ಇಸ್ರೇಲ್ ಹಮಾಸ್ ಯುದ್ಧದಲ್ಲಿನ ನಾಗರಿಕರ ಸಾವಿಗೆ ನನ್ನ ಖಂಡನೆ ! – ಪ್ರಧಾನಮಂತ್ರಿ ಮೋದಿ 

ನವ ದೆಹಲಿ – ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ನಡೆಯುವ ಘಟನೆಯಿಂದ ಹೊಸ ಸವಾಲುಗಳು ನಿರ್ಮಾಣವಾಗುತ್ತಿದೆ. ಭಾರತವು ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿತ್ತು. ನಾವು ತಾಳ್ಮೆಯಿಂದ ಇದ್ದೇವೆ. ನಾವು ಸಂವಾದ ಮತ್ತು ಮುತ್ಸದ್ದಿತನದ ಮೇಲೆ ಒತ್ತು ನೀಡಿದ್ದೇವೆ. ನಾವು ಇಸ್ರೇಲ್ ಹಮಾಸ್ ಯುದ್ಧದಲ್ಲಿನ ಸಾಮಾನ್ಯ ನಾಗರಿಕರ ಸಾವನ್ನು ಖಂಡಿಸುತ್ತೇವೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಹೇಳಿದರು. ಇನ್ನೊಂದು ‘ವಾಯ್ಸ್ ಆಫ್ ಗ್ಲೋಬಲ್’ ಶಿಖರ ಸಮ್ಮೇಳನದ ಉದ್ಘಾಟನೆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಧಾನಮಂತ್ರಿ ಮೋದಿ ಇವರು ಮಾತು ಮುಂದುವರಿಸಿ, ನಾವು ಪ್ಯಾಲೆಸ್ಟೈನ್‌ರಾಷ್ಟ್ರಪತಿ ಮಹಬೂಬ್ ಅಬ್ಬಾಸ್ ಇವರ ಜೊತೆಗೆ ಮಾತನಾಡಿದ ನಂತರ ಪ್ಯಾಲೆಸ್ಟೈನ್‌ಜನರಿಗೆ ಸಾಮಗ್ರಿಗಳನ್ನು ಕಳುಹಿಸಿದೆವು. ‘ಗ್ಲೋಬಲ್ ಸೌಥದ ಜನರು ಒಟ್ಟಾಗಿ ಸೇರಲು ಇದೇ ಸಮಯ ಇದೆ. (‘ಗ್ಲೋಬಲ್ ಸೌಥ’ ಇದು ಮುಖ್ಯವಾಗಿ ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡದಲ್ಲಿನ ಪೃಥ್ವಿಯ ದಕ್ಷಿಣ ಗೋಲಾರ್ಧದಲ್ಲಿ ಇರುವಂತಹ ದೇಶಗಳ ಸಮೂಹವಾಗಿದೆ. ಇಲ್ಲಿ ಆರ್ಥಿಕ ಅಭಿವೃದ್ಧಿ ಆಗುತ್ತಿದೆ.)