ಜಗತ್ತಿನೆದುರು ಆದರ್ಶವನ್ನಿಟ್ಟ ಇಸ್ರೈಲ್ !
ಇಸ್ರೈಲ್‌ನ ಸ್ವಾಭಿಮಾನ, ಶಿಸ್ತು ಹಾಗೂ ಆಡಳಿತಶೈಲಿ ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಗುತ್ತಿದೆ. ಈಗ ‘ಹಮಾಸ’ ಈ ಭಯೋತ್ಪಾದಕ ಸಂಘಟನೆ ಮಾಡಿದ ದಾಳಿಯ ನಂತರ ಇಸ್ರೈಲ್ ಪುನಃ ಎದ್ದು ನಿಲ್ಲಲು ಪ್ರಯತ್ನಿಸುತ್ತಿದೆ. ಹಮಾಸದ ಭಯೋತ್ಪಾದಕ ಆಕ್ರಮಣದಲ್ಲಿ ಇಸ್ರೈಲ್‌ನ ೨೦ ಗ್ರಾಮಗಳೂ ಪೂರ್ಣ ಧ್ವಂಸವಾಗಿವೆ. ಅದನ್ನು ಪುನಃ ನಿರ್ಮಿಸುವ, ಅಲ್ಲಿನ ನಾಗರಿಕರ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವ ಕಾರ್ಯವನ್ನು ಈಗ ಇಸ್ರೈಲ್‌ನ ಉಳಿದ ನಾಗರಿಕರೇ ವಹಿಸಿಕೊಂಡಿದ್ದಾರೆ. ಹೇಗೆ ಹಮಾಸ ಮಾಡಿದ ಆಕ್ರಮಣದಲ್ಲಿ ಮೃತಪಟ್ಟ ಇಸ್ರೈಲಿ ನಾಗರಿಕರ ವಿಡಿಯೋ ನೋಡಲು ಸಿಕ್ಕಿತೋ, ಹಾಗೆಯೇ ಅಲ್ಲಿನ ಸಹಾಯ ಕಾರ್ಯದ ವಿಡಿಯೋ ಈಗ ಕಾಣಿಸುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಒಂದು ಧ್ವನಿಚಿತ್ರಮುದ್ರಿಕೆಯಲ್ಲಿ ಇಸ್ರೈಲಿ ನಾಗರಿಕರು ಅಲ್ಲಿ ಹೇಗೆ ಸಹಾಯ ಕಾರ್ಯ ಆರಂಭಿಸಿದ್ದಾರೆ, ಎನ್ನುವುದರ ಬಗ್ಗೆ ಹೇಳಿದ್ದಾರೆ.
ಹೇಗೆ ನಡೆಯುತ್ತಿದೆ ಸಹಾಯ ಕಾರ್ಯ ?
೧. ಈ ಸಹಾಯ ಕಾರ್ಯದಲ್ಲಿ ನೂರಾರು ನಾಗರಿಕರು ಭಾಗವಹಿಸಿದ್ದಾರೆ. ದೇಶದಾದ್ಯಂತದ ನಾಗರಿಕರು ಅನೇಕ ಟ್ರಕ್‌ಗಳನ್ನು ತುಂಬಿಸಿ ಸಾಮಗ್ರಿಗಳನ್ನು ಕಳುಹಿಸಿದ್ದಾರೆ. ಅವುಗಳನ್ನು ಆ ಪರಿಸರದ ದೊಡ್ಡ ಒಂದು ಸಭಾಗೃಹದಲ್ಲಿ ಇಳಿಸಲಾಗುತ್ತಿದೆ. ಆ ಸಭಾಗೃಹದಲ್ಲಿ ಮೊದಲ ಹಂತದಲ್ಲಿ ಬಟ್ಟೆಗಳು, ಮಕ್ಕಳ ಆಟಿಗೆಗಳು, ಮಕ್ಕಳ ಡೈಪರ್, ಸಣ್ಣ ಮಕ್ಕಳ ಆಹಾರಪದಾರ್ಥ, ಚಪ್ಪಲ್, ಬೂಟ್, ಹಾಸಿಗೆಗಳು, ಇಲೆಕ್ಟ್ರಾನಿಕ್ ವಸ್ತುಗಳು ಮುಂತಾದ ಅನೇಕ ವಸ್ತುಗಳನ್ನು ಆಕ್ರಮಣದಲ್ಲಿ ಎಲ್ಲವನ್ನೂ ಕಳೆದುಕೊಂಡಿರುವವರಿಗೆ ನಾಗರಿಕರು ಕಳುಹಿಸಿದ್ದಾರೆ. ಆ ವಸ್ತುಗಳ ವರ್ಗೀಕರಣ ಮಾಡಿ ಪೆಟ್ಟಿಗೆಗಳಲ್ಲಿ ತುಂಬಿಸುವ ಕಾರ್ಯ ನಡೆಯುತ್ತಿದೆ.
