Assam Janata Raja : ಅಸ್ಸಾಂನಲ್ಲಿ ‘ಜನತಾ ರಾಜಾ’ ಮಹಾನಾಟಕದ ಪ್ರಯೋಗ ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಆಸ್ಸಾಂನ ಮಹಾನ್ ಹಿಂದೂ ಯೋಧ ಲಚಿತ ಬರಫುಕನ್ ಅವರ ಜೀವನ ಚರಿತ್ರೆಯನ್ನು ಈ ರೀತಿಯ ನಾಟಕದ ರೂಪದಲ್ಲಿ ಜಗತ್ತಿನೆದುರಿಗೆ ತರುವ ಉದ್ದೇಶ !

ಗೌಹತ್ತಿ (ಆಸ್ಸಾಂ) – ಛತ್ರಪತಿ ಶಿವಾಜಿ ಮಹಾರಾಜರ ಜೀವನಾಧಾರಿತ ‘ಜಾಣತಾ ರಾಜಾ’ ಈ ಮಹಾನಾಟಕವನ್ನು ಅಸ್ಸಾಂ ರಾಜ್ಯದಲ್ಲಿ ಪ್ರದರ್ಶಿಸಲಾಗುವುದು. ಅದರ ಆಧಾರದಲ್ಲಿ ಮುಂದೆ ಅಸ್ಸಾಂನ ಮಹಾನ್ ಹಿಂದೂ ಯೋಧ ಲಚಿತ ಬರಫುಕಾನ್ ಅವರ ಜೀವನ ಚರಿತ್ರೆಯನ್ನು ಸಹ ಅಂತಹದೇ ನಾಟಕದ ರೂಪದಲ್ಲಿ ಜಗತ್ತಿನೆದುರಿಗೆ ತರಲಾಗುವುದು ಎಂದು ಆಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರು ಮಾಹಿತಿ ನೀಡಿದ್ದಾರೆ.

ಶರ್ಮಾ ತಮ್ಮ ಮಾತನ್ನು ಮುಂದುವರಿಸಿ,

1. ಛತ್ರಪತಿ ಶಿವಾಜಿ ಮಹಾರಾಜರು ಮೊಘಲರ ಆಕ್ರಮಣವನ್ನು ಹಿಮ್ಮೆಟ್ಟಿಸಿದಂತೆಯೇ, ಲಚಿತ ಬರಫುಕನ ಕೂಡ ಮೊಘಲರೊಂದಿಗೆ ಹೋರಾಡಿದರು. ಆದಾಗ್ಯೂ, ಲಚಿತರ ಇತಿಹಾಸ ಮತ್ತು ಪರಾಕ್ರಮದ ಪರಿಚಯವು ಅಸ್ಸಾಂಗೆ ಮಾತ್ರ ಸೀಮಿತವಾಗಿ ಉಳಿದಿದೆ. (ಇದು ಜಾತ್ಯತೀತ ಭಾರತದ ದುರಂತ. ಭಾರತದ ಗೌರವಶಾಲಿ ಇತಿಹಾಸ ಅವರ ಮುಂದಿನ ಪೀಳಿಗೆಯ ವರೆಗೆ ತಲುಪದಂತೆ ‘ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುವ’ ನೆಹರುರವರ ಮತ್ತು ‘ಸಂಸ್ಕೃತವನ್ನು ಮೃತಭಾಷೆ ಎಂದು ಕರೆಯುವ’ ರಾಜೀವ್ ಗಾಂಧಿಯವರ ಕಾಂಗ್ರೆಸ್ ಜವಾಬ್ದಾರವಾಗಿದೆ ಎನ್ನುವುದನ್ನು ತಿಳಿಯಬೇಕಾಗಿದೆ. ! – ಸಂಪಾದಕರು)

2. ಭಾರತದ ಜನತೆಗೆ ಬರಫುಕನ ಇವರ ಚರಿತ್ರೆಯ ಪರಿಚಯ ಆಗಬೇಕು ಎಂದು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಆಧರಿಸಿದ ‘ಜಾಣತಾ ರಾಜಾ’ನಾಟಕದಂತೆಯೇ ಬರಫುಕನ ಅವರ ಜೀವನ ಚರಿತ್ರೆಯ ಮೇಲೆಯೂ ನಾಟಕ ಮಾಡಬೇಕು ಎಂದು ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದರು. ಇದೇ ಆಧಾರದಲ್ಲಿ ‘ಆಸ್ಸಾಂನ ನಾಟಕಕಾರರಿಗೆ ಲಚಿತ್ ಬರಫುಕನ ಇವರ ಚರಿತ್ರೆಯ ಮೇಲೆ ನಾಟಕ ಪ್ರದರ್ಶಿಸಲು ಅನುಭವ ಸಿಗಬೇಕು’ಎಂದು ಅಸ್ಸಾಂ ನಲ್ಲಿ ಎಲ್ಲೆಡೆ `ಜಾಣತಾ ರಾಜಾ’ ನಾಟಕದ ಪ್ರಯೋಗ ಏರ್ಪಡಿಸಲಾಗುವುದು.

ಮುಂಬೈನಲ್ಲಿ ಶ್ರೀ ಕಾಮಾಖ್ಯ ದೇವಿಯ ಮಂದಿರ ನಿರ್ಮಾಣ!

ಸರಮಾ ಮಾತನಾಡುತ್ತಾ, ಮಹಾರಾಷ್ಟ್ರದಲ್ಲಿ ಮತ್ತು ಮುಖ್ಯವಾಗಿ ಮುಂಬೈನಲ್ಲಿ ಹೆಚ್ಚಿನ ಸಂಖ್ಯೆಯ ಆಸ್ಸಾಮಿ ನಾಗರಿಕರು ವಾಸಿಸುತ್ತಿರುವುದರಿಂದ ಮುಂಬಯಿಯಲ್ಲಿ ಶ್ರೀ ಕಾಮಾಖ್ಯ ದೇವಿಯ ದೇವಾಲಯವನ್ನು ನಿರ್ಮಿಸಲಾಗುವುದು.ಇದಕ್ಕಾಗಿ ಭೂಮಿಯನ್ನು ಹುಡುಕಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಏಕನಾಥ ಶಿಂಧೆ ಅವರೊಂದಿಗೆ ಚರ್ಚಿಸಿದ್ದು, ಶೀಘ್ರವೇ ಈ ವಿಷಯದಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಇದರೊಂದಿಗೆ ಅಸ್ಸಾಂನಲ್ಲಿ ಮಹಾರಾಷ್ಟ್ರ ಸದನ ಸ್ಥಾಪಿಸಲು ಮುಖ್ಯಮಂತ್ರಿ ಏಕನಾಥ ಶಿಂಧೆ ಪ್ರಸ್ತಾಪಿಸಿದ್ದಾರೆ.