ಗುಜರಾತ ಉಚ್ಚ ನ್ಯಾಯಾಲಯವು ಮಸೀದಿಯ ಮೇಲೆ ಧ್ವನಿವರ್ಧಕ ಹಚ್ಚುವುದನ್ನು ನಿಷೇಧಿಸುವಂತೆ ಕೋರಿದ್ದ ಅರ್ಜಿ ವಜಾ !
ಕರ್ಣಾವತಿ (ಗುಜರಾತ) – ಗುಜರಾತ ಉಚ್ಚ ನ್ಯಾಯಾಲಯವು ಬಜರಂಗದಳದ ಮುಖಂಡರೊಬ್ಬರು ಮಸೀದಿಗಳ ಮೇಲೆ ಧ್ವನಿವರ್ಧಕವನ್ನು ಹಚ್ಚುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಾಲಯವು “ನಮಗೆ ಬೆಳಿಗ್ಗೆ ಅಜಾನ್ ನೀಡುವ ವ್ಯಕ್ತಿಯ ಧ್ವನಿಯು ಶಬ್ದ ಮಾಲಿನ್ಯವನ್ನು ರೂಪಿಸುವ ಡೆಸಿಬಲ್ ಮಿತಿಗಿಂತ ಹೇಗೆ ಏರುತ್ತದೆ ಎಂದು ಅರ್ಥವಾಗುತ್ತಿಲ್ಲ” ಎಂದು ಹೇಳಿದೆ. ನ್ಯಾಯಾಲಯವು ‘ಮಸೀದಿಗಳ ಮೇಲಿರುವ ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯ ಉಂಟಾಗುವುದಿಲ್ಲ’ ಎಂದು ಹೇಳಿದೆ. ನ್ಯಾಯಾಲಯವು ಅರ್ಜಿದಾರ ನ್ಯಾಯವಾದಿಗಳಿಗೆ ದೇವಸ್ಥಾನದಲ್ಲಿ ಮುಂಜಾನೆ ಆರತಿ ಆಗುತ್ತದೆ. ಈ ಆರತಿ ಬೆಳಿಗ್ಗೆ 3 ಗಂಟೆಗೆ ಡೋಲು ಮತ್ತು ಸಂಗೀತದೊಂದಿಗೆ ನಡೆಯುತ್ತದೆ. ಇದರಿಂದ ಶಬ್ದಮಾಲಿನ್ಯ ಆಗುವುದಿಲ್ಲವೇ ? ನೀವು ಗಂಟೆಯ ಸದ್ದು ದೇವಸ್ಥಾನದ ಪರಿಸರದಲ್ಲಿ ಮಾತ್ರ ಆಗುತ್ತದೆ ಎಂದು ಹೇಳಲು ಬಯಸುತ್ತೀರಾ ? ಆ ಸದ್ದು ದೇವಾಲಯದ ಹೊರಗೆ ಹೋಗುವುದಿಲ್ಲವೇ ? ನಾವು ಇಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಮಸೀದಿಗಳ ಮೇಲಿನ ಧ್ವನಿವರ್ಧಕ ಹಲವು ವರ್ಷಗಳಿಂದ ಇದೆ. ಅಜಾನ್ ಕೇವಲ 5-10 ನಿಮಿಷಗಳಾಗಿ ಮಾತ್ರ ಇರುತ್ತದೆ ಎಂದು ಹೇಳಿದೆ.
(ಸೌಜನ್ಯ – Live Hindusthan)
ಸಂಪಾದಕೀಯ ನಿಲುವುದೇವಸ್ಥಾನದಲ್ಲಿನ ಆರತಿಯಿಂದ ಶಬ್ದ ಮಾಲೀನ್ಯ ಆಗುತ್ತಿದ್ದರೆ, ಅದರ ಮೇಲೆ ಕ್ರಮ ಕೈಕೊಳ್ಳಬಹುದು. ಅನೇಕ ಪ್ರಕರಣಗಳಲ್ಲಿ ಪೊಲೀಸರು ಕೂಡ ಕ್ರಮ ಕೈಕೊಳ್ಳುತ್ತಾರೆ; ಆದರೆ ಯಾವ ರೀತಿ ಮುತುವರ್ಜಿಯಿಂದ ಮಂದಿರದ ಮೇಲಿನ ಧ್ವನಿವರ್ಧಕದ ವಿರುದ್ಧ ಕ್ರಮಗಳು ಆಗುತ್ತದೆಯೋ ? ಅಷ್ಟೇ ಶೀಘ್ರವಾಗಿ ಮಸೀದಿಯ ಮೇಲಿನ ಧ್ವನಿವರ್ಧಕದ ಮೇಲೆ ಕ್ರಮ ಕೈಕೊಳ್ಳುವುದಿಲ್ಲ, ಇದೇ ಸತ್ಯವಾಗಿದೆ, ನ್ಯಾಯಾಲಯ ಈ ಕಡೆಗೂ ಗಮನ ಹರಿಸಬೇಕು, ಎನ್ನುವುದೇ ನಾಗರಿಕರ ಅಪೇಕ್ಷೆಯಾಗಿದೆ ! |