ಡಿಸೆಂಬರ್ 31 ರಿಂದ ಕೋಲಕಾತಾದಲ್ಲಿ ಅಂಡರ ವಾಟರ ಮೆಟ್ರೋ ಪ್ರಾರಂಭ

ಹೂಗ್ಲಿ ನದಿಯ ತಳದಿಂದ 13 ಮೀಟರ್ ಕೆಳಗೆ ಸುರಂಗ

ಕೋಲಕಾತಾ (ಬಂಗಾಳ) – ದೇಶದ ಮೊದಲ ನೀರೊಳಗಿನ ಮೆಟ್ರೋ ರೈಲು ಕೋಲಕಾತಾದಲ್ಲಿ 31 ಡಿಸೆಂಬರ್ 2023 ರಂದು ಓಡಲಿದೆ. ನೆಲದಿಂದ 33 ಮೀಟರ್ ಅಡಿ ಮತ್ತು ಹೂಗ್ಲಿ ನದಿಯ ತಳದಿಂದ 13 ಮೀಟರ್ ಕೆಳಗೆ 520 ಮೀಟರ್ ಉದ್ದದ ಸುರಂಗದಲ್ಲಿ ಹಳಿಗಳನ್ನು ಹಾಕಲಾಗಿದೆ. ಹೌರಾ ನಿಲ್ದಾಣದಿಂದ ಮಹಾಕರನ್ ನಿಲ್ದಾಣದವರೆಗಿನ ಮೆಟ್ರೋದ ಅಂತರ 520 ಮೀಟರ್ ಉದ್ದದ ಪ್ರವಾಸವನ್ನು ಸುರಂಗದ ಮೂಲಕ ಪೂರ್ಣಗೊಳಿಸಲಾಗುತ್ತದೆ. ಇದು ಗಂಟೆಗೆ 80 ಕಿ.ಮೀ. ವೇಗದಲ್ಲಿ ಕೇವಲ 45 ಸೆಕೆಂಡುಗಳಲ್ಲಿ ಸುರಂಗದ ಮೂಲಕ ಹಾದುಹೋಗುತ್ತದೆ. ಈ ಸುರಂಗದ ಮೂಲಕ ಹೌರಾವನ್ನು ನೇರವಾಗಿ ಕೋಲಕಾತಾಗೆ ಸಂಪರ್ಕಿಸಲಾಗುತ್ತದೆ. ಇದರಿಂದ ದಿನಕ್ಕೆ 7 ರಿಂದ 10 ಲಕ್ಷ ಜನರಿಗೆ ಅನುಕೂಲವಾಗಲಿದೆ. 1984 ರಲ್ಲಿ ಕೋಲಕಾತಾದಲ್ಲಿಯೇ ದೇಶದ ಮೊದಲ ಮೆಟ್ರೋ ರೈಲು ಪ್ರಾರಂಭವಾಗಿತ್ತು.