ಸಹಚರನ ವಿರುದ್ಧ ದೂರು ನೀಡಿರುವ ಸಂತ್ರಸ್ತೆಯ ಸಂಬಂಧಿಕರಿಗೆ ನಾಲೆಗೆ ಹರಿ ಬಿಟ್ಟ ಕಾಂಗ್ರೆಸ್ಸಿನ ಮಾಜಿ ಶಾಸಕ ಅಮರಗೌಡ ಪಾಟೀಲ್ !
ಬೆಂಗಳೂರು – ‘ಒಬ್ಬ ಪುರುಷನು ಮಹಿಳೆಯ ಮೇಲೆ ಬಲಾತ್ಕಾರ ಮಾಡಲು ಸಾಧ್ಯವಿಲ್ಲ, ಅದಕ್ಕಾಗಿ ೩-೪ ಜನರ ಅವಶ್ಯಕತೆ ಇರುತ್ತದೆ’, ಎಂದು ಕರ್ನಾಟಕದಲ್ಲಿನ ಕಾಂಗ್ರೆಸ್ಸಿನ ಮಾಜಿ ಶಾಸಕ ಅಮರಗೌಡ ಪಾಟೀಲ್ ಇವರು ಬೇಜವಾಬ್ದರಿತನದ ಹೇಳಿಕೆ ನೀಡಿದ್ದಾರೆ. ಓರ್ವ ಬಲಾತ್ಕಾರ ಸಂತ್ರಸ್ತೆಯ ಬಗ್ಗೆ ಆಕೆಯ ಮಾವನ ಜೊತೆಗೆ ದೂರವಾಣಿಯಲ್ಲಿ ಮಾತನಾಡುವಾಗ ಪಾಟೀಲ್ ಇವರು ಹೇಳಿಕೆ ನೀಡಿದ್ದಾರೆ. ಅವರಲ್ಲಿನ ಸಂಭಾಷಣೆ ಧ್ವನಿಮುದ್ರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ. ಆದ್ದರಿಂದ ಪಾಟೀಲರ ಮೇಲೆ ಟೀಕೆಗಳು ಆಗುತ್ತಿವೆ; ಆದರೆ ಸಂಭಾಷಣೆ ಸತ್ಯತೆ ಬಗ್ಗೆ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.
ಅಕ್ಟೋಬರ್ ೬ ರಂದು ಅಮರಗೌಡ ಪಾಟೀಲ್ ಇವರ ಸಹಚರ ಸಂಗನಗೌಡ ಪಾಟೀಲ್ ಇವರ ಮೇಲೆ ಕೊಪ್ಪಳ ಜಿಲ್ಲೆಯಲ್ಲಿನ ತಾವರಗೇರಾ ಇಲ್ಲಿಯ ಹೊಲದಲ್ಲಿ ಕೆಲಸ ಮಾಡುವ ಮಹಿಳೆಯ ಮೇಲೆ ಬಲಾತ್ಕಾರ ಮಾಡಿರುವ ಆರೋಪವಿದೆ. ಬಲಾತ್ಕಾರ ಸಂತ್ರಸ್ತೆಯಿಂದ ಅಕ್ಟೋಬರ್ ೧೮ ರಂದು ತಾವರಗೇರಾ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಮಹಿಳೆಯ ಅತ್ತೆ ಮನೆಯವರಿಂದ ಅಮರಗೌಡರ ಬಳಿ ದೂರು ನೀಡಲಾಯಿತು. ಆ ಸಮಯದಲ್ಲಿ ಸಂತ್ರಸ್ತೆಯ ಮಾವ ಮತ್ತು ಪಾಟೀಲರ ನಡುವೆ ದೂರವಾಣಿಯಲ್ಲಿ ಸಂಭಾಷಣೆ ನಡೆಯಿತು. ಅದರಲ್ಲಿ ಪಾಟೀಲರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಪಾಟಿಲರು ಸಂಭಾಷಣೆಯಲ್ಲಿ, ಓರ್ವ ಮಹಿಳೆಯ ಮೇಲೆ ಬಲತ್ಕಾರ ಮಾಡುವುದಕ್ಕಾಗಿ ಕನಿಷ್ಠ ೩-೪ ಜನರ ಅವಶ್ಯಕತೆ ಇರುತ್ತದೆ. ಒಬ್ಬನೇ ಬಲಾತ್ಕಾರ ಮಾಡುವಂತಹ ಈ ಜಗತ್ತಿನಲ್ಲಿ ಯಾರೂ ಇಲ್ಲ. ನನಗೆ ಹೇಳಿ ಅವನು ಎಷ್ಟೇ ಶಕ್ತಿಶಾಲಿ ಆಗಿದ್ದರು ಹೀಗೆ ಯಾರೂ ಮಾಡಲು ಸಾಧ್ಯವಿಲ್ಲ. ಯಾವುದಾದರೂ ವ್ಯಕ್ತಿ ಹೀಗೆ ಮಾಡಬಹುದೆಂದು ನೀವು ಸಾಬೀತ ಮಾಡಿ. ಮಹಿಳೆ ಕಿರುಚಿಲ್ಲವೇ ? ಯಾರು ಒಂದೇ ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ಅದಕ್ಕಾಗಿ ೨ ಕೈಗಳು ಬೇಕಾಗುತ್ತವೆ. ನೀವು ಒಬ್ಬ ಆರೋಗ್ಯವಂತ ಮನುಷ್ಯನನ್ನು ಕರೆತನ್ನಿ ಮತ್ತು ನಾನು ಒಬ್ಬ ಮಹಿಳೆಯನ್ನು ಕಳಿಸುತ್ತೇನೆ. ಆಕೆಗೆ ವಿಚಾರಿಸಿ, ನಿನ್ನ ಮೇಲೆ ಬಲಾತ್ಕಾರ ಆಗಲು ಸಾಧ್ಯವೇ ? ಎಂದು ಹೇಳಿದರು.