ಇಂಫಾಲ (ಮಣಿಪುರ) ಇಲ್ಲಿ ‘ಯು.ಎಫ್’ಓ.’ ಕಂಡಿದೆ ಎಂದು ಭಾರತೀಯ ವಾಯುದಳದಿಂದ ಹುಡುಕಾಟ !

ರಾಫೆಲ್ ವಿಮಾನಗಳಿಗೂ ಏನು ಸಿಗಲಿಲ್ಲ!
(ಯು.ಎಫ್.ಓ.' (ಅನ್ ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್), ಎಂದರೆ ಹಾರುವ ಅಜ್ಞಾತ ವಸ್ತು)

ಇಂಫಾಲ್ (ಮಣಿಪುರ) – ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಹಾರುವ ಅಜ್ಞಾತ ವಸ್ತು ಕಂಡಿರುವ ಮಾಹಿತಿ ದೊರೆತನಂತರ ಮತ್ತು ಅದರ ಒಂದು ವಿಡಿಯೋ ಕೂಡ ಪ್ರಸಾರವಾಯಿತು. ಬಳಿಕ ಭಾರತೀಯ ವಾಯುದಳವು ಈ ವಸ್ತುವಿನ ಹುಡುಕಾಟಕ್ಕಾಗಿ ಎರಡು ರಾಫೆಲ ಯುದ್ಧವಿಮಾನ ಕಳುಹಿಸಿತು. ಅತ್ಯಾಧುನಿಕ ಸೆನ್ಸಾರ್ಸ್ ಇರುವ ಈ ವಿಮಾನಗಳು ಅನುಮಾನಸ್ಪದ ಪ್ರದೇಶದಲ್ಲಿ ಹುಡುಕಾಟ ನಡೆಸಿತು; ಆದರೆ ಆ ವಸ್ತು ಎಲ್ಲಿಯೂ ಕಾಣಲಿಲ್ಲ. ಈ ಘಟನೆಯಿಂದ ಅನೇಕ ವ್ಯಾಸಾಯಿಕ ವಿಮಾನಗಳ ಉಡಾವಣೆಯ ಮೇಲೆ ಪರಿಣಾಮವಾಯಿತು. ಈ ವಿಮಾನ ಉಡಾವಣೆಯ ಸಮಯ ಬದಲಾಯಿಸಲಾಯಿತು.

ವಾಯುದಳದ ‘ಈಸ್ಟರ್ ಕಮಾಂಡ್’ ವು ಟ್ವೀಟ್ ಮಾಡಿ, ಭಾರತೀಯ ವಾಯುದಳವು ಇಂಫಾಲ್ ವಿಮಾನ ನಿಲ್ದಾಣದಲ್ಲಿ ಹೇಳಲಾದ ‘ಯು.ಎಫ್.ಓ.’ ಗೆ ಸಂಬಂಧಿತ ವಿಡಿಯೋ ಆಧಾರದಲ್ಲಿ ಸುರಕ್ಷೆಗಾಗಿ ‘ಏರ್ ಡಿಫೆನ್ಸ್ ರೆಸ್ಪಾಂನ್ಸ್ ಮೆಕ್ಯಾನಿಸಂ’ ವ್ಯವಸ್ಥೆ ಸಕ್ರಿಯಗೊಳಿಸಲಾಯಿತು; ಆದರೆ ಅಂತಹ ಯಾವುದೇ ಹಾರುವ ವಸ್ತು ಕಂಡು ಬಂದಿಲ್ಲ ಎಂದು ಹೇಳಿದರು.

(ಸೌಜನ್ಯ : ANI News)