‘ಇಸ್ರೇಲ್ ಅಮಾಯಕ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ! (ಅಂತೆ) – ಸೋನಿಯಾ ಗಾಂಧಿ

  • ಇಸ್ರೇಲ್ ಹಮಾಸ್ ಯುದ್ಧದ ಕುರಿತು ಸೋನಿಯಾ ಗಾಂಧಿ ಇವರಿಂದ ಲೇಖನ

  • ಹಮಾಸ್ ನ ದಾಳಿಗೆ ಅಮಾನುಷ ಎಂದು ಉಲ್ಲೇಖ !

ನವ ದೆಹಲಿ – ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಬಗ್ಗೆ ಲೇಖನ ಬರೆದಿದ್ದಾರೆ. ‘ದ ಹಿಂದೂ’ ಈ ದೈನಿಕದಲ್ಲಿ ಪ್ರಸಿದ್ಧವಾಗಿರುವ ಈ ಲೇಖನದಲ್ಲಿ ಅವರು ಹಮಾಸದಿಂದ ಅಕ್ಟೋಬರ್ ೭ ರಂದು ಇಸ್ರೇಲ್ ಮೇಲಿನ ದಾಳಿಗೆ ‘ಅಮಾನುಷ’ ಎಂದು ಹೇಳಿದ್ದಾರೆ. ‘ಈ ದಾಳಿಯಲ್ಲಿ ಒಂದು ಸಾವಿರಗಿಂತಲೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ದಾಳಿ ಇಸ್ರೇಲ್ ಗಾಗಿ ವಿನಾಶಕಾರಿ ಆಗಿತ್ತು’, ಹೀಗೂ ಅವರು ಸ್ಪಷ್ಟಪಡಿಸಿದ್ದಾರೆ. ಇದಲ್ಲದೆ ಅವರು ಗಾಝಾ ಮೇಲೆ ಇಸ್ರೇಲ್ ನಿಂದ ನಡೆಯುವ ದಾಳಿಯ ಬಗ್ಗೆ ಕೂಡ ಪ್ರಶ್ನೆ ಎತ್ತುತ್ತಾ ‘ಅಮಾಯಕ ಜನರ ಮೇಲೆ ಸೇಡು ತೀರಿಸಿಕೊಳ್ಳಲಾಗುತ್ತಿದೆ’ ಎಂದು ಟೀಕಿಸಿದ್ದಾರೆ.

ಸೋನಿಯಾ ಗಾಂಧಿಯವರು ಈ ಲೇಖನದಲ್ಲಿ, ಇಸ್ರೇಲ್ ಈಗ ಸಂಪೂರ್ಣ ಶಕ್ತಿ ಒಗ್ಗೂಡಿಸಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಅಸಹಾಯಕ ಮತ್ತು ಅಮಾಯಕ ಜನರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. ಜಗತ್ತಿನಲ್ಲಿನ ಎಲ್ಲಕ್ಕಿಂತ ಶಕ್ತಿಶಾಲಿ ಶಸ್ತ್ರಾಸ್ತ್ರಗಳು ಮಕ್ಕಳು, ಮಹಿಳೆಯರು ಮತ್ತು ಪುರುಷರ ವಿರುದ್ಧ ಬಳಸಲಾಗುತ್ತಿದೆ. ಹಮಾಸ್ ನ ದಾಳಿಯ ಜೊತೆಗೆ ಅವರದ್ದು ಯಾವುದೇ ಸಂಬಂಧವಿಲ್ಲ, ಅಂತಹವರು ಹತರಾಗಿದ್ದಾರೆ. ನಾಗರಿಕರಿಗೆ ಆಸ್ಪತ್ರೆಗಳು ಸಾಲುತ್ತಿಲ್ಲ. ನೀರು, ಆಹಾರ ಮತ್ತು ವಿದ್ಯುತ್ ನಿರಾಕರಿಸಿರುವುದು ಪ್ಯಾಲೇಸ್ಟೈನ್ ಜನರಿಗಾಗಿ ಸಾಮೂಹಿಕ ಶಿಕ್ಷೆಗಿಂತಲೂ ಕಡಿಮೆ ಏನು ಅಲ್ಲ. ಇಸ್ರೇಲ್ ಸರಕಾರ ಹಮಾಸ್ ನ ಕೃತ್ಯದ ಪ್ಯಾಲೇಸ್ಟೈನ್ ಜನರ ಕೃತ್ಯದ ಜೊತೆಗೆ ತುಲನೆ ಮಾಡಿ ದೊಡ್ಡ ತಪ್ಪು ಮಾಡಿದೆ. ಹಮಾಸ್ ನ ನಾಶ ಮಾಡುವ ನಿರ್ಧಾರದಿಂದ ಇಸ್ರೇಲ್ ಗಾಝಾದಲ್ಲಿನ ಸಾಮಾನ್ಯ ಜನರನ್ನು ನಾಶ ಮಾಡಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

೧೯೮೯ ರಲ್ಲಿ ಜಿಹಾದಿ ಭಯೋತ್ಪಾದಕರು ಕಾಶ್ಮೀರದಿಂದ ಸಾವಿರಾರು ಅಮಾಯಕ ಹಿಂದುಗಳ ಹತ್ಯೆ ಮಾಡಿ ನಾಲ್ಕುವರೆ ಲಕ್ಷ ಅಮಾಯಕ ಹಿಂದುಗಳನ್ನು ಅಲ್ಲಿಂದ ಓಡಿಸಿ ಹಾಗೆಯೇ ಇಂದೂ ಕೂಡ ಜಿಹಾದಿ ಭಯೋತ್ಪಾದಕರಿಂದ ಭಾರತದಲ್ಲಿ ಬಾಂಬ್ ಸ್ಪೋಟ, ಗಲಭೆಗಳು, ಹತ್ಯೆ ಮುಂತಾದರ ಮೂಲಕ ಅಮಾಯಕ ಹಿಂದುಗಳ ಹತ್ಯೆ ಮಾಡಲಾಗುತ್ತಿದೆ. ಇದರ ಬಗ್ಗೆ ಸೋನಿಯಾ ಗಾಂಧಿ ‘ಜಿಹಾದಿ ಭಯೋತ್ಪಾದಕರು ಅಮಾಯಕ ಹಿಂದುಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ’, ಹೀಗೆ ಲೇಖನ ಬರೆಯಬೇಕೆಂದು ಏಕೆ ಅನಿಸಲಿಲ್ಲ ?

ಇಸ್ರೇಲ್ ಅಮಾಯಕ ಜನರ ಮೇಲೆ ಅಲ್ಲ, ಹಮಾಸ್ ನ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ! ಈ ಕಾರ್ಯಾಚರಣೆಯಲ್ಲಿ ಒಣ ಕಟ್ಟಿಗೆ ಜೊತೆಗೆ ಹಸಿ ಕಟ್ಟಿಗೆಯೂ ಉರಿಯುತ್ತಿದೆ; ಕಾರಣ ಹಮಾಸ್ ಸ್ವರಕ್ಷಣೆಗಾಗಿ ಜನರನ್ನು ಗುರಾಣಿ ಮಾಡಿಕೊಂಡಿದ್ದರಿಂದ ಸಾವನ್ನಪ್ಪುತ್ತಿದ್ದಾರೆ. ಇದರ ಬಗ್ಗೆ ಸೋನಿಯಾ ಗಾಂಧಿ ಇವರು ಹಮಾಸೆಗೆ ಪ್ರಶ್ನೆ ಕೇಳಬೇಕು !