೨. ಎರಡನೇ ಹಂತದಲ್ಲಿ ಆ ವಸ್ತುಗಳನ್ನು ಆವಶ್ಯಕತೆಗನುಸಾರ ಎಲ್ಲಿಗೆ ಕಳುಹಿಸಬೇಕೋ, ಅದಕ್ಕನುಸಾರ ವಿಭಜಿಸಲಾಗುತ್ತಿದೆ.
೩. ಅಲ್ಲಿ ಒಂದು ಸಮನ್ವಯ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ಆ ಕೇಂದ್ರದ ಮೂಲಕ ಕಳೆದುಹೋಗಿರುವ ನೂರಾರು ನಾಗರಿಕರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ನಮ್ಮ ನಾಗರಿಕರು ಸಿಗುವ ತನಕ ನಾವು ಗಾಝಾದಲ್ಲಿ ಉಗ್ರರನ್ನು ವಿಚಾರಿಸಿಕೊಳ್ಳುವೆವು ! – ಇಸ್ರೈಲಿ ಜನರ ಹೋರಾಟವೃತ್ತಿ
ಈ ಧ್ವನಿಚಿತ್ರಮುದ್ರಿಕೆಯಲ್ಲಿರುವ ಒಬ್ಬ ಇಸ್ರೈಲಿ ನಾಗರಿಕನು ಹಮಾಸ್‌ಗೆ ಎಚ್ಚರಿಕೆ ನೀಡಿದ್ದಾನೆ. ಅವನು ಹೇಳುತ್ತಾನೆ, ”ನೀವು ಶತ್ರುವಿನ ಆಯ್ಕೆ ಮಾಡುವಲ್ಲಿ ತಪ್ಪು ಮಾಡಿದ್ದೀರಿ. ಈಗ ಹಮಾಸ್‌ನ ಭಯೋತ್ಪಾದಕರು ಇಲ್ಲ ನಿರ್ನಾಮವಾಗುವರು ಅಥವಾ ಸೆರೆಮನೆಗೆ ತಳ್ಳಲ್ಪಡುವರು. ಎಲ್ಲಿಯವರೆಗೆ ನಮ್ಮ ಒಬ್ಬೊಬ್ಬ ನಾಗರಿಕನು ಸಿಗುವುದಿಲ್ಲವೋ, ಅಲ್ಲಿಯ ವರೆಗೆ ನಾವು ಗಾಝಾದ ಒಂದೊಂದು ಕಟ್ಟಡದೊಳಗೆ ನುಗ್ಗಿ ಭಯೋತ್ಪಾದಕರನ್ನು ಹುಡುಕಿ ತೆಗೆಯುವೆವು. ನೀವು ಕೇವಲ ಒಂದು ದೇಶದ ವಿರುದ್ಧ ಯುದ್ಧ ಸಾರಿದ್ದಲ್ಲ, ಈ ದೇಶದ ಒಬ್ಬೊಬ್ಬ ನಾಗರಿಕನ ವಿರುದ್ಧ ಯುದ್ಧ ಸಾರಿದ್ದೀರಿ.’’ (ಹೀಗೆ ಭಾರತದಲ್ಲಿ ಆಗಿರುವುದನ್ನು ಎಂದಾದರೂ ಕೇಳಿದ್ದೀರಾ ? ಭಾರತೀಯರು ಇದರಿಂದ ಪಾಠ ಕಲಿತು ಶತ್ರುರಾಷ್ಟ್ರಗಳ ವಿರುದ್ಧ ಇಂತಹ ಸ್ವರಾಷ್ಟ್ರಾಭಿಮಾನ ತೋರಿಸಬೇಕು ಹಾಗೂ ಆಕ್ರಮಣ ಮಾಡಿದ ಪರಿಸರದ ನಾಗರಿಕರಿಗೆ ಇಂತಹ ಸಹಾಯ ಕಾರ್ಯವನ್ನು ಮಾಡಬೇಕು. ಭಾರತೀಯರು ಈ ರೀತಿ ಸಂಘಟಿತರಾದರೆ ದೇಶಾಂತರ್ಗತ ಹಾಗೂ ದೇಶದ ಹೊರಗೆ ಇರುವ ಶತ್ರುಗಳು ನಿರ್ನಾಮವಾಗಲು ತಡವಾಗಲಿಕ್ಕಿಲ್ಲ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)