ಆಗ್ರಾದಲ್ಲಿ ಮುಸಲ್ಮಾನ ಆರೋಪಿಗಳನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ !

ಪೊಲೀಸ ಅಧಿಕಾರಿಗೆ ಗಾಯ

ವಾಹನಗಳು ಧ್ವಂಸ, ಸಮವಸ್ತ್ರ ಹರಿದರು


ಆಗ್ರಾ (ಉತ್ತರಪ್ರದೇಶ) – ಇಲ್ಲಿಯ ಖಾತಿಪಾಡಾ ಪ್ರದೇಶದಲ್ಲಿ ಪರಾರಿ ಆಗಿದ್ದ ಗೂಂಡಾ ಶಾನೂ ಕುರೇಶಿಯನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಸ್ಥಳೀಯ ಮುಸಲ್ಮಾನರು ದಾಳಿ ನಡೆಸಿದ್ದಾರೆ. ಪೊಲೀಸರ ಸಮವಸ್ತ್ರ ಕೂಡ ಹರಿದು ಅದರ ಮೇಲಿನ ಹೆಸರಿನ ಪಟ್ಟಿ ತೆಗೆದು ಅವರ ವಾಹನ ಧ್ವಂಸ ಮಾಡಿದ್ದಾರೆ. ಮತ್ತು ಪೊಲೀಸರಿಗೆ ಜೀವ ಬೆದರಿಕೆ ಕೂಡ ಹಾಕಿದರು. ಈ ಹೊಡೆದಾಟದಲ್ಲಿ ಪೊಲೀಸ ಅಧಿಕಾರಿ ಅರುಣ ಕುಮಾರ ಇವರು ಗಾಯಗೊಂಡಿದ್ದಾರೆ. ಈ ಘಟನೆ ನವಂಬರ್ ೨೪ ರಂದು ಸಂಜೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಶಾನೂ ಕುರೇಶಿ, ಅವನ ತಂದೆ ಹಾಜಿ ಮಹಮ್ಮದ್, ಸಹೋದರನ ಸಹಿತ ಇಮ್ರಾನ್, ಗುಲಫಾಂ, ಅಸ್ಲಂ, ತೋತಲ್ ಪಠಾಣ್, ನದೀಂ ಸಹಿತ ೨೫ ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ಸಂಪಾದಕರ ನಿಲುವು

* ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದೂ, ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ’, ಎಂದು ಬೊಬ್ಬೆ ಹಾಕುವವರು ಈಗ ಎಲ್ಲಿ ಇದ್ದಾರೆ ?

* ಈ ರೀತಿ ಪೊಲೀಸರ ಮೇಲೆ ದಾಳಿ ನಡೆಯುತ್ತಿರುವಾಗ, ಅವರಿಗೆ ಸ್ವಂತ ರಕ್ಷಣೆಗಾಗಿ ಗುಂಡು ಹಾರಿಸುವ ಅಧಿಕಾರ ನೀಡುವುದು ಅವಶ್ಯಕ ಎಂದು ಜನರಿಗೆ ಅನಿಸುತ್ತದೆ !

* ಉತ್ತರಪ್ರದೇಶದಲ್ಲಿ ಭಾಜಪಾ ಸರಕಾರ ಇರುವಾಗ ಮತಾಂಧರಿಗೆ ಪೊಲೀಸರ ಮೇಲೆ ದಾಳಿ ನಡೆಸುವ ಧೈರ್ಯ ಹೇಗೆ ಆಗುತ್ತದೆ ?