ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾ ಒಂದು ಹೊಸ ಪರಮಾಣು ಬಾಂಬ್ ತಯಾರಿಸುವ ಸಿದ್ಧತೆಯಲ್ಲಿದೆ. ಅಮೇರಿಕಾದ ಪ್ರಸಾರ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಈ ಬಾಂಬ್ ಎರಡನೆಯ ಮಹಾಯುದ್ಧದಲ್ಲಿ ಅಮೆರಿಕಾದಿಂದ ಜಪಾನನ ಹಿರೋಶಿಮಾನ ನಗರದ ಮೇಲೆ ಹಾಕಲಾದ ಬಾಂಬ್ ಗಿಂತಲೂ ೨೪ ಪಟ್ಟು ಹೆಚ್ಚು ಶಕ್ತಿಶಾಲಿ ಆಗಿರಲಿದೆ.
ಅಮೇರಿಕಾ ರಕ್ಷಣಾ ಇಲಾಖೆಯು ಇದರ ಸಂದರ್ಭದಲ್ಲಿ ಮಾಹಿತಿ ನೀಡಿದೆ. ಅದಕ್ಕಾಗಿ ಬೇಕಾಗುವ ನಿಧಿ ಪೂರೈಕೆಯ ಪ್ರಕ್ರಿಯೆ ಕೂಡ ಆರಂಭವಾಗಿದೆ. ಇದು ಬೀ ೬೧ ನ್ಯೂಕ್ಲಿಯರ್ ಗ್ರಾವಿಟಿ ಬಾಂಬ್ ಎಂಬ ಈಗಿರುವ ಬಾಂಬ್ ನ ಆಧುನಿಕ ರೂಪವಾಗಿದ್ದು ಬೀ ೬೧-೧೩ ಎಂದು ಈ ಹೊಸ ಬಾಂಬ್ ನ ಹೆಸರಿರಲಿದೆ.
ಅಮೇರಿಕಾದ ಅಂತರಾಷ್ಟ್ರೀಯ ರಕ್ಷಣಾ ನೀತಿಯ ಉಪ ಕಾರ್ಯದರ್ಶಿ ಜಾನ್ ಪ್ಲಂಬ ಇವರು, ಬದಲಾಗುತ್ತಿರುವ ರಕ್ಷಣಾ ವಾತಾವರಣ ಮತ್ತು ವಿರೋಧಿಗಳಿಂದ ಹೆಚ್ಚುತ್ತಿರುವ ತೊಂದರೆ, ಇವೆಲ್ಲವುಗಳನ್ನು ಗಮನದಲ್ಲಿರಿಸಿ ನೋಡುತ್ತ ಈ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಹಿರೋಶಿಮಾ ಮತ್ತು ನಾಗಾಸಾಕಿಗಳ ಮೇಲೆ ಹಾಕಿದ ಬಾಂಬ್ ಜೊತೆಗೆ ತುಲನೆ !
ಹೊಸ ಬಾಂಬನ ತೂಕ ೩೬೦ ಕಿಲೋ ಟನ್ ಇರಲಿದೆ. ದ್ವಿತೀಯ ಮಹಾಯುದ್ಧದಲ್ಲಿ ಹಿರೋಶಿಮಾದ ಮೇಲೆ ಹಾಕಲಾದ ಬಾಂಬ್ ನ ತೂಕ ೧೫ ಕಿಲೋ ಟನ್ ಆಗಿತ್ತು, ಹಾಗೂ ನಾಗಾಸಾಕಿ ಮೇಲೆ ಹಾಕಿರುವ ಬಾಂಬ್ ನ ತೂಕ ೨೫ ಕಿಲೋ ಆಗಿತ್ತು. ಇದರಿಂದ ಹೊಸ ಬಾಂಬ್ ಇದು ಅನುಕ್ರಮವಾಗಿ ೨೪ ಪಟ್ಟು ಮತ್ತು ೧೪ ಪಟ್ಟು ಹೆಚ್ಚು ಪ್ರಮಾಣದಲ್ಲಿ ಇರುವುದು. ಇದರ ಜೊತೆಗೆ ತಂತ್ರಜ್ಞಾನದ ದೃಷ್ಟಿಯಿಂದ ಈ ಬಾಂಬ್ ಆಧುನಿಕ ರಕ್ಷಣೆ ಮತ್ತು ನಿಖರತೆಯ ಸಂದರ್ಭದಲ್ಲಿ ಹೆಚ್ಚು ಶಕ್ತಿಶಾಲಿಯಾಗಿರುವುದು.
ಸಂಪಾದಕೀಯ ನಿಲುವುರಷ್ಯಾ, ಉತ್ತರ ಕೋರಿಯಾ ಅಥವಾ ಇರಾನ್ ಇವರು ಈ ದೃಷ್ಟಿಯಿಂದ ಏನಾದರೂ ಮಾಡದಿದ್ದರೆ, ಆಗ ಪಶ್ಚಿಮ ಯುರೋಪ , ಕೆನಡಾ, ಆಸ್ಟ್ರೇಲಿಯಾ ಇವರಂತಹ ಶಕ್ತಿಗಳು ಆಕಾಶ ಪಾತಾಳ ಒಂದು ಮಾಡುತ್ತಾ ಅದನ್ನು ವಿರೋಧಿಸುತ್ತಿದ್ದವು. ಈಗ ಮಾತ್ರ ಯಾರೂ ಬಾಯಿಯಿಂದ ಒಂದು ಚಕಾರ ಶಬ್ದ ಕೂಡ ತೆಗೆಯಲಾರರು, ಇದನ್ನು ತಿಳಿದುಕೊಳ್ಳಿ ! |