ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಚುನಾವಣಾ ಆಶ್ವಾಸನೆ!
(‘ಐಟಿ ಪಾರ್ಕ್’ ಎಂದರೆ ಮಾಹಿತಿ ಮತ್ತು ತಂತ್ರಜ್ಞಾನದ ಸಂದರ್ಭದಲ್ಲಿ ಉದ್ಯೋಗ ಒದಗಿಸುವ ಕೇಂದ್ರ)
ಭಾಗ್ಯನಗರ (ತೆಲಂಗಾಣ) – ತೆಲಂಗಾಣದಲ್ಲಿ ಪ್ರಸ್ತುತ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಅದರ ಪ್ರಚಾರದ ಸಮಯದಲ್ಲಿ, ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿಯ ಮುಖಂಡ ಮತ್ತು ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮತ್ತೆ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಯುವಕರಿಗಾಗಿ ಪ್ರತ್ಯೇಕ ‘ಐಟಿ ಪಾರ್ಕ’ ಸ್ಥಾಪಿಸುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಮುಸ್ಲಿಮರಿಗೆ ಪಿಂಚಣಿ ನೀಡುತ್ತಿದ್ದು, ಅವರಿಗಾಗಿ ವಸತಿ ಶಾಲೆಗಳನ್ನೂ ತೆರೆದಿದೆ. ಆದ್ದರಿಂದ ಮುಸ್ಲಿಮರು ನಮಗೆ ಮತ ನೀಡಬೇಕು ಎಂದು ಹೇಳಿದರು. ಅವರು ಮಹೇಶ್ವರಂನಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.
10 ವರ್ಷಗಳಲ್ಲಿ ಅಲ್ಪಸಂಖ್ಯಾತರಿಗೆ 12 ಸಾವಿರ ಕೋಟಿ ರೂ. ವೆಚ್ಚ !
ಮುಖ್ಯಮಂತ್ರಿ ರಾವ್ ತಮ್ಮ ಮಾತನ್ನು ಮುಂದುವರಿಸಿ, ನಮ್ಮ ಸರಕಾರ ಕಳೆದ 10 ವರ್ಷಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 12 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಕಾಂಗ್ರೆಸ್ ತನ್ನ 10 ವರ್ಷಗಳಲ್ಲಿ ಕೇವಲ 2 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಹೇಳಿದರು. (ಬಹುಸಂಖ್ಯಾತ ಹಿಂದೂಗಳಿಗೆ ಎಷ್ಟು ರೂಪಾಯಿ ಖರ್ಚು ಮಾಡಲಾಗಿದೆ?, ರಾವ್ ಹೇಳುತ್ತಾರಾ ಮತ್ತು ರಾಜ್ಯದ ಹಿಂದೂಗಳು ಅವರನ್ನು ಕೇಳುತ್ತಾರೆಯೇ? – ಸಂಪಾದಕರು)
ಸಂಪಾದಕೀಯ ನಿಲುವು
|