ಪಾಕಿಸ್ತಾನಿ ಕಲಾವಿದರನ್ನು ಭಾರತದಲ್ಲಿ ಶಾಶ್ವತವಾಗಿ ನಿಷೇಧಿಸಬೇಕೆಂದು ಕೋರಿದ ಅರ್ಜಿ ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕಾರ !

ಕಾಶ್ಮೀರದ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ 7 ವರ್ಷಗಳಿಗಾಗಿ ನಿಷೇಧ ಹೇರಿತ್ತು !

ನವ ದೆಹಲಿ – 2016 ರಲ್ಲಿ ಜಿಹಾದಿ ಭಯೋತ್ಪಾದಕರು ಕಾಶ್ಮೀರದ ಉರಿಯಲ್ಲಿ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ, ಭಾರತವು ಎಲ್ಲಾ ಪಾಕಿಸ್ತಾನಿ ಕಲಾವಿದರನ್ನು ಭಾರತಕ್ಕೆ ಪ್ರವೇಶಿಸದಂತೆ 7 ವರ್ಷಗಳ ಕಾಲ ನಿಷೇಧ ಹೇರಿತ್ತು. ಇದೀಗ ಆ ಅವಧಿ ಮುಗಿದಿದ್ದು, ಅವರ ಮೇಲೆ ಶಾಶ್ವತ ನಿಷೇಧ ಹೇರುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿ, ಅರ್ಜಿದಾರರಿಗೆ ಇಷ್ಟು ಸಂಕುಚಿತವಾಗಿ ಯೋಚಿಸಬೇಡಿರಿ ಎಂದು ಹೇಳಿದೆ.

ಈ ಹಿಂದೆ, ಅರ್ಜಿದಾರ ಫೈಜ ಅನ್ವರ ಖುರೇಷಿ ಅವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಅದಕ್ಕೆ ನ್ಯಾಯಾಲಯವು ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ಹೇಳಿತ್ತು. ದೇಶಭಕ್ತರಾಗಲು ನೆರೆಯ ದೇಶದ ಜನರನ್ನು ದ್ವೇಷಿಸುವುದು ಸರಿಯಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಬೇಡಿಕೆಗಳು !

ಪಾಕಿಸ್ತಾನಿ ಕಲಾವಿದರಿಗೆ ಭಾರತದಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಬಾರದು.

ಪಾಕಿಸ್ತಾನಿ ನಾಗರಿಕರ ಯಾವುದೇ ಸೇವೆ ಅಥವಾ ಯಾವುದೇ ಸಂಸ್ಥೆಯ ಪ್ರವೇಶವನ್ನು ನಿಷೇಧಿಸಿರಿ.

ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಭಾರತೀಯ ನಾಗರಿಕರು, ಕಂಪನಿಗಳು ಮತ್ತು ಸಂಘಟನೆಗಳು ಪಾಕಿಸ್ತಾನದ ಯಾವುದೇ ಕೆಲಸವನ್ನು ಮಾಡಬಾರದು’ ಎಂದು ನಿರ್ದೇಶನ ನೀಡಬೇಕು.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿನ ಹೆಚ್ಚಿನ ಕಲಾವಿದರು ಭಾರತ ದ್ವೇಷಿಗಳು ಮತ್ತು ಮತಾಂಧರಾಗಿದ್ದಾರೆ. ಅನೇಕ ಉದಾಹರಣೆಗಳಿಂದ ಇದು ಕಂಡುಬಂದಿದೆ. ಇದರಿಂದ ರಾಷ್ಟ್ರಪ್ರೇಮದ ಭಾವನೆಯಿಂದ ಇಂತಹ ಕಲಾವಿದರು ಭಾರತೀಯ ಕಲಾ ಕ್ಷೇತ್ರದಲ್ಲಿ ಕೆಲಸ ಮಾಡಬಾರದು, ಎಂದೇ ಅನೇಕ ಭಾರತೀಯರ ರಾಷ್ಟ್ರಭಾವನೆಯಾಗಿದೆ. ‘ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆಯೂ ಗಮನ ಹರಿಸಬೇಕು’ ಎಂಬುದು ಸಾಮಾನ್ಯ ನಾಗರಿಕರ ಭಾವನೆಯಾಗಿದೆ !