ಮೊಹಾಲಿ (ಪಂಜಾಬ್) – ಚಂಡಿಗಡ ವಿಮಾನ ನಿಲ್ದಾಣದ ಹೊರಗೆ ‘ಖಲಿಸ್ತಾನ ಜಿಂದಾಬಾದ್‘ ಘೋಷಣೆ ನೀಡಿದ ಘಟನೆ ನಡೆದಿದೆ. ಈ ಘೋಷಣೆಯ ಹೊಣೆಯನ್ನು ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ‘ಸಿಖ್ ಫರ್ ಜಸ್ಟೀಸ್‘ನ ಮುಖ್ಯಸ್ಥ ಗುರುಪತವಂತ ಸಿಂಗ್ ಪನ್ನು ಹೊತ್ತಿದ್ದಾರೆ. ಪನ್ನು ಅದರ ವೀಡಿಯೋ ಕೂಡ ಪ್ರಸಾರ ಮಾಡಿದ್ದಾನೆ. ಆತ ಏರ್ ಇಂಡಿಯಾ ವಿಮಾನಗಳನ್ನು ಬಹಿಷ್ಕರಿಸುವಂತೆ ಘೋಷಿಸಿದ್ದ. ಆತ ವಿಡಿಯೋದಲ್ಲಿ, ನಮ್ಮ ಸಂಘಟನೆಗೆ ಅಮೃತಸರ, ಕರ್ಣಾವತಿ ಮತ್ತು ದೆಹಲಿ ವಿಮಾವನಿಲ್ದಾಣಗಳಿಗೆ ಪ್ರವೇಶವಿದೆ. ಖಲಿಸ್ತಾನಿ ರಾಷ್ಟ್ರದ ಹಿತಾಸಕ್ತಿಗಳನ್ನು ರಕ್ಷಿಸಲು ನವೆಂಬರ್ ೧೯ ರ ನಂತರ ಏರ್ ಇಂಡಿಯಾದ ವಿಮಾನದಿಂದ ಪ್ರಯಾಣಿಸಬೇಡಿ: ಏಕೆಂದರೆ ಸಿಖ್ಖರ ಭಾವಿ ಪೀಳಿಗೆ ಅಪಾಯಕ್ಕೆ ಒಳಗಾಗ ಬಹುದು.
ಕೆಲವು ದಿನಗಳ ಹಿಂದೆಯೇ ಪನ್ನು ನವೆಂಬರ್ ೧೯ ರಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಂತೆ ಮನವಿ ಮಾಡಿದ್ದ. ಹಾಗೆಯೇ ಆ ದಿನ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದ್ದ.
ಸಂಪಾದಕೀಯ ನಿಲುವುಖಲಿಸ್ತಾನದ ಕೀಟವನ್ನು ಹತ್ತಿಕ್ಕಲು ರಾಷ್ಟ್ರಪ್ರೇಮಿ ಸಿಖ್ಖರು ಮುಂದೆ ಬರುವುದು ಅವಶ್ಯಕ ! |