ಉತ್ತರಖಂಡದಲ್ಲಿನ ೩೦ ಮದರಸಾಗಳಲ್ಲಿ ಮುಸಲ್ಮಾನೇತರ ೭೪೯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ !

ಡೆಹರಾಡೂನ (ಉತ್ತರಖಂಡ) – ರಾಜ್ಯದಲ್ಲಿನ ೩೦ ಮದರಸಾಗಳಲ್ಲಿ ಮುಸಲ್ಮಾನೇತರ ವಿದ್ಯಾರ್ಥಿಗಳು ಇಸ್ಲಾಂ ಶಿಕ್ಷಣ ಪಡೆಯುತ್ತಿರುವ ಮಾಹಿತಿ ಬಹಿರಂಗವಾಗಿದೆ. ಇಲ್ಲಿಯವರೆಗೆ ಇಂತಹ ೭೪೯ ವಿದ್ಯಾರ್ಥಿಗಳ ಮಾಹಿತಿ ದೊರೆತಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚು ಹಿಂದೂ ವಿದ್ಯಾರ್ಥಿಗಳು ಇದ್ದಾರೆ. ಉಧಮಸಿಂಹ ನಗರ, ನೈನಿತಾಲ್ ಮತ್ತು ಹರಿದ್ವಾರ ಈ ಜಿಲ್ಲೆಯಲ್ಲಿ ಈ ಸಂಖ್ಯೆ ಎಲ್ಲಕ್ಕಿಂತ ಹೆಚ್ಚಾಗಿದೆ.

ಈ ಪ್ರಕರಣದಲ್ಲಿ ರಾಷ್ಟ್ರೀಯ ಬಾಲ ರಕ್ಷಣಾ ಆಯೋಗದಿಂದ ಉತ್ತರಖಂಡ ಮದರಸಾ ಶಿಕ್ಷಣ ಪರಿಷತ್ತಿಗೆ ನವಂಬರ್ ೨ ರಂದು ನೋಟಿಸ್ ವಿಧಿಸಿದೆ. ನವಂಬರ್ ೯ ವರೆಗೆ ಇದರ ಬಗ್ಗೆ ಉತ್ತರ ಕೇಳಿದೆ. ಅದರ ಪ್ರಕಾರ ಪರಿಷತ್ತಿನಿಂದ ತಯಾರಿಸಿರುವ ವರದಿಯಲ್ಲಿ, ರಾಜ್ಯದಲ್ಲಿ ಒಟ್ಟು ೭ ಸಾವಿರದ ೩೯೯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಇದರಲ್ಲಿ ೭೪೯ ವಿದ್ಯಾರ್ಥಿಗಳು ಮುಸಲ್ಮಾನೇತರ ಆಗಿದ್ದು ಅವರು ಬೇರೆ ಬೇರೆ ೩೦ ಮದರಸಾಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವರದಿ ಉತ್ತರಖಂಡ ಮದರಸ ಶಿಕ್ಷಣ ಪರಿಷತ್ತಿನ ಸಂಚಾಲಕ ರಾಜೇಂದ್ರ ಸಿಂಹ ಇವರು ಪ್ರಸ್ತುತಪಡಿಸಿದರು. ಇದರಲ್ಲಿ, ಮದರಸಾಗಳಲ್ಲಿ ಎನ್.ಸಿ.ಇ.ಆರ್.ಟಿ. ಯ ಸ್ತರದಲ್ಲಿ ಕಲಿಸಲಾಗುತ್ತದೆ. ಅದಕ್ಕಾಗಿ ಪೋಷಕರ ಒಪ್ಪಿಗೆ ಕೂಡ ಪಡೆಯಲಾಗಿದೆ ಎಂದೂ ಹೇಳಿದ್ದಾರೆ.

೫ ಮದರಸಗಳು ಮುಚ್ಚಿದವು !- ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ

ಈ ಪ್ರಕರಣದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು, ಈ ಹಿಂದೆ ಮದರಸಾಗಳ ವಿಚಾರಣೆ ನಡೆಸುವ ಆದೇಶ ನೀಡಲಾಗಿದೆ. ವಿಚಾರಣೆಯ ನಂತರ ೫ ಮದರಸಾಗಳು ಕೂಡ ಮುಚ್ಚಲಾಗಿದೆ. ಮದರಸಾಗಳಲ್ಲಿ ಶಿಕ್ಷಣ ಪಡೆಯುವ ಮುಸಲ್ಮಾನನೇತರ ಹುಡುಗರಿಗೆ ಇತರ ಶಾಲೆಗಳಿಗೆ ಕಳುಹಿಸಲಾಗುವುದು ಹಾಗೂ ಯಾವ ಪರಿಸ್ಥಿತಿಯಿಂದ ಈ ವಿದ್ಯಾರ್ಥಿಗಳಿಗೆ ಮದರಸಾದಲ್ಲಿ ಪ್ರವೇಶ ಪಡೆಯಬೇಕಾಯಿತು ? ಇದರ ವಿಚಾರಣೆ ಸಹ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಉತ್ತರಾಖಂಡದಂತಹ ದೇವ ಭೂಮಿಯ ರಾಜ್ಯದಲ್ಲಿ ಈ ಪರಿಸ್ಥಿತಿ ಎಂದರೆ ದೇಶದಲ್ಲಿನ ಇತರ ರಾಜ್ಯಗಳಲ್ಲಿ ಯಾವ ಪರಿಸ್ಥಿತಿ ಇರಬಹುದು ? ಇದರ ಕಲ್ಪನೆ ಕೂಡ ಮಾಡಲಾಗದು !
  • ಭಾಜಪ ಆಡಳಿತ ಇರುವ ರಾಜ್ಯದಲ್ಲಿ ಈ ಪರಿಸ್ಥಿತಿ ಆಗಿದ್ದರೇ ಇತರ ಹಿಂದುತ್ವ ವಿರೋಧಿ ರಾಜ್ಯಗಳಲ್ಲಿ ಯಾವ ಪರಿಸ್ಥಿತಿ ಇರುವುದು, ಇದರ ಕಲ್ಪನೆ ಕೂಡ ಮಾಡಲಾಗದು !