ಪ್ರಮಾಣ ಹೀಗಿತ್ತು!
ಗದಗ – ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವದ ಅಂಗವಾಗಿ ಇಲ್ಲಿನ ವಿಠಲಾರೂಢ ಸಭಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ನೂರಾರು ಹಿಂದೂಗಳು ಲವ್ ಜಿಹಾದ್ ವಿರುದ್ಧ ಪ್ರತಿಜ್ಞೆ ಸ್ವೀಕರಿಸಿದರು.‘ಲವ್ ಜಿಹಾದ್’ಗೆ ಬಲಿಯಾಗಬಾರದು ಎಂದು ಪ್ರತಿಜ್ಞೆ ಮಾಡುತ್ತಿದ್ದೇನೆ, ನಾನು ಜಗನ್ಮಾತೆ ದೇವಿ, ಸಹಸ್ರಾರ್ಜುನ ಮಹಾರಾಜರು, ಯಲ್ಲಮ್ಮ ದೇವಿ, ವಿಠಲಾರೂಢ ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡುತ್ತಿದ್ದೇನೆ. ಗ್ರಾಮ, ಗಲ್ಲಿ, ಶಾಲೆ, ಕಾಲೇಜು ಇಲ್ಲಿ ಅನ್ಯ ಮತೀಯರ ಪ್ರೀತಿ-ಸ್ನೇಹದ ಜಾಲದಲ್ಲಿ ಸಿಲುಕುವುದಿಲ್ಲ. ಅನ್ಯ ಮತೀಯರು ತೋರಿಸುವ ಪ್ರೀತಿಯನ್ನು ಸ್ವೀಕರಿಸದೇ ಧಿಕ್ಕರಿಸುತ್ತೇವೆ. ಬೇರೆ ಧರ್ಮದವರು ಪ್ರೀತಿಯ ಹೆಸರಿನಲ್ಲಿ ಬೆನ್ನು ಬಿದ್ದರೆ, ಅವರು ಫೇಸ್ ಬುಕ್, ಇನ್ ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸಿದರೆ ತಾಯಿ-ತಂದೆಯ ಗಮನಕ್ಕೆ ತರುತ್ತೇನೆ. ದೊಡ್ಡವರ ಗಮನಕ್ಕೆ ತಂದು ಈ ಪ್ರಕಾರವನ್ನು ತಡೆಯಲು ಪ್ರಯತ್ನಿಸುತ್ತೇನೆ ಅಥವಾ ಅವರಿಗೆ ತಕ್ಕ ಪಾಠ ಕಲಿಸುತ್ತೇನೆ. ನನ್ನ ಗೆಳತಿಯರು ‘ಲವ್ ಜಿಹಾದ್’ಗೆ ಬಲಿಯಾಗದಂತೆ ಎಚ್ಚರವಹಿಸುತ್ತೇನೆ.ಈ ವಿಷಯದಲ್ಲಿ ಜಾಗೃತಿ ಮೂಡಿಸುತ್ತೇನೆ. ಕುಟುಂಬ ಹಾಗೂ ಸಮಾಜವನ್ನು ಗೌರವಿಸುತ್ತೇನೆ.
(ಸೌಜನ್ಯ : Public TV)
ಸಂಪಾದಕರ ನಿಲುವು* ಹಿಂದೂಗಳ ಶ್ಲಾಘನೀಯ ಕೃತಿ! ಎಲ್ಲೆಡೆಯ ಹಿಂದೂಗಳು ಇಂತಹ ಪ್ರಮಾಣ ವಚನ ಸ್ವೀಕರಿಸಿದರೆ, ಹೆಚ್ಚು ಜಾಗೃತಿ ಮೂಡಿ ಹಿಂದೂ ಯುವತಿಯರ ರಕ್ಷಣೆಯಾಗುತ್ತದೆ! |