ಯುವತಿಯ ಕುಟುಂಬದವರಿಂದ ಹಿಂದೂ ಯುವಕ ಮತ್ತು ಅವನ ಕುಟುಂಬದವರಿಗೆ ಜೀವ ಬೆದರಿಕೆ
ದೆಹಲಿ – ಇಲ್ಲಿಯ ಗುಲ್ಪಶಾ ಹೆಸರಿನ ಓರ್ವ ಮುಸ್ಲಿಮ ಯುವತಿ ಘರವಾಪಸಿ ಮಾಡಿ ಆಕಾಶ ಹೆಸರಿನ ಹಿಂದೂ ಪ್ರಿಯಕರನ ಜೊತೆಗೆ ಜುಲೈ ೨೦೨೩ ರಲ್ಲಿ ವಿವಾಹವಾಗಿದ್ದಳು. ಸ್ನೇಹ ಎಂದು ನಾಮಕರಣ ಮಾಡಿಕೊಂಡಿರುವ ಸ್ನೇಹ ಮತ್ತು ಆಕೆಯ ಪತಿ ಆಕಾಶ ರಾಜಪೂತ ಇವರು ಸ್ನೇಹಳ ಮುಸಲ್ಮಾನ ಕುಟುಂಬದವರು ಆಕಾಶನಿಗೆ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಸ್ನೇಹ ಮತ್ತು ಆಕಾಶ ಇವರು ಪೊಲೀಸರಿಗೆ ದೂರು ನೀಡಿ ರಕ್ಷಣೆ ನೀಡಲು ಒತ್ತಾಯಿಸಿದ್ದಾರೆ. ಆದರೆ ಪೊಲೀಸರು ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕಾಶ ಹೇಳಿದ್ದಾನೆ. (ಸಂಬಂಧಿತ ಅಧಿಕಾರಿಗಳ ಮೇಲೆ ಅವರ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ! – ಸಂಪಾದಕರು) ಈ ಪ್ರಕರಣ ದೆಹಲಿಯಲ್ಲಿನ ಸುಲ್ತಾನಪುರಿ ಪ್ರದೇಶದಲ್ಲಿನದಾಗಿದೆ .
೧. ಇಬ್ಬರೂ ರಾಜಸ್ಥಾನದ ಕೋಟಾಗೆ ಹೋಗಿ ವಿವಾಹವಾಗಿದ್ದರು.
೨. ಆಕಾಶ ರಜಪುತ್ ಇವರು ಈ ಪ್ರಕರಣದ ಬಗ್ಗೆ ಇತ್ತೀಚಿಗೆ ಒಂದು ಪತ್ರ ಪ್ರಸಾರ ಮಾಡಿ ನಾನು ಮತ್ತು ಸ್ನೇಹ (ಪೂರ್ವಾಶ್ರಮದ ಗುಲ್ಫಾಶ್) ಮೂರು ವರ್ಷದಿಂದ ಪ್ರೀತಿಸುತ್ತಿದ್ದು ನಮ್ಮ ವೈವಾಹಿಕ ಜೀವನ ಸುಖವಾಗಿದೆ.. ನಾನು ಸ್ನೇಹಾಳನ್ನು ಬಿಡದಿದ್ದರೆ, ಅವರು ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವದಿಂದ ಕೊಲ್ಲುವುದಾಗಿ ಬೆದರಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
೩. ಸ್ನೇಹ ಪೊಲೀಸರಿಗೆ ದೂರು ನೀಡುವಾಗ ಆಕೆಯ ತಂದೆ ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು ಎಂದು ಹೇಳಿದ್ದಾಳೆ. (ಇದು ಮತಾಂಧರ ಕಾಮುಕ ಮಾನಸಿಕತೆ ! – ಸಂಪಾದಕರು)
೪. ಸ್ನೇಹಾಳ ತಾಯಿ ನಸರಿನ್ ಇವಳು ಆಕಾಶನು ಸ್ನೇಹಾಳ ಮೇಲೆ ಬಲಾತ್ಕಾರ ಮಾಡಿದ್ದಾನೆ ಎಂದು ಸುಳ್ಳು ದೂರು ದಾಖಲಿಸಿದ್ದಾಳೆ ಎಂದು ಆಕಾಶ ಹೇಳಿದ್ದಾನೆ. ಇದರ ವಿರುದ್ಧ ಸ್ನೇಹಾ ಹಿಂದೂ ಧರ್ಮ ಸ್ವೀಕರಿಸಿರುವುದರಿಂದ ನಾನು ಬಹಳ ಆನಂದದಿಂದ ಇದ್ದೇನೆ ಎಂದು ಹೇಳಿದಳು.
ಸಂಪಾದಕೀಯ ನಿಲುವುಪ್ರೀತಿ ಇದು ಪ್ರೀತಿಯಾಗಿರುತ್ತದೆ ಮತ್ತು ಪ್ರೀತಿಯನ್ನು ಧರ್ಮದಲ್ಲಿ ಬಂಧಿಸಬಾರದು, ಎಂದು ಹಿಂದೂಗಳಿಗೆ ಉಪದೇಶ ಮಾಡುವ ಪ್ರಗತಿ (ಅಧೋಗತಿ)ಪರರು ಇಂತಹ ಘಟನೆಯ ಸಮಯದಲ್ಲಿ ಯಾವ ಬಿಲದಲ್ಲಿ ಅಡಗಿರುತ್ತಾರೆ ? |