Uttarakhand Tunnel Collapse : ಉತ್ತರಾಖಂಡದಲ್ಲಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಸಮರೋಪಾದಿಯಲ್ಲಿ ಪ್ರಯತ್ನ !

24 ಗಂಟೆಗಳ ನಂತರ ಬಿಡುಗಡೆಯಾಗುವ ಸಾಧ್ಯತೆ

ಉತ್ತರಕಾಶಿ (ಉತ್ತರಾಖಂಡ) – ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ಸಿಲ್ಕ್ಯಾರಾ ಸುರಂಗದಲ್ಲಿ ಭೂಕುಸಿತದಿಂದ ಸಿಲುಕಿರುವ 40 ಕಾರ್ಮಿಕರನ್ನು ಇನ್ನೂ ರಕ್ಷಿಸಲಾಗಿಲ್ಲ. 5 ದಿನಗಳ ನಂತರವೂ ಅವರನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ. ಪ್ರಸ್ತುತ, ಈ ಕಾರ್ಮಿಕರಿಗೆ ಸಣ್ಣ ಪೈಪ್ ಮೂಲಕ ಆಮ್ಲಜನಕ ಮತ್ತು ಆಹಾರವನ್ನು ಪೂರೈಸಲಾಗುತ್ತಿದೆ. ಈ ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಅವರನ್ನು ಸಂಪರ್ಕಿಸಲಾಗುತ್ತಿದೆ. ಅವರೊಂದಿಗೆ ಸಂಪರ್ಕಿಸಲು ಮಣ್ಣಿನ ಗುಡ್ಡೆಗಳನ್ನು ಸರಿಸಲು ವಿದೇಶದಿಂದ ಯಂತ್ರವನ್ನು ತರಿಸಲಾಗುತ್ತಿದೆ. ಸದ್ಯ ಸಿಲುಕಿರುವ ಕಾರ್ಮಿಕರ ಮಾನಸಿಕ ಸ್ಥಿತಿಯ ಮೇಲೆ ನಿಗಾ ಇಡಲಾಗಿದೆ. ಸುರಂಗದಿಂದ ಅವರನ್ನು ಹೊರತೆಗೆಯಲು ಇನ್ನೂ 24 ಗಂಟೆ ಬೇಕಾಗುವ ನಿರೀಕ್ಷೆಯಿದೆಯೆಂದು ಹೇಳಲಾಗುತ್ತಿದೆ.

ಸುರಂಗವಿರುವ ಪರ್ವತದ ಸ್ಥಿತಿಯು ಅತ್ಯಂತ ನಾಜೂಕಾಗಿದೆ. ಈ ಹಿನ್ನೆಲೆಯಲ್ಲಿ ನಾರ್ವೆ ಮತ್ತು ಥಾಯ್ಲೆಂಡ್‌ನ ತಜ್ಞರಿಂದ ಮಾರ್ಗದರ್ಶನ ಪಡೆಯಲಾಗುತ್ತಿದೆ. ಕಾರ್ಮಿಕರನ್ನು ಹೊರಗೆ ತೆಗೆಯಲು 90 ಸೆಂ.ಮೀ ಅಗಲದ ಪೈಪ್ ಹಾಕಲು ಪ್ರಯತ್ನಿಸಲಾಗುವುದು. ಈ ಪೈಪ್ ನಲ್ಲಿ ‘ಎಕ್ಸೆಪ್ ಟನಲ್’ ಅಳವಡಿಸುವ ಸಾಧ್ಯತೆ ಇದೆ. ಆದುದರಿಂದ ಪೈಪ್‌ನಿಂದ ಹೊರಬರುವಾಗ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.