ನೂಹ (ಹರಿಯಾಣ) – ಇಲ್ಲಿ ಪುನಃ ಗೋಹತ್ಯೆ ನಡೆದಿದೆ. ಕೆಲವರು ರಾತ್ರಿ ಜಮೀನಿನಲ್ಲಿ ಹಸುಗಳನ್ನು ತಂದು ಹತ್ಯೆ ಮಾಡುತ್ತಿದ್ದಾರೆ, ಎಂದು ನೂಂಹ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಮೇರೆಗೆ ಪೊಲೀಸರು ರಾತ್ರಿ ದಾಳಿ ನಡೆಸಿ ಹಸನ್ ಮಹಮ್ಮದ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ಸ್ಥಳದಲ್ಲಿದ್ದ ಕೆಲವು ಗೋಹಂತಕರು ಕತ್ತಲೆಯ ಲಾಭ ಪಡೆದು ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ೮ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಸನ್ ಮಹಮ್ಮದನಿಂದ ೨ ಜೀವಂತ ಹಸುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಂದು ಹಸು ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಸನ್ ಮಹಮ್ಮದ ಸಹಿತ ಎಲ್ಲಾ ಆರೋಪಿಗಳ ವಿರುದ್ಧ ಜಾನುವಾರು ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನೂಂಹದಲ್ಲಿ ಪ್ರತಿ ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಹತ್ಯೆ ಮಾಡಿ ಅವುಗಳ ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ, ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ನೂಂಹದಲ್ಲಿ ಕಳೆದ ತಿಂಗಳು ಕೆಲವು ಕಳ್ಳಸಾಗಣೆದಾರರನ್ನು ಬಂಧಿಸಲಾಗಿತ್ತು. ಗೋಹತ್ಯೆಯನ್ನು ತಡೆಯುವ ಮೋನು ಮಾನೆಸರ ಮತ್ತು ಬಿಟ್ಟು ಬಜರಂಗಿ ವಿರುದ್ಧ ಮತಾಂಧರು ಅಭಿಯಾನ ಆರಂಭಿಸಿದ್ದರು. ಜಲಾಭಿಷೇಕ ಯಾತ್ರೆಯ ವೇಳೆ ಬಿಟ್ಟು ಬಜರಂಗಿ ಮೇಲೆ ದಾಳಿ ನಡೆದಿದೆ. ಇದೇ ಅವಧಿಯಲ್ಲಿ ಮೋನು ಮಾನೆಸರ ಮೇಲೂ ಆಕ್ರಮಣ ಮಾಡುವ ಸಿದ್ಧತೆ ನಡೆದಿತ್ತು.