಗಳು ಹೆಚ್ಚಾಗಿರುವುದು ಕೂಡ ಈ ಅವಲೋಕನದಿಂದ ತಿಳಿದುಬಂದಿದೆ. ಗಾಳಿಯ ಗುಣಮಟ್ಟ ಸೂಚ್ಯಂಕವು ವಿಶೇಷವಾಗಿ ಚಳಿಗಾಲದಲ್ಲಿ ಕಡಿಮೆಯಾದಾಗ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ.

ದೆಹಲಿಯಲ್ಲಿ ಶೇ. 30 ರಷ್ಟು ಜನರು ಮಾಸ್ಕಗಳನ್ನು ಬಳಸಲು ಪ್ರಾರಂಭಿಸಿದ್ದಾರೆ ಮತ್ತು ದೆಹಲಿ ಮತ್ತು ಮುಂಬಯಿನಲ್ಲಿ ಶೇ. 27 ರಷ್ಟು ನಾಗರಿಕರು ‘ಏರ್ ಪ್ಯೂರಿಫೈಯರ್’ ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಶೇ. 43 ರಷ್ಟು ನಾಗರಿಕರು ಮಾಲಿನ್ಯದಿಂದ ತಮ್ಮ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

* ಎಲ್ಲಿ ಸಾವಿರಾರು ವರ್ಷಗಳಿಂದ ಭೂಮಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸಿದ ಭಾರತೀಯ ಸಂಸ್ಕೃತಿ ಮತ್ತು ಎಲ್ಲಿ ಕೇವಲ 100 ವರ್ಷಗಳಲ್ಲಿ ಭೂಮಿಯನ್ನು ಕಲುಷಿತಗೊಳಿಸಿದ ಆಧುನಿಕ ವಿಜ್ಞಾನ !