ಉದ್ಯಮಿ ಮುಖೇಶ್ ಅಂಬಾನಿ ಇವರಿಂದ ಬಂಗಾಳದ ಕಾಳಿಘಾಟ್ ದೇವಸ್ಥಾನದ ಜೀರ್ಣೋದ್ಧಾರ !

ಕೋಲಕಾತಾ – ‘ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌’ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಬಂಗಾಳದ ಕಾಳಿಘಾಟ್ ದೇವಸ್ಥಾನಕ್ಕೆ ಅದರ ಪ್ರಾಚೀನ ವೈಭವವನ್ನು ಪುನರ್ ಸ್ಥಾಪಿಸಲಿದ್ದಾರೆ. ಅವರು ಈ ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಯೋಜನೆಯನ್ನು ಘೋಷಿಸಿದ್ದಾರೆ. ನವೆಂಬರ್ 21, 2023 ರಂದು ಕೊಲಕಾತಾದಲ್ಲಿ ನಡೆದ ‘ಬಂಗಾಳ ಗ್ಲೋಬಲ್ ಬಿಸಿನೆಸ್ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡುವಾಗ ಮುಖೇಶ್ ಅಂಬಾನಿ ಅವರು ಈ ಘೋಷಣೆ ಮಾಡಿದರು.

ಅಂಬಾನಿಯವರು ಮಾತನಾಡುತ್ತಾ, ಕೋಲಕಾತಾದ ಕಾಳಿಘಾಟ್ ದೇವಸ್ಥಾನದ ಜೀರ್ಣೋದ್ಧಾರ ಮತ್ತು ನೂತನೀಕರಣದ ಜವಾಬ್ದಾರಿಯನ್ನು ‘ರಿಲಾಯನ್ಸ್ ಫೌಂಡೇಶನ್’ ವಹಿಸಿಕೊಳ್ಳಲಿದೆಯೆಂದು ಹೇಳಿದರು. ಬಂಗಾಳದ ಪ್ರಾಚೀನ ವೈಭವವನ್ನು ಮರಳಿ ತರುವಲ್ಲಿ ಪಾಲುದಾರರಾಗಲು ‘ರಿಲಾಯನ್ಸ್ ಫೌಂಡೇಶನ್’ ಬದ್ಧವಾಗಿದೆ. ಈ ಯೋಜನೆಯು ಅವರಿಗೆ ಮತ್ತು ಅವರ ಪತ್ನಿ ನೀತಾ ಅಂಬಾನಿಗೆ ಅತ್ಯಂತ ಆತ್ಮೀಯ ವಿಷಯವಾಗಿದೆ. ‘ರಿಲಾಯನ್ಸ್‌’ಗೆ ಬಂಗಾಳವು ಅತಿದೊಡ್ಡ ಹೂಡಿಕೆಯ ತಾಣವಾಗಿದೆ ಎಂದು ಅಂಬಾನಿ ಹೇಳಿದರು.