ಅಮೇರಿಕಾದ ಹವಾಯಿ ದ್ವೀಪದಲ್ಲಿ ಗ್ರಾನೈಟ್ ನ ಭವ್ಯ ಹಿಂದೂ ದೇವಸ್ಥಾನ ನಿರ್ಮಾಣ !

ಹವಾಯಿ – ಅಮೇರಿಕಾದ ಹವಾಯಿ ಕೌಯಿ ದ್ವಿಪದಲ್ಲಿ ೧೪ ಲಕ್ಷ ಕಿಲೋ ಗ್ರಾನೈಟ್ ಬಳಸಿ ಭವ್ಯ ಹಿಂದೂ ದೇವಸ್ಥಾನ ಕಟ್ಟಲಾಗಿದೆ. ಈ ದೇವಸ್ಥಾನ ಸುತ್ತಲೂ ಸುಂದರ ಕಾಡು ಮತ್ತು ಉದ್ಯಾನವನದಿಂದ ಕೂಡಿದೆ. ಈ ದೇವಸ್ಥಾನ ದಕ್ಷಿಣ ಭಾರತದಲ್ಲಿನ ಪ್ರಾಚೀನ ದೇವಸ್ಥಾನಗಳಿಗೆ ಹೋಲುವ ರೀತಿಯಲ್ಲಿ ಕಟ್ಟಲಾಗಿದೆ. ಈ ದೇವಸ್ಥಾನದ ಮುಖ್ಯ ದೇವತೆ ಎಂದು ಶಿವಲಿಂಗದ ಸ್ಥಾಪನೆ ಮಾಡಲಾಗಿದೆ.

೧. ಹವಾಯಿ ದ್ವಿಪದ ಜನಸಂಖ್ಯೆ ಸುಮಾರು ೧೪ ಲಕ್ಷ ಇದೆ. ಇದರಲ್ಲಿ ಶೇಕಡ ಒಂದಕ್ಕಿಂತ ಕಡಿಮೆ ಹಿಂದೂಗಳು ಇರುವರು. ಕೌಯಿ ದ್ವೀಪದಲ್ಲಿನ ಒಂದು ಸಂಕೀರ್ಣದಲ್ಲಿ ೨೪ ಸಾಧುಗಳು ವಾಸವಾಗಿದ್ದಾರೆ. ಅವರು ಹಿಂದೂ ಧರ್ಮದಲ್ಲಿನ ಶೈವ ವಿಚಾರಧಾರೆಯನ್ನು ಅನುಸರಿಸುತ್ತಾರೆ.

೨. ಈ ದೇವಸ್ಥಾನ ಪರಮಾಚಾರ್ಯ ಸದಾಶಿವನಂದ ಪಲಾನಿ ಸ್ವಾಮಿ ಇವರು ಕಟ್ಟಿಸಿದ್ದಾರೆ. ಅವರು ೧೯೬೮ ರಲ್ಲಿ ಅವರ ಗುರು ಮತ್ತು ಸಂಕಿರ್ಣದ ಸಂಸ್ಥಾಪಕರು ಸುಬ್ರಮುನಿಯಸ್ವಾಮಿ ಇವರ ಜೊತೆಗೆ ಹವಾಯಿ ದ್ವೀಪಕ್ಕೆ ಬಂದಿದ್ದರು.

೩. ಸುಬ್ರಮುನಿಯಸ್ವಾಮಿ ಇವರು ಒಮ್ಮೆ ಕನಸಿನಲ್ಲಿ ಭಗವಂತ ಶಿವನು ಒಂದು ದೊಡ್ಡ ಕಲ್ಲಿನ ಮೇಲೆ ಕುಳಿತಿರುವುದನ್ನು ನೋಡಿದರು. ಅದರ ನಂತರ ೧೯೯೦ ರಲ್ಲಿ ದೇವಸ್ಥಾನದ ಕಾಮಗಾರಿ ಆರಂಭವಾಯಿತು ಮತ್ತು ಸಂಸ್ಥಾಪಕರ ಮೃತ್ಯುವಿನ ನಂತರ ಕೂಡ ಕಾಮಗಾರಿ ಮುಂದುವರೆಯಿತು.

೪. ‘ವಿದ್ಯುತ್ ನಿಂದ ಒಂದು ರೀತಿಯ ಕಾಂತೀಯ ಪ್ರಭಾವ ನಿರ್ಮಾಣವಾಗುತ್ತದೆ ಮತ್ತು ಅದರಿಂದ ಮನಸ್ಸಿನ ಮೇಲೆ ಪರಿಣಾಮವಾಗುತ್ತದೆ’, ಎಂದು ಸುಬ್ರಮುನಿಯಸ್ವಾಮಿಯವರ ಗ್ರಹಿಕೆ ಆಗಿತ್ತು. ಆದ್ದರಿಂದ ದೇವಸ್ಥಾನದಲ್ಲಿ ವಿದ್ಯುತ್ ನಿಂದ ಉರಿಯುವ ಬಲ್ಬ್ ಅಥವಾ ಟ್ಯೂಬ್ ಲೈಟ್ ಹಾಕಿಲ್ಲ. ದೇವಸ್ಥಾನದಲ್ಲಿ ಎಣ್ಣೆಯ ದೀಪಗಳು ಹಚ್ಚಲಾಗುತ್ತದೆ.