Gurudwara Nihang : ಪಂಜಾಬ್‌ನ ಗುರುದ್ವಾರದಲ್ಲಿ ಪೊಲೀಸರು ಮತ್ತು ನಿಹಂಗಾ ನಡುವೆ ಗುಂಡಿನ ಚಕಮಕಿ; ಒಬ್ಬ ಪೊಲೀಸನ ಸಾವು, 10 ಪೊಲೀಸರಿಗೆ ಗಾಯ !

ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಪಂಜಾಬ್ ರಾಜ್ಯದಲ್ಲಿ ಪೊಲೀಸರೇ ಸುರಕ್ಷಿತವಾಗಿಲ್ಲ, ಸಾಮಾನ್ಯ ಜನರ ರಕ್ಷಣೆಯ ಕಥೆ ಏನು !

ಕಪುರತಲಾ (ಪಂಜಾಬ) – ಇಲ್ಲಿನ ಸುಲ್ತಾನಪುರ ಲೋಧಿ ಪ್ರದೇಶದಲ್ಲಿರುವ ಗುರುದ್ವಾರ ಶ್ರೀ ಅಕಾಲ ಬುಂಗಾ ಸಾಹಿಬ ಅನ್ನು ಕೆಲವು ನಿಹಂಗಾಗಳು ಅನಧಿಕೃತವಾಗಿ ವಶಪಡಿಸಿಕೊಂಡಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಲು ಹೋದ ಪೊಲೀಸರ ಮೇಲೆ ನಿಹಂಗಾಗಳು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್‌ ಸಾವನ್ನಪ್ಪಿದ್ದು, 10 ಪೊಲೀಸರು ಗಾಯಗೊಂಡಿದ್ದಾರೆ. ಈ ವೇಳೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಅಶ್ರುವಾಯು ಸಿಡಿಸಿದರು. ಗುರುದ್ವಾರದಲ್ಲಿ ಇನ್ನೂ 30-40 ಶಸ್ತ್ರಸಜ್ಜಿತ ನಿಹಂಗಾಗಳು ಅಡಗಿಕೊಂಡಿರುವ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ.

(ಸೌಜನ್ಯ – Republic World)

ಗುರುದ್ವಾರದ ಸ್ವಾಧೀನಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಜಗಳ ನಡೆಯುತ್ತಿದ್ದು, ನವೆಂಬರ್ 22 ರ ರಾತ್ರಿ ಪೊಲೀಸರು ಗುರುದ್ವಾರವನ್ನು ವಶಕ್ಕೆ ಪಡೆದಿರುವವರಲ್ಲಿ 10 ಅಪರಾಧಿಗಳನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಇನ್ನೂ ಕೆಲವು ನಿಹಂಗಾಗಳನ್ನು ಬಂಧಿಸಲು ಪೊಲೀಸರು ಗುರುದ್ವಾರಕ್ಕೆ ತೆರಳಿದ್ದರು. ಆ ಸಮಯದಲ್ಲಿ ನಿಹಂಗಾಗಳು ಹಾರಿಸಿದ ಗುಂಡು ತಗುಲಿ ಪೊಲೀಸ ಜಸಪಾಲ ಸಿಂಹ ಮರಣ ಹೊಂದಿದನು, ಪೊಲೀಸ್ ಉಪ ಆಯುಕ್ತ ಭುಲತ ಭಾರತಭೂಷಣ ಸೈನಿ, ಹಾಗೆಯೇ ಕೆಲವು ಸಬ್ ಇನ್ಸಪೆಕ್ಟರಗಳು ಮತ್ತು ಹವಾಲ್ದಾರ ಹೀಗೆ ಒಟ್ಟು 10 ಪೊಲೀಸರು ಗಾಯಗೊಂಡಿದ್ದಾರೆ.