ಮಾರ್ಚ್ ೨೦೨೪ ವರೆಗೆ ದೇಶಾದ್ಯಂತ ೧೫ ಸಾವಿರ ಹೊಸ ‘ಜನಔಷಧಿ ಕೇಂದ್ರ’ ನಿರ್ಮಾಣ ! ಪ್ರಧಾನ ಮಂತ್ರಿ 

ಸಮಾಜಕ್ಕೆ ಅಗ್ಗದ ಬೆಲೆಯಲ್ಲಿ ಒಳ್ಳೆಯ ಔಷಧಿ ಪೂರೈಸಲು ಸರಕಾರದ ಪ್ರಯತ್ನ !

ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವ ದೆಹಲಿ – ದೇಶಾದ್ಯಂತ ಈಗ ೧೦ ಸಾವಿರಾ ಜನಔಷಧಿ ಕೇಂದ್ರಗಳು ಕಾರ್ಯ ಮಾಡುತ್ತಿವೆ. ಮುಂದಿನ ಮಾರ್ಚ್ ವರೆಗೆ ಅದರ ಸಂಖ್ಯೆ ೧೫ ಸಾವಿರದಿಂದ ಹೆಚ್ಚಿಸಿ ೨೫ ಸಾವಿರ ಮಾಡಲಾಗುವುದು. ಇದರ ಮೂಲಕ ಸಾಮಾನ್ಯ ಜನರಿಗೆ ಕಡಿಮೆ ಬೆಲೆಗೆ ಔಷಧ ದೊರೆಯುವುದು ಎಂದು ಪ್ರಧಾನಮಂತ್ರಿ ಮೋದಿ ಇವರು ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ಭರವಸೆ ನೀಡಿದರು. ಈ ಸಮಯದಲ್ಲಿ ಅವರು ‘ಮಹಿಳಾ ಕಿಸಾನ ಡ್ರೋನ್ ಕೇಂದ್ರ’ವನ್ನು ಉದ್ಘಾಟಿಸಿದರು. ಈ ಮೂಲಕ ಮಹಿಳಾ ರೈತರಿಗೆ ಕೃಷಿ ಉದ್ದೇಶಕ್ಕಾಗಿ ಡ್ರೋನ್ ಒದಗಿಸಲಾಗುವುದು, ‘ಇದರಿಂದ ಅವರು ಸಕ್ಷಮಾವಾಗುವರು’, ಎಂದೂ ಸಹ ಪ್ರಧಾನಮಂತ್ರಿ ಈ ಸಮಯದಲ್ಲಿ ಹೇಳಿದರು.

ಈ ಸಮಯದಲ್ಲಿ ಪ್ರಧಾನ ಮಂತ್ರಿ ಇವರು ‘ವಿಡಿಯೋ ಕಾನ್ಫರೆನ್ಸಿಂಗ್’ ಮೂಲಕ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಯ ಫಲಾನುಭವಿಗಳಿಗೆ ಉದ್ದೇಶಿಸಿ ಮಾತನಾಡಿದರು. ಅವರು, ಅಕ್ಟೋಬರ್ ೨ ರಿಂದ ಆರಂಭವಾಗಿರುವ ಈ ಅಭಿಯಾನದ ಮೂಲಕ ಒಂದುವರೆ ಲಕ್ಷಕ್ಕಿಂತಲೂ ಹೆಚ್ಚಿನ ಗ್ರಾಮಗಳನ್ನು ಯಶಸ್ವಿಯಾಗಿ ಸೇರಿಸಲಾಗಿದೆ ಮತ್ತು ಸುಮಾರು ೧೫ ಕೋಟಿ ಜನರು ಇದರ ಲಾಭ ಪಡೆದಿದ್ದಾರೆ.