ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರಿಗೆ ಸಹಾಯ ಮಾಡಿದ್ದಕ್ಕಾಗಿ ದೇಶಾದ್ಯಂತ 47 ಜನರ ಬಂಧನ

ನವದೆಹಲಿ – ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ದೇಶಾದ್ಯಂತ 8 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ 55 ಸ್ಥಳಗಳಲ್ಲಿ ದಾಳಿ ನಡೆಸಿ 47 ಜನರನ್ನು ಬಂಧಿಸಿದೆ. ರೋಹಿಂಗ್ಯಾ ಮುಸಲ್ಮಾನರಿಗೆ ಭಾರತದಲ್ಲಿ ನುಸುಳಲು ಮತ್ತು ಅವರನ್ನು ದೇಶದಲ್ಲಿ ನೆಲೆಸಲಿಕ್ಕಾಗಿ ವ್ಯವಸ್ಥೆ ಮಾಡುವ ಜನರನ್ನು ಬಂಧಿಸಲಾಗಿದೆ. ಈ ಪೈಕಿ ತ್ರಿಪುರಾದಿಂದ 21, ಕರ್ನಾಟಕದಿಂದ 10, ಅಸ್ಸಾಂನಿಂದ 5, ಬಂಗಾಳದಿಂದ 3, ತಮಿಳುನಾಡಿನಿಂದ 2 ಮತ್ತು ಹರಿಯಾಣ, ತೆಲಂಗಾಣ ಮತ್ತು ಪುದುಚೇರಿಯಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ. ಇದಲ್ಲದೆ, ರಾಜಸ್ಥಾನ ಮತ್ತು ಜಮ್ಮು- ಕಾಶ್ಮೀರದಿಂದ ಕೆಲವರನ್ನು ಬಂಧಿಸಲಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವರನ್ನು ಅಸ್ಸಾಂ ಪೊಲೀಸರು ವಿಚಾರಣೆಗೊಳಪಡಿಸಿದಾಗ ಅವರು ಬಾಂಗ್ಲಾದೇಶಿ ನುಸುಳುಕೋರರು ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವತಃ ಈ ವಿಚಾರಣೆಯ ಮೇಲೆ ಗಮನವಿಟ್ಟಿದ್ದಾರೆ.

1. ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸಿದ ದಾಳಿಯಲ್ಲಿ ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ 20 ಲಕ್ಷ ರೂಪಾಯಿ ಹಾಗೂ 4 ಸಾವಿರದ 550 ಅಮೆರಿಕನ್ ಡಾಲರ್ (ಅಂದಾಜು 3 ಲಕ್ಷ 78 ಸಾವಿರ ರೂಪಾಯಿ) ವಶಪಡಿಸಿಕೊಂಡಿದ್ದಾರೆ.

2. ಗಡಿ ಭದ್ರತಾ ಪಡೆಯ ಸಹಾಯದಿಂದ ಬಾಂಗ್ಲಾದೇಶದಿಂದ 450 ನುಸುಳುಕೋರರು ಮತ್ತು ರೋಹಿಂಗ್ಯಾಗಳನ್ನು ದೇಶದ ಒಳಗೆ ಪ್ರವೇಶಿಸದಂತೆ ತಡೆದು ವಾಪಸ್ ಕಳುಹಿಸಲಾಗಿದೆ ಎಂದು ಅಸ್ಸಾಂ ವಿಶೇಷ ಪೊಲೀಸ್ ಮಹಾನಿರ್ದೇಶಕ ಹರ್ಮೀತ್ ಸಿಂಗ್ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳಿಗೆ ಮರಣದಂಡನೆ ವಿಧಿಸಲು ಸರಕಾರ ಕಾನೂನು ರಚಿಸಬೇಕು!