ಮಣಿಪುರದಲ್ಲಿ ಸೇನಾ ನೆಲೆಯ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ದೋಚಲು ಯತ್ನಿಸಿದ ಗುಂಪು!

ಇಂಫಾಲ (ಮಣಿಪುರ) – ಇಲ್ಲಿನ ಮಣಿಪುರ ರೈಫಲ್ಸ್ ನೆಲೆಯ ಮೇಲೆ ನವೆಂಬರ್ 1ರಂದು ಗುಂಪೊಂದು ದಾಳಿ ಮಾಡಿ ಶಸ್ತ್ರಾಸ್ತ್ರಗಳನ್ನು ದೋಚಲು ಯತ್ನಿಸಿದೆ. ಈ ವೇಳೆ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚದುರಿಸಿದರು. ಈ ಗಲಾಟೆಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಈ ಘಟನೆಯ ನಂತರ ಇಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇದರೊಂದಿಗೆ,ಬುಡಕಟ್ಟು ವಿದ್ಯಾರ್ಥಿಗಳ ಸಂಘವು ತೆಂಗನೌಪಾಲ್ ಜಿಲ್ಲೆಯ ಮೊರೆಹ್ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಕಮಾಂಡೋಗಳನ್ನು ನಿಯೋಜಿಸಿರುವುದನ್ನು ವಿರೋಧಿಸಿ ನವೆಂಬರ್ 1 ರ ರಾತ್ರಿಯಿಂದ 48 ಗಂಟೆಗಳ ಬಂದ್ ಘೋಷಿಸಿದೆ.