ಸಂಸತ್ತಿನ ಚಳಿಗಾಲದ ಅಧಿವೇಶನ
ನವ ದೆಹಲಿ – ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರತದ ಹೊರಗೆ ಇದ್ದು ಭಾರತದ ವಿರುದ್ಧ ಮಾತನಾಡುವ, ಅಪರಾಧಗಳಿಗೆ ಪ್ರಚೋದನೆ ನೀಡುವ ಮತ್ತು ಅವರ ವಿರುದ್ಧ ಕ್ರಮ ಕೈಗೊಂಡು ಭಾರತಕ್ಕೆ ಕರೆತರುವ ಬಗ್ಗೆ ಕಾನೂನಿನಲ್ಲಿ ಬದಲಾವಣೆಯಾಗಲಿದೆ. ಈ ಕಾಯಿದೆಯಲ್ಲಿ ಒಂದು ಕಲಂಅನ್ನು ಹೆಚ್ಚಿಸಲಾಗಿದೆ. ಇದುವರೆಗೆ ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಈ ಕಲಂನ ನಂತರ, ಭಾರತದ ಹೊರಗಿನ ಅಪರಾಧಿಗಳ ವಿರುದ್ಧ ಮೊಕದ್ದಮೆ ಹೂಡಲಾಗುವುದು.
ಖಲಿಸ್ತಾನಿ ಭಯೋತ್ಪಾದಕ ಗುರುಪತ ವಂತ ಸಿಂಗ್ ಪನ್ನು ಏರ್ ಇಂಡಿಯಾ ಪ್ರಯಾಣಿಕರಿಗೆ ವೀಡಿಯೋ ಮೂಲಕ ಬೆದರಿಕೆ ಹಾಕಿದ್ದ. ರಾಷ್ಟ್ರೀಯ ತನಿಖಾ ಇಲಾಖೆಯಿಂದ ಆತನ ವಿರುದ್ಧ ಪ್ರಕರಣ ದಾಖಲಿಸಿತ್ತು; ಆದರೆ ಅದರಲ್ಲಿ ಹಾಕಿರುವ ಕಲಂಗಳ ಮೂಲಕ ಅವನ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಅವರಿಗಿರಲಿಲ್ಲ. ಈಗ ಹೊಸ ಕಲಂನಿಂದಾಗಿ ಅವರಿಗೆ ಅಧಿಕಾರ ಸಿಗಲಿದೆ.