ಘಾಜಿಯಾಬಾದ್‌ನಲ್ಲಿ ಒಂದು ಮುಸ್ಲಿಂ ದಂಪತಿ ಸ್ವಇಚ್ಛೆಯಿಂದ ಘರವಾಪಸಿ !

ಆಸಿಫನು ಆಕಾಶ ಚೌಧರಿ ಆದರು ಅವರ ಪತ್ನಿ ಸುಮೈಯಾ ಈಗ ಪ್ರಿಯಾ ಎಂದು ಕರೆಯಲಾಗುವುದು !

ಗಾಜಿಯಾಬಾದ್ (ಉತ್ತರ ಪ್ರದೇಶ) – ಜಿಲ್ಲೆಯ ಒಂದು ಮುಸ್ಲಿಂ ದಂಪತಿಗಳು ಇಸ್ಲಾಂ ಧರ್ಮವನ್ನು ತ್ಯಜಿಸಿ ಘರವಾಪಸಿಯಾದರು. ಹೀಗಾಗಿ, ಪತಿ ಆಸಿಫನು ಆಕಾಶ ಚೌಹಾಣ್ ಎಂಬ ಹೆಸರನ್ನು ಇಟ್ಟುಕೊಂಡಿದ್ದಾನೆ. ಮತ್ತು ಅವನ ಪತ್ನಿ ಸುಮೈಯಾ ಖಾತೂನ್ ಈಗ ಪ್ರಿಯಾ ಎಂದು ಗುರುತಿಸಿಕೂಂಡಿದ್ದಾಳೆ. ಈ ದಂಪತಿಗಳು ಇಲ್ಲಿನ ದೇವಸ್ಥಾನವೊಂದರಲ್ಲಿ ಶಂಖನಾದ ಮತ್ತು ವೇದಗಳ ಪಠಣಗಳ ಮಧ್ಯೆ ‘ಜೈ ಶ್ರೀ ರಾಮ್’ ಎಂದು ಹೇಳುತ್ತಾ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರು ಸನಾತನ ಪದ್ಧತಿಗನುಸಾರ ಬದುಕಲು ಸಂಕಲ್ಪ ಮಾಡಿದರು. ಈ ಮನೆಗೆ ಮರಳುವ ಕಾರ್ಯಕ್ರಮವನ್ನು ಹಿಂದೂ ರಕ್ಷಣಾ ದಳದ ಅಧ್ಯಕ್ಷ ಶ್ರೀ. ಪಿಂಕಿ ಚೌಧರಿ ಆಯೋಜಿಸಿದ್ದರು.

(ಸೌಜನ್ಯ – Zee Uttar Pradesh UttaraKhand)

1. ಈ ಸಂದರ್ಭದಲ್ಲಿ ಆಸಿಫ ಅವರೇ ತಮ್ಮ ಬಳಿ ಬಂದು ಹಿಂದೂ ಧರ್ಮ ಸ್ವೀಕಾರ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು ಎಂದು ಪಿಂಕಿ ಚೌಧರಿ ಹೇಳಿದ್ದಾರೆ. ಆಸಿಫ ಮತ್ತು ಸುಮ್ಯಯಾ 5 ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಮಗುವಿದೆ.

2. ಆಸಿಫ ಅವರ ಕೋರಿಕೆಯ ಮೇರೆಗೆ, ನವೆಂಬರ್ 26 ರಂದು, ಚೌಧರಿ ಅವರು ಗಾಜಿಯಾಬಾದ್‌ನ ಭೋಪುರ ಪ್ರದೇಶದ ದೇವಸ್ಥಾನದಲ್ಲಿ ಘರವಾಪಸಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

3. ಈ ಸಂದರ್ಭದಲ್ಲಿ ಆಕಾಶ ಚೌಧರಿಯಾಗಿರುವ ಆಸಿಫ ಇವರು, ನಾನು ಮೊದಲಿನಿಂದಲೂ ”ಸನಾತನ ಧರ್ಮವೇ ಎಲ್ಲಕ್ಕಿಂತ ಶ್ರೇಷ್ಠ ಮತ್ತು ಪವಿತ್ರ ಧರ್ಮ ಎಂದು ಅನಿಸುತ್ತಿತ್ತು. ಇಸ್ಲಾಂನಲ್ಲಿ ಯಾವುದೇ ಧರ್ಮ ಇಲ್ಲ ಎಂದಿದ್ದಾನೆ.

4. ಈ ಸಂದರ್ಭದಲ್ಲಿ ಪ್ರಿಯಾ ಚೌಹಾಣ್ ಆಗಿರುವ ಸುಮ್ಯಯಾ ಇವರು, ಹಿಂದೂ ಧರ್ಮವೇ ಸರ್ವ ಶ್ರೇಷ್ಠ ಎಂದು ಎಂದಿದ್ದಾರೆ. ಇಸ್ಲಾಂನಲ್ಲಿ ಮೂರು ಬಾರಿ ತಲಾಖ್ ಎಂದು ಹೇಳಿದರೆ ಸಂಬಂಧವನ್ನು ವಿಚ್ಚೇಧನಗೊಳಿಸಲಾಗುತ್ತದೆ. ಈಗ ನನ್ನ ಕುಟುಂಬ ಉತ್ತಮ ಜೀವನ ನಡೆಸಬಹುದು ಎಂದರು.

ಹಿಂದೂ ಧರ್ಮಕ್ಕೆ ಮರಳಲು ಆಸಕ್ತಿ ಇರುವವರು ನಮ್ಮನ್ನು ಸಂಪರ್ಕಿಸಬೇಕು ! – ಹಿಂದೂ ರಕ್ಷಾ ದಳ

ಈ ಸಮಯದಲ್ಲಿ ಹಿಂದೂ ರಕ್ಷಾ ದಳದ ಅಧ್ಯಕ್ಷ ಶ್ರೀ. ಪಿಂಕಿ ಚೌಧರಿ ಮಾತನಾಡುತ್ತಾ, ದೇಶದಾದ್ಯಂತ ಯಾರಾದರೂ ಘರವಾಪಸಿ ಮಾಡುವುದಿದ್ದರೆ ಅವರು ನಮ್ಮನ್ನು ಸಂಪರ್ಕಿಸಿ ಎಂದಿದ್ದಾರೆ. ಅವರನ್ನು ರಕ್ಷಿಸುವ ಮತ್ತು ಗೌರವಿಸುವ ಸಂಪೂರ್ಣ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ ಎಂದರು.

ಸಂಪಾದಕೀಯ ನಿಲುವು

ಯಾವುದೇ ಬಲಪ್ರಯೋಗ ಇಲ್ಲದೆ ಇತರ ಧರ್ಮೀಯರು ಸ್ವತಃ ಹಿಂದೂ ಧರ್ಮವನ್ನು ಸ್ವೀಕರಿಸುತ್ತಾರೆ, ಇದು ಹಿಂದೂ ಧರ್ಮದ ಅದ್ವಿತೀಯ ಬೋಧನೆ ಮತ್ತು ತತ್ವಗಳಿಂದಾಗಿಯೇ ಇದೆ ! ಇದರಿಂದ ಹಿಂದೂ ಧರ್ಮದ ಶ್ರೇಷ್ಠತೆ ಗಮನಕ್ಕೆ ಬರುತ್ತದೆ !