ಬುರ್ಖಾ ಧರಿಸಿ ಫ್ಯಾಷನ್ ಶೋನಲ್ಲಿ ಕ್ಯಾಟ್ ವಾಕ್ ಮಾಡಿದ ಮುಝಫರನಗರದ ಶ್ರೀರಾಮ ಕಾಲೇಜಿನ ಮುಸಲ್ಮಾನ ವಿದ್ಯಾರ್ಥಿನಿಯರು !

ಕನವೀನ್ ಜಮೀಯತ್ ಉಲೇಮಾದಿಂದ ವಿರೋಧ

(ಫ್ಯಾಶನ್ ಶೋನಲ್ಲಿ ಕ್ಯಾಟ್ ವಾಕ್ ಎಂದರೆ ಬೇರೆ ಬೇರೆ ರೀತಿಯ ಉಡುಪುಗಳನ್ನು ಧರಿಸಿ ಪ್ರೇಕ್ಷಕರ ಮುಂದೆ ವೇದಿಕೆಯಲ್ಲಿ ನಡೆದು ತೋರಿಸುವುದು)

ಮುಝಫರನಗರ (ಉತ್ತರ ಪ್ರದೇಶ) – ಸ್ಥಳೀಯ ಶ್ರೀರಾಮ ಗ್ರೂಪ್ ಆಫ್ ಕಾಲೇಜಿನಲ್ಲಿ ಮುಸಲ್ಮಾನ ಯುವತಿಯರು ಒಂದು ಫ್ಯಾಶನ್ ಶೋನಲ್ಲಿ ಭಾಗವಹಿಸಿದ್ದರು. ಈ ಶೋನಲ್ಲಿ ನಟಿ ಮಂದಾಕಿನಿ ಕೂಡ ಉಪಸ್ಥಿತರಿದ್ದರು. ಆ ಸಮಯದಲ್ಲಿ ಕೆಲವು ಮುಸಲ್ಮಾನ ಯುವತಿಯರು ಬುರ್ಖಾ ದರಿಸಿ ಫ್ಯಾಶನ್ ಶೋನಲ್ಲಿ ಕ್ಯಾಟ್ ವಾಕ್ ನಡೆಸಿದ್ದು, ಇದರಿಂದ ವಿವಾದ ನಿರ್ಮಾಣವಾಗಿದೆ.

ಈ ಘಟನೆಯ ಬಗ್ಗೆ ಕನವೀನ್ ಜಮೀಯತ್ ಉಲೇಮಾದ ಮೌಲಾನಾ ಮುಕರ್ರಮ ಕಾಸಮಿ ಇವರು ‘ಕಾಲೇಜಿನ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಫ್ಯಾಷನ್ ಶೋನಲ್ಲಿ ಕ್ಯಾಟ್ ವಾಕ್ ಮಾಡುವುದು ತಪ್ಪು. ಬುರ್ಖ ಮಹಿಳೆಯರಿಗಾಗಿ ಗೌರವದ ವಿಷಯವಾಗಿದೆ. ಬುರ್ಖಾ ಫ್ಯಾಷನ್ ಶೋಗಾಗಿ ಅಲ್ಲ. ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಅವರ ಶಿಕ್ಷಕರ ಈ ಕೃತಿಯಿಂದ ಮುಸಲ್ಮಾನರ ಭಾವನೆಗೆ ನೋವುಂಟಾಗಿದೆ. ಆದ್ದರಿಂದ ಇಂತಹ ವಿಷಯಗಳಿಂದ ದೂರ ಉಳಿಯಬೇಕು. ಇಂತಹ ಘಟನೆಗಳು ಮರುಕಳಿಸಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳುವೆವು’ ಎಂದಿದ್ದಾರೆ.

ಸಂಪಾದಕೀಯ ನಿಲುವು

ಈ ವಿರೋಧದ ಬಗ್ಗೆ ತಥಾಕಥಿತ ಪ್ರಗತಿಪರರು ಏನೆನ್ನುತ್ತಾರೆ?