‘ಪಶುಪತಿ ಕ್ಷೇತ್ರ ಅಭಿವೃದ್ಧಿ ಟ್ರಸ್ಟ್’ ನಿಂದ ಬಹಿರಂಗ !
ಕಠ್ಮಾಂಡು (ನೇಪಾಳ) – 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಪಶುಪತಿನಾಥ ದೇಗುಲದ ಕುರಿತು, ‘ಭಾರತದಲ್ಲಿ ಇಲ್ಲಿಯ ಪಶುಪತಿನಾಥ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಲು ಯಾರಿಗೂ ಅವಕಾಶ ನೀಡಲಾಗಿಲ್ಲ’ ಎಂದು ನೇಪಾಳದ ‘ಪಶುಪತಿ ಕ್ಷೇತ್ರ ಅಭಿವೃದ್ಧಿ ಟ್ರಸ್ಟ್’ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಘನಶ್ಯಾಮ್ ಖಾತಿವಾಡ ಹೇಳಿದ್ದಾರೆ. ಭಾರತದ ಉತ್ತರಾಖಂಡದ ಹಳ್ಳಿಯೊಂದರಲ್ಲಿ ಪಶುಪತಿನಾಥ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಲಾಗುತ್ತಿದೆ ಎಂಬ ಸುದ್ದಿಯ ನಂತರ ಅವರು ಇದನ್ನು ಬಹಿರಂಗಪಡಿಸಿದರು.
ಡಾ. ಘನಶ್ಯಾಮ್ ಖಾತಿವಾಡ್ ಮುಂದೆ ಮಾತನಾಡುತ್ತಾ, ಈ ಪುರಾತನ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿ ಅವನು ಪ್ರಾಣಿಗಳ ರಕ್ಷಕನಾದ ಪಶುಪತಿಯ ರೂಪದಲ್ಲಿರುತ್ತಾನೆ. ಉತ್ತರಾಖಂಡದಲ್ಲಿ ಪಶುಪತಿನಾಥ ದೇಗುಲ ನಿರ್ಮಾಣವಾಗುತ್ತಿದೆ ಎಂಬುದು ಸುಳ್ಳು ಸುದ್ದಿ. ಇಂತಹ ಸುದ್ದಿಗಳನ್ನು ನಾವು ವಿರೋಧಿಸುತ್ತೇವೆ. ಪಶುಪತಿನಾಥವು ಎಲ್ಲಾ ಹಿಂದೂಗಳ ಶ್ರದ್ಧೆಯ ಕೇಂದ್ರವಾಗಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುಳ್ಳು ಸುದ್ದಿಯಿಂದ ಪಶುಪತಿನಾಥನ ಮೇಲೆ ನಂಬಿಕೆ ಇಟ್ಟಿರುವ ಹಿಂದೂಗಳಿಗೆ ಅಘಾತವಾಗಿದೆ. ನಾವು ಬೇರೆಡೆ ಪಶುಪತಿನಾಥ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು.