ಲಕ್ಷ್ಮಣಪುರಿ (ಉತ್ತರಪ್ರದೇಶ) – ಮೌಲಾನಾ ಸಯ್ಯದ್ ಅರ್ಶದ್ ಇವರು ಮುಸ್ಲಿಂ ಸಮಾಜದ ಹುಡುಗಿಯರಿಗಾಗಿ ಸ್ವತಂತ್ರ ಶಾಲೆ ಮತ್ತು ಕಾಲೇಜುಗಳನ್ನು ತೆರೆಯುವಂತೆ ಆಗ್ರಹಿಸಿದ್ದಾರೆ. ಮದನಿ, ೮ ನೇ ತರಗತಿಯಿಂದ ಮುಸ್ಲಿಂ ಹುಡುಗಿಯರಿಗಾಗಿ ಸ್ವತಂತ್ರ ಶಾಲೆ ತೆರೆಯಬೇಕು. ಜಮಿಯತ್ ಉಲೇಮಾ-ಏ-ಹಿಂದ (ಅರ್ಶದ ಮದನಿ ಗುಂಪು) ಇವರು ಆಯೋಜಿಸಿದ್ದ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು. ಈ ಪರಿಷತ್ತಿನಲ್ಲಿ ಎಂಟನೇ ತರಗತಿ ನಂತರ ಹೆಣ್ಣು ಮಕ್ಕಳಿಗಾಗಿ ಸ್ವತಂತ್ರ ಶಾಲೆ ತೆರೆಯಬೇಕು, ಮತದಾರ ಜನಜಾಗೃತಿ ಅಭಿಯಾನ ನಡೆಸಬೇಕು, ಮತದಾರರ ಪಟ್ಟಿಯಲ್ಲಿ ಹೊಸ ಹೆಸರು ಸೇರಿಸಬೇಕು, ಇದರ ಜೊತೆಗೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ಸಮಯದಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿನ ೧೭ ಜಿಲ್ಲೆಗಳ ಅಧಿಕಾರಿ ಹಾಗೂ ಸದಸ್ಯರು ಸಹಭಾಗಿದ್ದರು.
ಈದ್ಗಾಹ ಮಾರ್ಗದಲ್ಲಿರುವ ಮದನಿ ಮೆಮೋರಿಯಲ್ ಸ್ಕೂಲಿನಲ್ಲಿ ಈ ಪರಿಷತ್ತಿನ ಆಯೋಜನೆ ಮಾಡಲಾಗಿತ್ತು. ಈ ಪರಿಷತ್ತಿನ ಅಧ್ಯಕ್ಷ ಸ್ಥಾನದಲ್ಲಿರುವ ಜಮಿಯತ್ ನ ಪ್ರಾಂತಿಯ ಅಧ್ಯಕ್ಷ ಮೌಲಾನಾ ಅಶಹದ್ ರಶೀದಿ ಇವರು, ಉಲೇಮಾ-ಎ-ಹಿಂದ ಇದರ ಸ್ಥಾಪನೆಯ ಮೂಲ ಉದ್ದೇಶ ರಾಷ್ಟ್ರ ಮತ್ತು ದೇಶ ಸೇವೆಯ ಜೊತೆಗೆ ಇಸ್ಲಾಮಿಕ ಮೌಲ್ಯದ ರಕ್ಷಣೆ ಮಾಡುವುದಾಗಿದೆ. ಪ್ರಜಾಪ್ರಭುತ್ವ ಸಶಕ್ತ ಗೊಳಿಸುವದಕ್ಕಾಗಿ ಜಮೀಯತ್ ನಿಂತಿದೆ ಎಂದು ಹೇಳಿದರು. ಆ ಸಮಯದಲ್ಲಿ ಮೌಲಾನಾ ಅಜಹರ್ ಮದನಿ, ಮೌಲಾನ ಹಬೀಬುಲ್ಲಾ ಮದನಿ ಮತ್ತು ಆಫೀಜ್ ಅಬ್ದುಲ್ಲ ಕದ್ದುಸ್ ಹಾದಿ ಸಹಿತ ಇತರ ವಕ್ತಾರರೂ ಭಾಷಣ ಮಾಡಿದರು.
ಸಂಪಾದಕೀಯ ನಿಲುವುಮುಸ್ಲಿಂ ಹುಡುಗ-ಹುಡುಗಿಯರು ಮುಖ್ಯ ವಾಹಿನಿಗೆ ಬಂದು ಶಿಕ್ಷಣ ಪಡೆಯಬೇಕು, ಇದಕ್ಕಾಗಿ ಸರಕಾರ ಪ್ರಯತ್ನ ಮಾಡುತ್ತಿರುವಾಗ ಮುಸ್ಲಿಂ ಹುಡುಗಿಯರಿಗಾಗಿ ಸ್ವತಂತ್ರ ಶಾಲೆ ತೆರೆಯಲು ಆಗ್ರಹಿಸುವುದೆಂದರೆ ರಸತಾಳಕ್ಕೆ ಹೋಗುವಂತಾಗುತ್ತದೆ. |