ಇಸ್ರೋದ ಮಾಜಿ ಅಧ್ಯಕ್ಷ ಕೆ. ಸಿವನ ಇವರ ಸಂದರ್ಭದ ವಿವಾದದಿಂದಾಗಿ ನಿರ್ಣಯ
ತಿರುವನಂತಪುರಂ (ಕೇರಳ) – ಇಸ್ರೋದ ಅಧ್ಯಕ್ಷ ಎಸ್. ಸೋಮನಾಥನ್ ಇವರು ‘ನೀಲಾವು ಕುಡೀಚಾ ಸಿಂಹಗಲ್ (ಚಂದ್ರ ಕುಡಿದಿರುವ ಸಿಂಹ) ಈ ಮಲ್ಯಾಳಮ್ ಭಾಷೆಯಲ್ಲಿನ ಆತ್ಮ ಚರಿತ್ರೆ ಮುಂದಿನ ವಾರದಲ್ಲಿ ಪ್ರಕಾಶನವಾಗುವುದಿತ್ತು. ಆದರೆ ಈ ಪ್ರಕಾಶನ ಅವರು ಸ್ಥಗಿತಗೊಳಿಸಿದ್ದಾರೆ. ಈ ಆತ್ಮ ಚರಿತ್ರೆಯಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಕೆ. ಸಿವನ್ ಇವರನ್ನು ಟೀಕಿಸಲಾಗಿದೆ ಎಂದು ಅನೇಕರು ದಾವೆ ಮಾಡಿದ್ದರು. ಆದ್ದರಿಂದ ವಿವಾದ ನಿರ್ಮಾಣವಾಗಿತ್ತು, ಪರಿಣಾಮವಾಗಿ ಅವರು ಪ್ರಕಾಶನ ಸ್ಥಗಿತಗೊಳಿಸಿದ್ದಾರೆ. ಎಸ್. ಸೋಮನಾಥನ್ ಇವರು ಇಸ್ರೋದ ಅಧ್ಯಕ್ಷ ಸ್ಥಾನದಲ್ಲಿ ನೇಮಕಗೊಳಿಸಿರುವ ಪ್ರಕ್ರಿಯೆಯಲ್ಲಿ ಕೆ. ಸಿವನ್ (ಇಸ್ರೋದ ಮಾಜಿ ಅಧ್ಯಕ್ಷ) ಹಸ್ತಕ್ಷೇಪ ಮಾಡಿದ್ದರು, ಎಂದು ಈ ಪುಸ್ತಕದಲ್ಲಿ ದಾವೆ ಮಾಡಿರುವ ಆರೋಪ ಮಾಡಲಾಗುತ್ತಿದೆ. ಈ ವಿಷಯದ ಬಗ್ಗೆ ಎಸ್. ಸೋಮನಾಥನ್ ಇವರು, ಪುಸ್ತಕದ ಪ್ರಕಾಶನದ ಮೊದಲೇ ಪ್ರಕಾಶಕರು ಪುಸ್ತಕದ ಪ್ರತಿ ಯಾರಿಗಾದರು ನೀಡಿರುವ ಬಗ್ಗೆ ವಾದ ನಿರ್ಮಾಣವಾಗಿದೆ. ಆದ್ದರಿಂದ ಈ ಪುಸ್ತಕ ಪ್ರಕಾಶನ ನಿಲ್ಲಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ.
ಟೀಕಿಸುವುದಕ್ಕಾಗಿ ಅಲ್ಲ ಜನರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಆತ್ಮಚರಿತ್ರೆ ಬರೆಯಲಾಗಿದೆ ! – ಎಸ್ ಸೋಮನಾಥ
ಎಸ್ ಸೋಮನಾಥ ಇವರು, ನಾನು ಈ ಪುಸ್ತಕದಿಂದ ಯಾರನ್ನು ವೈಯಕ್ತಿಕವಾಗಿ ಗುರಿ ಮಾಡಿಲ್ಲ. ಮಹತ್ವದ ಸ್ಥಾನದಲ್ಲಿರುವ ವ್ಯಕ್ತಿಗಳಿಗೆ ಅನೇಕ ಸವಾಲಗಳನ್ನು ಎದುರಿಸಬೇಕಾಗುತ್ತದೆ. ಯಾವುದಾದರೂ ಸಂಸ್ಥೆಯಲ್ಲಿ ಸ್ಥಾನ ಪಡೆಯುವುದಕ್ಕಾಗಿ ಕೂಡ ಅನೇಕ ಸವಾಲುಗಳು ಇರುತ್ತವೆ. ಈ ಸವಾಲುಗಳು ಪ್ರತಿಯೊಬ್ಬರೂ ಎದುರಿಸಬೇಕಾಗುತ್ತದೆ. ಒಂದೇ ಸ್ಥಾನಕ್ಕಾಗಿ ಅನೇಕ ವ್ಯಕ್ತಿಗಳು ಅರ್ಹರು ಇರಬಹುದು. ನಾನು ಇದೇ ಅಂಶ ಪುಸ್ತಕದಲ್ಲಿ ಮಂಡಿಸುವ ಪ್ರಯತ್ನ ಮಾಡಿದ್ದೇನೆ. ನಾನು ಈ ಸಂದರ್ಭದಲ್ಲಿ ಯಾವ ವ್ಯಕ್ತಿಯನ್ನು ಕೂಡ ಗುರಿ ಮಾಡಿಲ್ಲ. ಜೀವನದಲ್ಲಿನ ಸವಾಲುಗಳು ಮತ್ತು ಅಡಚಣೆಗಳನ್ನು ಎದುರಿಸಿ ಯಶಸ್ವಿಯಾಗಲು ಪ್ರಯತ್ನ ಮಾಡುವ ಜನರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಆತ್ಮಚರಿತ್ರೆ ಬರೆದಿದ್ದು ಯಾರನ್ನು ಟೀಕಿಸುವ ಉದ್ದೇಶದಿಂದ ಅಲ್ಲ, ಎಂದು ಅವರು ಸ್ಪಷ್ಟಪಡಿಸಿದರು.