Lakh Diyas Ayodhya : ದೀಪಾವಳಿಯಲ್ಲಿ ಅಯೋಧ್ಯೆಯ ಸರಯೂ ನದಿಯ ೫೧ ದಡಗಳಲ್ಲಿ ೨೪ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು !

ಅಯೋಧ್ಯೆ (ಉತ್ತರಪ್ರದೇಶ) – ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಯಂದು ಇಲ್ಲಿನ ಸರಯೂ ನದಿಯ ೫೧ ಘಾಟಗಳಲ್ಲಿ ದೀಪಗಳನ್ನು ಬೆಳಗಿಸಲಾಗುವುದು. ಈ ವರ್ಷ ೨೪ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಇದು ಒಂದು ವಿಶ್ವದಾಖಲೆ ಆಗಬಹುದು ಎಂದು ಹೇಳಲಾಗುತ್ತಿದೆ. ಇದೇ ವೇಳೆ ‘ಲೇಸರ್ ಶೋ‘ ಮಾಧ್ಯಮದ ಮೂಲಕ ಭಗವಾನ ಶ್ರೀ ರಾಮನ ಚರಿತ್ರೆಯನ್ನು ತೋರಿಸಲಾಗುವುದು. ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಏಳನೇ ದೀಪೋತ್ಸವವಾಗಿದೆ.

ಈ ದೀಪೋತ್ಸವದಲ್ಲಿ ೨೫ ಸಾವಿರಕ್ಕೂ ಅಧಿಕ ಸ್ವಯಂಸೇವಕರು ಭಾಗವಹಿಸುವರು. ದೀಪೋತ್ಸವದಲ್ಲಿ ವಿದೇಶಿ ಕಲಾವಿದರು ರಾಮಲೀಲಾ ಕಾರ್ಯಕ್ರಮದಲ್ಲಿ ಸಹಭಾಗಿಯಾಗುವರು. ಇದರಲ್ಲಿ ರಷ್ಯಾ, ಶ್ರೀಲಂಕಾ, ಸಿಂಗಾಪುರ ಮತ್ತು ನೇಪಾಳದ ಕಲಾವಿದರು ಭಾಗವಹಿಸಲಿದ್ದಾರೆ. ದೇಶದಲ್ಲಿಯ ೨೧ ರಾಜ್ಯಗಳ ಜನರು ರಾಮಾಯಣ ಮತ್ತು ರಾಮಲೀಲಾ ಸಂಪ್ರದಾಯಗಳನ್ನು ಆಧರಿಸಿ ಪ್ರದರ್ಶನ ಮಾಡಲಿದ್ದಾರೆ. ಇದಕ್ಕಾಗಿ ಎರಡೂವರೆ ಸಾವಿರ ಕಲಾವಿದರು ಅಯೋಧ್ಯೆ ತಲುಪಿದ್ದಾರೆ ಎಂದು ಅಂದಾಜಿಸಲಾಗಿದೆ.